ಕಾನೂನು ಸುವ್ಯವಸ್ಥೆಯನ್ನೇ ನಡುಗಿಸಿದ್ದ ಖ್ಯಾತ ನಟನ ಕಪ್ಪು ಸೂಟ್​ಗೆ ಬ್ರೇಕ್​ ಹಾಕಿತ್ತು ಕೋರ್ಟ್​: ಇದು ಇತಿಹಾಸದಲ್ಲೇ ಮೊದಲು! Actor Black And White Coat

ಕಾನೂನು ಸುವ್ಯವಸ್ಥೆಯನ್ನೇ ನಡುಗಿಸಿದ್ದ ಖ್ಯಾತ ನಟನ ಕಪ್ಪು ಸೂಟ್​ಗೆ ಬ್ರೇಕ್​ ಹಾಕಿತ್ತು ಕೋರ್ಟ್​: ಇದು ಇತಿಹಾಸದಲ್ಲೇ ಮೊದಲು! Actor Black And White Coat
ಕಾನೂನು ಸುವ್ಯವಸ್ಥೆಯನ್ನೇ ನಡುಗಿಸಿದ್ದ ಖ್ಯಾತ ನಟನ ಕಪ್ಪು ಸೂಟ್​ಗೆ ಬ್ರೇಕ್​ ಹಾಕಿತ್ತು ಕೋರ್ಟ್​: ಇದು ಇತಿಹಾಸದಲ್ಲೇ ಮೊದಲು! Actor Black And White Coat
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಖ್ಯಾತ ಬಾಲಿವುಡ್ ನಟರ ನಟನೆ ಮತ್ತು ಅವರ ಸ್ಟೈಲ್ ಅಭಿಮಾನಿಗಳನ್ನು ಸೆಳೆಯುವುದು ತುಂಬಾ ಸಾಮಾನ್ಯ
  • ಆದರೆ 60ರ ದಶಕದಲ್ಲಿ ನಟನೊಬ್ಬನ ಉಡುಪು ಹಾಗೂ ವಿಶಿಷ್ಟ ಸ್ಟೈಲ್ ಕಾನೂನು ಸುವ್ಯವಸ್ಥೆಗೆ ಭಾರಿ ಸವಾಲಾಗಿತ್ತು
  • ಕಣ್ಮನ ಸೆಳೆಯುವ ನಟನ 'ಬ್ಲ್ಯಾಕ್ ಅಂಡ್ ವೈಟ್ ಸೂಟ್' ಸ್ಟೈಲ್ ನೋಡಲು ಜನರು ಮುಗಿಬೀಳುತ್ತಿದ್ದರು
  • ಸಾರ್ವಜನಿಕ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಸ್ವತಃ ನ್ಯಾಯಾಲಯವೇ ಆ ನಟ ಕಪ್ಪು ಸೂಟ್ ಧರಿಸದಂತೆ ನಿಷೇಧ ಹೇರಿತ್ತು
Actor Black And White Coat : ಇಂದು ಖ್ಯಾತ ಬಾಲಿವುಡ್ ನಟರ ನಟನೆ ಮತ್ತು ಅವರ ಸ್ಟೈಲ್ ಅಭಿಮಾನಿಗಳನ್ನು ಸೆಳೆಯುವುದು ತುಂಬಾ ಸಾಮಾನ್ಯ. ಆದರೆ 1950 ಮತ್ತು 60ರ ದಶಕದಲ್ಲಿ ನಟನೊಬ್ಬನ ಉಡುಪು ಹಾಗೂ ವಿಶಿಷ್ಟ ಸ್ಟೈಲ್ ಇಡೀ ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಭಾರಿ ಸವಾಲಾಗಿ ಪರಿಣಮಿಸಿದ ರೋಚಕ ಘಟನೆಯೊಂದು ನಡೆದಿತ್ತು ಅಂದರೆ ನೀವು ನಂಬುತ್ತಿರಾ? ನಂಬಲೇಬೇಕು.
ಹೌದು, ಆ ಕಣ್ಮನ ಸೆಳೆಯುವ ನಟನ 'ಬ್ಲ್ಯಾಕ್ ಅಂಡ್ ವೈಟ್ ಸೂಟ್' ಸ್ಟೈಲ್ ನೋಡಲು ಮುಗಿಬೀಳುತ್ತಿದ್ದ ಮಿತಿಮೀರಿದ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಸ್ವತಃ ನ್ಯಾಯಾಲಯವೇ ಆ ನಟ ಕಪ್ಪು ಸೂಟ್ ಧರಿಸದಂತೆ ನಿಷೇಧ ಹೇರಿತ್ತು ಎಂದರೆ ಆತನ ಕ್ರೇಜ್ ಎಷ್ಟಿರಬಹುದು ನೀವೇ ಊಹಿಸಿ! ಅಂದಹಾಗೆ ಆ ನಟ ಬೇರೆ ಯಾರೂ ಅಲ್ಲ, ಬಾಲಿವುಡ್‌ನ 'ಎವರ್‌ಗ್ರೀನ್' ಪ್ರೇಮಲೋಕದ ಚಕ್ರವರ್ತಿ ದೇವ್ ಆನಂದ್.
1946ರಲ್ಲಿ ತಮ್ಮ ಚಲನಚಿತ್ರ ಜೀವನವನ್ನು ಆರಂಭಿಸಿದ ದೇವ್ ಆನಂದ್ ಅವರು, 1948ರಲ್ಲಿ ಬಿಡುಗಡೆಯಾದ 'ಜಿದ್ದಿ' ಚಿತ್ರದ ಮೂಲಕ ಜನಪ್ರಿಯ ನಟನಾಗಿ ಹೊರಹೊಮ್ಮಿದರು. ಆ ದಿನಗಳಲ್ಲಿ ಅವರು ಧರಿಸುತ್ತಿದ್ದ 'ಬ್ಲ್ಯಾಕ್ ಅಂಡ್ ವೈಟ್ ಕೋಟ್' ಧರಿಸದಂತೆ ನ್ಯಾಯಾಲಯ ನಿಷೇಧ ಹೇರಿದ್ದರ ಹಿಂದೆ ಒಂದು ರೋಚಕ ಕಾರಣವಿದೆ.
ದೇವ್ ಆನಂದ್ ಅವರು ಕಪ್ಪು ಕೋಟ್ ಧರಿಸಿ ರಸ್ತೆಗಿಳಿದರೆ ಸಾಕು, ಅವರ ಆ ಅದ್ಭುತ ಲುಕ್ ನೋಡಲು ಯುವತಿಯರು ಮತ್ತು ಅಭಿಮಾನಿಗಳು ತಮ್ಮ ಪ್ರಜ್ಞೆಯನ್ನೇ ಮರೆತು ಮುಗಿಬೀಳುತ್ತಿದ್ದರು. ಈ ಹುಚ್ಚು ಕ್ರೇಜ್ ಎಷ್ಟರಮಟ್ಟಿಗಿತ್ತೆಂದರೆ, ಜನಸಂದಣಿಯಲ್ಲಿ ನೂಕುನುಗ್ಗಲು ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿತ್ತು ಮತ್ತು ಸಾರ್ವಜನಿಕ ಸುರಕ್ಷತೆಗೆ ಭಾರಿ ಸವಾಲೊಡ್ಡುತ್ತಿತ್ತು. ಇದೇ ಕಾರಣಕ್ಕೆ ಸ್ವತಃ ಕೋರ್ಟ್ ಅವರ ಈ ಉಡುಪಿನ ಮೇಲೆ ನಿಷೇಧ ಹೇರಬೇಕಾಗಿ ಬಂತು.
ದೇವ್ ಆನಂದ್ ಅವರು ಬಿಳಿ ಶರ್ಟ್ ಧರಿಸಿ, ಅದರ ಮೇಲೊಂದು ಕಪ್ಪು ಕೋಟ್ ಧರಿಸುತ್ತಿದ್ದರು. ಅವರ ಈ ವಿಶಿಷ್ಟ ಉಡುಪಿನ ಶೈಲಿ ಮತ್ತು ಅವರ ಆಕರ್ಷಕ ಕೇಶವಿನ್ಯಾಸ (ಹೇರ್ ಸ್ಟೈಲ್) ಆ ಕಾಲದ ಯುವ ಪೀಳಿಗೆಯಲ್ಲಿ ಭಾರಿ ಫ್ಯಾಷನ್ ಅಲೆಯನ್ನು ಸೃಷ್ಟಿಸಿತ್ತು. ಅವರು ಕಪ್ಪು ಸೂಟ್ ಧರಿಸಿ ಸಾರ್ವಜನಿಕವಾಗಿ ಹೊರಗೆ ಹೆಜ್ಜೆ ಇಟ್ಟರೆ ಸಾಕು, ಅವರ ಆ ಅದ್ಭುತ ಸ್ಟೈಲ್ ಅನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಜನ ಮುಗಿಬೀಳುತ್ತಿದ್ದರು.
ಅವರು ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಗೆ ಇಳಿಯುತ್ತಿದ್ದಂತೆ ಜನಸ್ತೋಮ ಎಷ್ಟು ದೊಡ್ಡ ಮಟ್ಟದಲ್ಲಿ ಜಮಾಯಿಸುತ್ತಿತ್ತೆಂದರೆ, ಅಲ್ಲಿನ ಸಂಪೂರ್ಣ ಸಂಚಾರ ವ್ಯವಸ್ಥೆಯೇ (ಟ್ರಾಫಿಕ್) ಸ್ತಬ್ಧಗೊಳ್ಳುತ್ತಿತ್ತು. ಅಷ್ಟೇ ಅಲ್ಲದೆ, ತಮ್ಮ ನೆಚ್ಚಿನ ನಟನನ್ನು ಒಂದು ನೋಟ ನೋಡಲು ಅಭಿಮಾನಿಗಳು ಕಂಬಗಳು ಮತ್ತು ಕಟ್ಟಡಗಳ ಮೇಲ್ಛಾವಣಿಗಳನ್ನು ಹತ್ತಿ ಜೋರಾಗಿ ಕೂಗಾಡುತ್ತಿದ್ದರು. ಇದು ಸಾರ್ವಜನಿಕ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಭಾರಿ ತೊಂದರೆಗಳನ್ನು ಉಂಟುಮಾಡುತ್ತಿತ್ತು.
ಹಲವು ಸಂದರ್ಭಗಳಲ್ಲಿ ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಡುತ್ತಿತ್ತು ಹಾಗೂ ಸಾರ್ವಜನಿಕ ಸುರಕ್ಷತೆಗೆ ಭಾರಿ ಭೀತಿ ಎದುರಾಗುತ್ತಿತ್ತು. ಹೀಗೆ ಮಿತಿಮೀರುತ್ತಿದ್ದ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಲು ಸ್ವತಃ ನ್ಯಾಯಾಲಯವೇ ಮಧ್ಯಪ್ರವೇಶಿಸಿ, ಅವರ ಮೇಲೆ ನಿರ್ಬಂಧಕಾಜ್ಞೆಯನ್ನು ಹೇರಬೇಕಾಯಿತು.
ನ್ಯಾಯಾಲಯದ ಅಧಿಕೃತ ಆದೇಶದ ಮೂಲಕ ನಟ ದೇವ್ ಆನಂದ್ ಅವರು ಕಪ್ಪು ಸೂಟ್ ಧರಿಸುವುದನ್ನು ನಿಷೇಧಿಸಲಾಯಿತು. ಚಿತ್ರರಂಗದ ಇತಿಹಾಸದಲ್ಲೇ ನಟನೊಬ್ಬ ನಿರ್ದಿಷ್ಟ ಉಡುಪನ್ನು ಧರಿಸಬಾರದು ಎಂದು ನ್ಯಾಯಾಲಯವೊಂದು ಇಂತಹ ಔಪಚಾರಿಕ ನಿಷೇಧ ಹೇರಿದ ಮೊದಲ ಮತ್ತು ವಿಶಿಷ್ಟ ಉದಾಹರಣೆ ಇದಾಗಿದೆ.
ತಮ್ಮ ವಿಶಿಷ್ಟ ವಾಕ್ಚಾತುರ್ಯ, ಆಕರ್ಷಕ ಸ್ಟೈಲ್ ಮತ್ತು ಟ್ರೆಂಡಿ ಉಡುಪುಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ದೇವ್ ಆನಂದ್ ಅವರು 2011ರಲ್ಲಿ ಇಹಲೋಕ ತ್ಯಜಿಸಿದರು. ಆದರೆ, ಅವರ ಆ 'ಬ್ಲ್ಯಾಕ್ ಅಂಡ್ ವೈಟ್ ಕೋಟ್' ನಿಷೇಧದ ರೋಚಕ ಘಟನೆ ಬಾಲಿವುಡ್ ಅಂಗಳದಲ್ಲಿ ಇಂದಿಗೂ ಒಂದು ವಿಶಿಷ್ಟ ವಿಷಯವಾಗಿ ಚರ್ಚೆಯಾಗುತ್ತಿರುವುದು ನಿಜಕ್ಕೂ ಗಮನಾರ್ಹ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net