ಧನ್ವೀರ್​ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು 'ಬಂಪರ್' ಟೀಸರ್​

Bumper - Final
Published on

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಎಲ್ಲಾ ಮುಗಿದು ಬಿಡುಗಡೆಯಾಗಬೇಕಿತ್ತು ಧನ್ವೀರ್​ ಅಭಿನಯದ ಎರಡನೆಯ ಚಿತ್ರ 'ಬಂಪರ್​'. ಫೆಬ್ರವರಿಯಲ್ಲಿ ಮುಹೂರ್ತವಾಗಿ ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಯಿತು.

ಇದೀಗ ಎಲ್ಲಾ ಮುಗಿದು, ಚಿತ್ರೀಕರಣ ಚಟುವಟಿಕೆಗಳೆಲ್ಲಾ ಶುರುವಾಗುತ್ತಿದ್ದು, ಸದ್ಯದಲ್ಲೇ 'ಬಂಪರ್​' ಚಿತ್ರದ ಚಿತ್ರೀಕರಣ ಸಹ ಶುರುವಾಗಲಿದೆ. ಈ ಮಧ್ಯೆ, ಇಂದು ಧನ್ವೀರ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು ಟೀಸರ್​ನ್ನು ಗಿಫ್ಟ್​ ಆಗಿ ನೀಡಿದೆ.

ಕೆಲವೇ ದಿನಗಳ ಹಿಂದೆ ನಿರ್ದೇಶಕ ಸಂತು, ಟೀಸರ್​ನ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಿದ್ದರು. ಈಗ ನೇರವಾಗಿ ಟೀಸರ್​ ಬಿಡುಗಡೆ ಮಾಡಲಾಗಿದೆ. ಈ ಟೀಸರ್​ಗಾಗಿಯೇ, ಬೆಂಗಳೂರು, ಮೈಸೂರು ಸೇರಿ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ. ಅಜನೀಶ್​ ಲೋಕನಾಥ್​ ಬ್ಯಾಕ್​ಗ್ರೌಂಡ್​ ಮ್ಯೂಸಿಕ್​ ಕೊಟ್ಟರೆ, 'ಮಫ್ತಿ' ಖ್ಯಾತಿಯ ನವೀನ್​ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ಇನ್ನು ಈ ಚಿತ್ರವನ್ನು ಬರೆದು ನಿರ್ದೇಶಿಸುತ್ತಿರುವವರು ಹರಿ ಸಂತೋಷ್​. 'ಕಾಲೇಜ್​ ಕುಮಾರ್​', 'ಬಿಚ್ಚುಗತ್ತಿ' ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಸಂತು, ಇದೀಗ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಇನ್ನು 'ಭರಾಟೆ' ನಿರ್ಮಿಸಿದ್ದ ಸುಪ್ರೀತ್​ ಗೌಡ, ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net