‘ರಾಮಾಯಣ’ಕ್ಕೂ ಮುನ್ನ ಇನ್ನೊಂದು ‘ರಾಮಾಯಣ’!: ಸೆ.25ಕ್ಕೆ ತೆರೆಗೆ ಬರಲಿದೆ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಚಿತ್ರ

ಮಹಾಕಾವ್ಯ ಶ್ರೀ ರಾಮಾಯಣ ಕಥಾ ಪೋಸ್ಟರ್
ಮಹಾಕಾವ್ಯ ಶ್ರೀ ರಾಮಾಯಣ ಕಥಾ ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ರಣಬೀರ್ ಕಪೂರ್ ರಾಮಾಯಣಕ್ಕೂ ಮುನ್ನ ಮತ್ತೊಂದು ರಾಮಾಯಣ ಕಥೆ ತೆರೆಗೆ
  • ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಸೆ.25ಕ್ಕೆ ರಿಲೀಸ್
  • ಟೀಸರ್ ರಿಲೀಸ್, ರಾಮ-ಸೀತೆ ಪಾತ್ರಗಳೇ ಹೆಚ್ಚು ಹೈಲೈಟ್​

ಭಾರತೀಯ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣ ಕುರಿತ ಹಲವು ಸಿನಿಮಾ, ಧಾರಾವಾಹಿಗಳು ಈಗಾಗಲೇ ಬಂದಿವೆ ಹಾಗೂ ಬರುತ್ತಿವೆ. ಅದರಲ್ಲಿ ನಿತೇಶ್ ತಿವಾರಿ ನಿರ್ದೇಶನದ ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿರುವ ‘ರಾಮಾಯಣ’ ಇದೇ ದೀಪಾವಳಿಗೆ ತೆರೆಗೆ ಬರಲಿದೆ. ಕಂಟೆಂಟ್, ತಾರಾಬಳಗ ಹಾಗೂ ತಾಂತ್ರಿಕ ಗುಣಮಟ್ಟದಿಂದಾಗಿ ಈ ಸಿನಿಮಾ ಈಗಾಗಲೇ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಇದು ತೆರೆಗೆ ಬರುವ ಮುನ್ನವೇ ಹಿಂದಿಯಲ್ಲಿ ಮತ್ತೊಂದು ರಾಮಾಯಣ ಹಿನ್ನೆಲೆಯ ಚಿತ್ರ ಬಿಡುಗಡೆಯಾಗುತ್ತಿದೆ. ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಎಂದು ಟೈಟಲ್ ನಿಗದಿಪಡಿಸಲಾಗಿದ್ದು, ಈ ಪೌರಾಣಿಕ ಚಿತ್ರಕ್ಕೆ ಅಭಿಷೇಕ್ ಸಿಂಗ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಿಂದಿಯ ‘ಯಾರಿಯಾ’, ‘ಮುಜಪ್ಫರ್‌ನಗರ್ 2013’ ನಟ ದೇವ್ ಶರ್ಮಾ ರಾಮನ ಅವತಾರದಲ್ಲಿದ್ದು, ‘ಕಚ್ಚಾ ಬಾದಾಮ್’ ಹಾಡಿನ ವೈರಲ್ ಹುಡುಗಿ ಅಂಜಲಿ ಅರೋರಾ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾವಣನಾಗಿ ರಜನೀಶ್ ದುಗ್ಗಲ್, ಹನುಮಂತನಾಗಿ ನಿರ್ಭಯ್ ವಾದ್ವಾ ಹಾಗೂ ಶೀಲ್ ವರ್ಮಾ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ರಾಮ-ಸೀತೆ ಪಾತ್ರಗಳನ್ನು ತೋರಿಸಲಾಗಿದೆ. ಪ್ರೀತಿ, ಸತ್ಯ, ನಂಬಿಕೆ, ಧರ್ಮದ ಅಂಶಗಳ ಮೇಲೆ ಟೀಸರ್‌ನಲ್ಲಿ ಬೆಳಕು ಚೆಲ್ಲಲಾಗಿದೆ. ತಾಂತ್ರಿಕವಾಗಿ ಇನ್ನಷ್ಟು ಗುಣಮಟ್ಟ ಬೇಕಿತ್ತು ಎಂಬ ಅನಿಸಿಕೆ ಪ್ರೇಕ್ಷಕರಿಂದ ವ್ಯಕ್ತವಾಗಿದ್ದು, ಇನ್ನೊಂದು ‘ಆದಿಪುರುಷ್’ ಆಗದಿರಲಿ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದ್ದು, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ಕ್ಕಿಂತ ಒಂದು ತಿಂಗಳು ಮುನ್ನ ಅರ್ಥಾತ್ ಸೆ. 25ಕ್ಕೆ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಸಿನಿಮಾ ತೆರೆಗೆ ಬರಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net