ಸಿನಿಮಾದ ಒಂದು ದೃಶ್ಯದ ಬಗ್ಗೆ ಮಾತನಾಡುತ್ತಾ ಸೆಹ್ವಾಗ್ ಭಾವುಕರಾಗಿದ್ದಾರೆ. ಸಿನಿಮಾದಲ್ಲಿ ಮಹಾರಾಜ್ ಜಿ ಹಾವುಗಳಿಂದ ಸುತ್ತುವರೆದಿರುವ ದೃಶ್ಯ ನನ್ನನ್ನು ತುಂಬಾ ಕಾಡಿತು. ಅವರು ಶಿವನಷ್ಟೇ ಮುಗ್ಧ ಎಂದು ಭಕ್ತನೊಬ್ಬ ಹೇಳಿದಾಗ, ನೀವು ಮುಗ್ಧರು, ನಮ್ಮ ಹೃದಯದಲ್ಲಿ ಏನಿರುತ್ತದೆಯೋ ಕಣ್ಣಿಗೆ ಅದೇ ಕಾಣುತ್ತದೆ ಎಂದು ಬಾಬಾ ಹೇಳುವ ಮಾತು ಮನಸ್ಸಿಗೆ ಆಳವಾಗಿ ನಾಟುತ್ತದೆ ಎಂದು ಸೆಹ್ವಾಗ್ ವಿವರಿಸಿದ್ದಾರೆ. ಅಲ್ಲದೆ, ನೀಮ್ ಕರೋಲಿ ಬಾಬಾ ಬಗ್ಗೆ ಈಗಾಗಲೇ ಗೊತ್ತಿದ್ದವರು ಈ ಸಿನಿಮಾ ನೋಡಿ, ಗೊತ್ತಿಲ್ಲದವರು ಇದನ್ನು ಖಂಡಿತವಾಗಿ ನೋಡಲೇಬೇಕು ಎಂದು ಕರೆ ನೀಡಿದ್ದಾರೆ, (ಏಜನ್ಸೀಸ್).