ಜೂಲಿಯಟ್ ಆದ ಬೃಂದಾ

Brinda
Published on

ಬೆಂಗಳೂರು: ‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಗಮನಸೆಳೆದ ಅಂಶಗಳ ಪೈಕಿ ನಾಯಕಿ ಬೃಂದಾ ಆಚಾರ್ಯ ಸಹ ಒಬ್ಬರು. ಆ ಚಿತ್ರದ ನಂತರ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬೃಂದಾ ಸದ್ದಿಲ್ಲದೆ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಅದೇ ‘ಜೂಲಿಯಟ್ 2’. ಕನ್ನಡ ಮತ್ತು ಮಲಯಾಳಂನಲ್ಲಿ ನಿರ್ವಣವಾಗಿರುವ ಈ ಚಿತ್ರವನ್ನು ವಿರಾಟ್ ಗೌಡ ಎನ್ನುವವರು ನಿರ್ದೇಶಸಿದ್ದಾರೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾಹಿತಿ ಹಂಚಿಕೊಂಡಿರುವ ಬೃಂದಾ, ‘‘ಪ್ರೇಮಂ ಪೂಜ್ಯಂ’ ನಂತರ ಬಹಳ ಕಥೆಗಳನ್ನು ಕೇಳಿದೆ. ಅದರಲ್ಲಿ ಇದು ಬಹಳ ಇಷ್ಟವಾಯಿತು. ಇದೊಂದು ಮಹಿಳಾ ಪ್ರಧಾನ ಚಿತ್ರ. ಕುದುರೆಮುಖದ ಕಾಡುಗಳಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಮುಕ್ಕಾಲು ಭಾಗದ ಚಿತ್ರೀಕರಣ ಟಾರ್ಚ್ ಲೈಟ್​ನಲ್ಲಿ ಮಾಡಿದ್ದೇವೆ. ಥ್ರಿಲ್ಲರ್ ಸಿನಿಮಾ ಇದಾಗಿದೆ‘ ಎಂದು ಹೇಳುತ್ತಾರೆಯೇ ಹೊರತು, ಕಥೆ ಬಿಟ್ಟು ಕೊಡುವುದಿಲ್ಲ. ಇದು ಎರಡು ಚಿತ್ರಗಳ ಸರಣಿಯಂತೆ. ಈ ಪೈಕಿ, ಮೊದಲು ‘ಜೂಲಿಯಟ್ 2’ ಚಿತ್ರ ಬಿಡುಗಡೆಯಾಗಲಿದೆಯಂತೆ.

‘ಮೊದಲಿಗೆ ಎರಡನೆಯ ಭಾಗವನ್ನು ಬಿಡುಗಡೆ ಮಾಡಲಾಗುತ್ತದೆ. ಆ ನಂತರ ‘ಜೂಲಿಯಟ್ 1’ ಬಿಡುಗಡೆಯಾಗುತ್ತದೆ. ಇದು ಎರಡು ಭಾಗಗಳಲ್ಲಿ ಹೇಳುವಂತಹ ಕಥೆ. ‘ಜೂಲಿಯಟ್ 2’ ನೋಡಿದರೆ, ಮೊದಲ ಭಾಗದಲ್ಲಿ ಏನಿರುತ್ತದೆ ಎಂಬ ಕುತೂಹಲ ಹೆಚ್ಚಾಗುತ್ತದೆ’ ಎನ್ನುತ್ತಾರೆ ಬೃಂದಾ. ಈ ಚಿತ್ರವನ್ನು ಲಿಖಿತ್ ಕೋಟ್ಯಾನ್ ನಿರ್ವಿುಸುತ್ತಿದ್ದಾರೆ. ಶೆಂಟೋ ವಿ ಆಂಟೋ ಎನ್ನುವವರು ಛಾಯಾಗ್ರಹಣ ಮಾಡಿದರೆ, ರವಿ ಬಸ್ರೂರು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net