

ಬೆಂಗಳೂರು: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ 50ನೇ ವಸಂತಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಸಂಭ್ರಮಕ್ಕೆ ಹಲವು ಸಿನಿಮಾತಂಡಗಳು ಟೀಸರ್, ಪೋಸ್ಟರ್ ಉಡುಗೊರೆ ನೀಡಿದರೆ, ಅಭಿಮಾನಿಗಳು ನೆಚ್ಚಿನ ನಟನ ಜತೆಗಿರುವ ಫೋಟೋ ಹಂಚಿಕೊಂಡು ಶುಭಾಶಯ ಕೋರುತ್ತಿದ್ದಾರೆ. ಇತ್ತ ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ ಸಿನಿಮಾ ಮಂದಿಯೂ ಕಿಚ್ಚನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಈ ಸಲವೂ ಹುಟ್ಟುಹಬ್ಬದ ಆಚರಣೆಗೆ ಸುದೀಪ್ ಬ್ರೇಕ್ ಹಾಕಿದ್ದು, ಇತ್ತೀಚೆಗಷ್ಟೇ ಆಚರಣೆ ಇಲ್ಲ ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಹಾಗಾದರೆ, ಯಾರೆಲ್ಲ ಶುಭಾಶಯ ಕೋರಿದ್ದಾರೆ. ಇಲ್ಲಿದೆ ಮಾಹಿತಿ..