

ಪ್ರತಿಷ್ಠಿತ ಕಾನ್ ಚಿತ್ರೋತ್ಸವದ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ನಾಳೆಯಿಂದ (ಮೇ 17) ಮೇ 28ರವರೆಗೂ ನಡೆಯುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿ ಭಾರತೀಯ ಚಿತ್ರರಂಗದಿಂದ ಹಲವು ನಟ-ನಟಿಯರು ಭಾಗವಹಿಸುತ್ತಿದ್ದಾರೆ.
ಈ ಬಾರಿ ಸ್ಪರ್ಧಾತ್ಮಕ ವಿಭಾಗದ ತೀರ್ಪುಗಾರರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಇರುವ ವಿಷಯ ಗೊತ್ತೇ ಇದೆ. ಅದರ ಜತೆಗೆ ಅವರು ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಡೆಯುವ ರೆಡ್ ಕಾರ್ಪೆಟ್ ನಡಿಗೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.
ದೀಪಿಕಾ ಜತೆಗೆ ರೆಡ್ ಕಾರ್ಪೆಟ್ ಮೇಲೆ ನಡೆಯುವ ಭಾರತದ ಇನ್ನಿತರ ಸೆಲೆಬ್ರಿಟಿಗಳ ಪೈಕಿ ಎ.ಆರ್. ರೆಹಮಾನ್, ಪೂಜಾ ಹೆಗ್ಡೆ, ನಯನತಾರಾ, ಆರ್. ಮಾಧವನ್, ನವಾಜುದ್ದೀನ್ ಸಿದ್ದೀಖಿ ಮುಂತಾದವರಿದ್ದಾರೆ. ಈ ಬಾರಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ರೆಡ್ ಕಾರ್ಪೆಟ್ ಮೇಲೆ ನಡೆಯಬೇಕಿತ್ತು. ಆದರೆ, ಅಕ್ಷಯ್ಗೆ ಕರೊನಾ ಪಾಸಿಟಿವ್ ಆಗಿರುವುದರಿಂದ, ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ. ಕಾನ್ ಚಿತ್ರೋತ್ಸವದಲ್ಲಿ ಮಾಧವನ್ ನಿರ್ದೇಶನದ "ರಾಕೆಟ್ರಿ - ದಿ ನಂಬಿಯಾರ್ ಎೆಕ್ಟ್' ಸೇರಿದಂತೆ ಹಲವು ಚಿತ್ರಗಳು ಪ್ರದರ್ಶನ ಅಗಲಿದೆ. ಇದಲ್ಲದೆ, ಕಮಲ್ ಹಾಸನ್ ಅಭಿನಯದ ತಮಿಳು ಚಿತ್ರ "ವಿಕ್ರಮ್'ನ ಟ್ರೇಲರ್ ಬಿಡಗುಡೆ ಆಗಲಿದೆ.