

ಬೆಂಗಳೂರು: ಸಿಗರೇಟ್ ಸೇದುವ ವಿಚಾರಕ್ಕೆ ಸೆಲೆಬ್ರಿಟಿಯೊಬ್ಬ ಕಿರಿಕ್ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರ ಸಾಣೆಗುರವನಹಳ್ಳಿ ಸರ್ಕಲ್ನಲ್ಲಿ ನಡೆದಿದೆ.
ಡ್ಯಾನ್ಸ್ ರಿಯಾಲಿಟಿ ಶೋ ಸ್ಫರ್ಧಿ ರಜತ್ ವಿರುದ್ಧ ಕಿರಿಕ್ ಮಾಡಿರುವ ಆರೋಪ ಕೇಳಿಬಂದಿದೆ. ಧೂಮಪಾನ ಮಾಡಲು ಅಂಗಡಿಯ ಬಾಗಿಲ ಮುಂದೆಯೇ ತನ್ನ ಐಷಾರಾಮಿ ಕಾರ್ ಪಾರ್ಕಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅಂಗಡಿಯವನ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ.
ರಜತ್ ಕನ್ನಡ ಕಿರುತೆರೆಯ ಕೆಲವು ರಿಯಾಲಿಟಿ ಶೋ ನಲ್ಲಿ ಸ್ಫರ್ಧಿಯಾಗಿದ್ದರು. ವ್ಯಾಪಾರದ ಸಮಯದಲ್ಲಿ ಅಂಗಡಿ ಮುಂದೆ ಕಾರ್ ಪಾರ್ಕ್ ಮಾಡಿ ಧೂಮಪಾನ ಮಾಡಲು ಪಕ್ಕಕ್ಕೆ ಹೋಗಿದ್ದರಂತೆ. ಈ ವೇಳೆ ಕಾರ್ ಸೈಡಿಗೆ ಹಾಕಿ ಎಂದು ಅಂಗಡಿ ಮಾಲೀಕ ಕಿರಣ್ ರಾಜ್ ಹೇಳಿದ್ದಕ್ಕೆ ಕಿರಣ್ ಮತ್ತು ಅವರ ತಾಯಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಘಟನೆ ಸಂಬಂಧ ಸದ್ಯ ನಗರದ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ