ಪ್ರಭಾಸ್​ ಹೊಸ ಚಿತ್ರದ ಬಜೆಟ್​ ಎಷ್ಟು? ಕೇಳಿದ್ರೆ ಶಾಕ್​ ಆಗ್ತೀರಾ ...

Prabhas - Final
Published on

ಹೈದರಾಬಾದ್​: ಕಳೆದ ವರ್ಷ ಬಿಡುಗಡೆಯಾದ 'ಸಾಹೋ' ಚಿತ್ರವೇ ಕೊನೆ. ಆ ನಂತರ ಪ್ರಭಾಸ್​ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಈ ಮಧ್ಯೆ, ಪ್ರಭಾಸ್​ ಎರಡು ಹೊಸ ಚಿತ್ರಗಳನ್ನು ಬರೆಯುತ್ತಿದ್ದು, ಎರಡೂ ಚಿತ್ರಗಳು ತನ್ನದೇ ರೀತಿಯಲ್ಲಿ ದಾಖಲೆ ಬರೆಯುವುದಕ್ಕೆ ಸಜ್ಜಾಗಿವೆ.

ಈ ಪೈಕಿ ಒಂದು ಚಿತ್ರವನ್ನು ನಾಗ್​ಅಶ್ವಿನ್​ ಅವರು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರ ಭಾರತದ ಅತ್ಯಂತ ಕಾಸ್ಟ್ಲಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ, ಇಂಥದ್ದೊಂದು ಹೆಗ್ಗಳಿಕೆ ಮತ್ತು ದಾಖಲೆಯು ಶಂಕರ್​ ನಿರ್ದೇಶನದ '2.0' ಚಿತ್ರಕ್ಕಿತ್ತು. ಈಗ ಆ ಚಿತ್ರವನ್ನೂ, ಪ್ರಭಾಸ್​ ಅಭಿನಯದ ಹೊಸ ಚಿತ್ರ ಹಿಂದಕ್ಕೆ ಹಾಕಲಿದೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ, ಈ ಚಿತ್ರದ ಬಜೆಟ್​ ಎಷ್ಟು ಗೊತ್ತಾ? 400 ಕೋಟಿ ರೂಪಾಯಿಗಳಂತೆ. ಭಾರತದಲ್ಲಿ ಇದುವರೆಗೂ ಯಾವೊಂದು ಚಿತ್ರ ಸಹ ಇಷ್ಟೊಂದು ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾದ ಉದಾಹರಣೆ ಇರಲಿಲ್ಲ. ಈಗ ಪ್ರಭಾಸ್​ ಅಭಿನಯದ ಈ ಚಿತ್ರ ಹಿಂದಿಲ್ಲ ಎಲ್ಲಾ ದಾಖಲೆಗಳನ್ನೂ ಹಿಂದಕ್ಕೆ ಹಾಕುವ ಸಾಧ್ಯತೆ ಇದೆ.

ವೈಜಯಂತಿ ಮೂವೀಸ್​ ಸಂಸ್ಥೆಯಡಿ ಅಶ್ವಿನಿ ದತ್​ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದು, ಅಮಿತಾಭ್​ ಬಚ್ಚನ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹಾಲಿವುಡ್​ನ ಹಲವು ಜನಪ್ರಿಯ ತಂತ್ರಜ್ಱರು ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಇನ್ನೊಂದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net