ಮತ್ತೆ ಬೋಲ್ಡ್​ ಅವತಾರದಲ್ಲಿ ಬಂದ ಆಮೀರ್ ಖಾನ್ ಸೋದರ ಸೊಸೆ: ಜೈನ್ ಮೇರಿ ಖಾನ್ ಹಾಟ್​ ಫೋಟೋಗಳು ವೈರಲ್​! Zayn Marie Khan

ಬಾಲಿವುಡ್​ ಚಿತ್ರರಂಗದ ಪ್ರಯಾಣದಲ್ಲಿ ಏಳು-ಬೀಳುಗಳನ್ನು ಕಾಣುತ್ತಿದ್ದರೂ, ತಮ್ಮ ಅಪಾರ ಸೌಂದರ್ಯ ಹಾಗೂ ಗ್ಲಾಮರಸ್ ಫ್ಯಾಷನ್ ಸೆನ್ಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಆಮೀರ್ ಖಾನ್ ಸೋದರ ಸೊಸೆ ಹಾಗೂ ಉದಯೋನ್ಮುಖ ನಟಿ ಜೈನ್​ ಮೇರಿ ಖಾನ್ (Zayn Marie Khan) ಅವರು ಇತ್ತೀಚಿಗೆ ಹಾಟ್​ ಫೋಟೋಶೂಟ್​ ಮೂಲಕ ಸುದ್ದಿಯಲ್ಲಿದ್ದಾರೆ.
Zayn Marie Khan
ಬಾಲಿವುಡ್​ ನಟಿ ಜೈನ್​ ಮೇರಿ ಖಾನ್
Published on: 

ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ

ಜೈನ್​ ಮೇರಿ ಖಾನ್ ಅವರು ತೆಲುಗು ಮತ್ತು ಹಿಂದಿ ದ್ವಿಭಾಷಾ ಸಿನಿಮಾವಾದ 'ಡಕಾಯತ್​: ಎ ಲವ್ ಸ್ಟೋರಿ' (Dacoit: A Love Story) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಅಡಿ ಇಟ್ಟರು.

ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯ ಪಾತ್ರ

ಈ ಚಿತ್ರದಲ್ಲಿ ಅವರು ಎಸ್‌ಐ ಎಸ್. ಜಾನಕಿ (SI S. Janaki) ಎಂಬ ಶಕ್ತಿಶಾಲಿ ಹಾಗೂ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.

ಟಾಲಿವುಡ್‌ನಲ್ಲಿ ಗಳಿಸಿದ ಜನಪ್ರಿಯತೆ

ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ತಮ್ಮ ಅಭಿನಯದ ಮೂಲಕವೇ ಟಾಲಿವುಡ್‌ನಲ್ಲಿ ಉತ್ತಮ ಅಭಿಮಾನಿ ಬಳಗವನ್ನು ನಿರ್ಮಿಸಿಕೊಳ್ಳುವಲ್ಲಿ ಜೈನ್ ಯಶಸ್ವಿಯಾದರು.

ದೀಪಾವಳಿ ರ‍್ಯಾಂಪ್ ವಾಕ್

ಈ ಬಾರಿಯ ದೀಪಾವಳಿಯ ಸಂಭ್ರಮದ ಅಂಗವಾಗಿ ನಡೆದ ಫ್ಯಾಷನ್ ಶೋನಲ್ಲಿ ಅವರು ಕಣ್ಣುಕೋರೈಸುವ ತಿಳಿ ಗುಲಾಬಿ (ಸಾಫ್ಟ್ ಪಿಂಕ್) ಬಣ್ಣದ ಲೆಹೆಂಗಾ ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.

ಆಕರ್ಷಕ ಕಸೂತಿ ಹಾಗೂ ವಿನ್ಯಾಸ

ಶೈನಿಂಗ್ ಸಿಕ್ವಿನ್ಸ್ ಮತ್ತು ಹೂವಿನ ಕಸೂತಿಯಿಂದ (ಫ್ಲೋರಲ್ ಎಂಬ್ರಾಯ್ಡರಿ) ಕಂಗೊಳಿಸುತ್ತಿದ್ದ ಈ ಲೆಹೆಂಗಾದ ಜತೆಗೆ ಆಳವಾದ V-ನೆಕ್ ಹಾಗೂ ಬೀಡೆಡ್ ಟಸೆಲ್ ಹೆಮ್ ಹೊಂದಿದ್ದ ಬ್ಲೌಸ್ ಮತ್ತು ಲಘುವಾದ ಟ್ರಾನ್ಸ್‌ಪರೆಂಟ್ (ಶೀರ್) ದುಪಟ್ಟಾ ಅವರ ಲುಕ್ ಹೆಚ್ಚಿಸಿತ್ತು.

ಲೈಟ್ ಹಾಗೂ ಕ್ಯೂಟ್ ಮೇಕಪ್

ತಮ್ಮ ತೆರೆದ ಗುಂಗುರು ಕೂದಲಿನ (ವೇವಿ ಹೇರ್) ಜತೆಗೆ ಪೋಲ್ಕಿ ಡ್ರಾಪ್ ಓಲೆಗಳು, ಶೈನಿಂಗ್ ಕಣ್ಣಿನ ಮೇಕಪ್ ಹಾಗೂ ನ್ಯೂಡ್ ಲಿಪ್‌ಸ್ಟಿಕ್ ಧರಿಸಿ ಸರಳತೆ ಮತ್ತು ಗ್ಲಾಮರ್‌ನ ಹದವಾದ ಮಿಶ್ರಣವನ್ನು ಪ್ರದರ್ಶಿಸಿದರು.

ರ‍್ಯಾಂಪ್ ಮೇಲಿನ ಕಳೆ

ಪೀಚ್ ಬಣ್ಣದ ಬೆಳಕಿನ ವಾತಾವರಣದಲ್ಲಿ ರ‍್ಯಾಂಪ್ ಮೇಲೆ ಅತ್ಯಂತ ಸಂತೋಷ ಹಾಗೂ ಆತ್ಮವಿಶ್ವಾಸದಿಂದ ನಡೆದು ಬಂದ ಜೈನ್, ಪ್ರೇಕ್ಷಕರನ್ನು ತಮ್ಮತ್ತ ಸೆಳೆದರು.

ಕಾಮೆಂಟ್​ಗಳ ಸುರಿಮಳೆ

ಜೈನ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹಾಟ್​ ಫೋಟೋಗಳು ವೈರಲ್​ ಆಗಿದ್ದು, ಅದನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಫಿದಾ ಆಗಿದ್ದಾರೆ. ಕಾಮೆಂಟ್​ಗಳ ಮೂಲಕ ನಟಿಯ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.

ಮುಂದಿನ ಪ್ರಾಜೆಕ್ಟ್‌ಗಳ ನಿರೀಕ್ಷೆ

ಪ್ರಸ್ತುತ ಅವರ ಕೈಯಲ್ಲಿ ಹೊಸ ಸಿನಿಮಾಗಳು ಇಲ್ಲದಿದ್ದರೂ, ಅವರು ಗಳಿಸಿರುವ ಜನಪ್ರಿಯತೆ ಮತ್ತು ಗ್ಲಾಮರ್‌ನಿಂದಾಗಿ ಶೀಘ್ರದಲ್ಲೇ ಅವರಿಗೆ ದೊಡ್ಡ ಆಫರ್‌ಗಳು ಹುಡುಕಿಕೊಂಡು ಬರಲಿವೆ ಎನ್ನಲಾಗಿದೆ.