ಸ್ಯಾಂಡಲ್​​ವುಡ್​ ಮಾದಕ ವ್ಯಸನಿಗಳ ಹೆಸರು ಹೇಳಿದ್ದ ಇಂದ್ರಜಿತ್​ ಲಂಕೇಶ್​ಗೆ ಸಿಸಿಬಿ ನೋಟಿಸ್...

iNDRAJIT
Published on

ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾಕ್ಕೆ ಸಂಬಂಧಪಟ್ಟಂತೆ ಇಂದ್ರಜಿತ್​ ಲಂಕೇಶ್​​​ ಅವರು 10-15 ಹೆಸರುಗಳನ್ನು ಸಿಸಿಬಿ ಅಧಿಕಾರಿಗಳಿಗೆ ಹೇಳಿದ್ದಾಗಿ ತಿಳಿಸಿದ್ದಾರೆ.

ಮೊನ್ನೆ ಲ್ಯಾಟ್​ಟಾಪ್​, ಫೈಲ್​​ಗಳೊಂದಿಗೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್​ ಲಂಕೇಶ್​​​ ಅವರು ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಜಾಲವಿದೆ. ಹಲವು ಪ್ರಮುಖ ನಟನಟಿಯರೇ ಇದರಲ್ಲಿ ಭಾಗಿಯಾಗಿದ್ದಾರೆ. ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ. ನನಗೆ ಗೊತ್ತಿರುವ ಎಲ್ಲ ವಿಚಾರಗಳನ್ನೂ, ಮಾಹಿತಿಗಳನ್ನೂ ಸಿಸಿಬಿ ಅಧಿಕಾರಿಗಳಿಗೆ ನೀಡಿದ್ದೇನೆ ಎಂದು ಹೇಳಿದ್ದರು.

ಆದರೆ ಸಿಸಿಬಿ ಆಯುಕ್ತ ಸಂದೀಪ್​ ಪಾಟೀಲ್​ ಅವರು, ಇಂದ್ರಜಿತ್​ ನಮಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ಹೆಸರುಗಳನ್ನು ಹೇಳಿದ್ದಾರೆ. ಅದರೊಂದಿಗೆ ಕೆಲವು ವಿಚಾರಗಳನ್ನೂ ತಿಳಿಸಿದ್ದಾರೆ ಹೊರತು ಸಾಕ್ಷಿಯನ್ನು ಒದಗಿಸಿಲ್ಲ ಎಂದಿದ್ದರು. ಇದೀಗ ಸಿಸಿಬಿ ಮತ್ತೆ ಇಂದ್ರಜಿತ್​ ಲಂಕೇಶ್​ ಗೆ ನೋಟಿಸ್​ ನೀಡಿದೆ. ನೀವು ಮಾಡಿರುವ ಆರೋಪಗಳಿಗೆ ಪೂರಕವಾಗಿ ಸೂಕ್ತ ದಾಖಲೆ ನೀಡಿ ಎಂದು ಹೇಳಿದೆ. ಇದನ್ನೂ ಓದಿ: ಸಿಸಿಬಿ ಕಚೇರಿಗೆ ಬಂದ ಇಂದ್ರಜಿತ್​ ಲಂಕೇಶ್​; ಡ್ರಗ್ಸ್​ ದಂಧೆಯಲ್ಲಿರುವ ಎಲ್ಲರ ಹೆಸರನ್ನೂ ಹೇಳ್ತಾರಂತೆ !

ನೋಟಿಸ್​ಗೆ ಉತ್ತರಿಸಲು ಇಂದ್ರಜಿತ್​ ಲಂಕೇಶ್​ ನಾಳೆ ಬೆಳಗ್ಗೆ 11ಗಂಟೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net