ಕಂಗನಾ ಹಿಂದಿನ ಹೇಳಿಕೆಗೆ ಸಂದರ್ಶನವೊಂದರಲ್ಲಿ ಟಕ್ಕರ್ ಕೊಟ್ಟಿದ್ದ ತಾಪ್ಸಿಯನ್ನು ಹಿಂದಿಯಲ್ಲಿ ಸಸ್ತಿ ಕಾಪಿ ಎಂದು ಕರೆಯುವ ಮೂಲಕ ಅವರ ತಂದೆ-ತಾಯಿಯ ಬೆಳೆಸಿದ ರೀತಿಯನ್ನು ಪ್ರಶ್ನಿಸಿ, ಕಂಗನಾ ಪೋಸ್ಟ್ ಹಂಚಿಕೊಂಡರು. ಇದನ್ನು ಹಾಕಿದ ಕೆಲವೇ ಕ್ಷಣಗಳಲ್ಲಿ ಡಿಲೀಟ್ ಕೂಡ ಮಾಡಿದರು. ಆದರೆ, ಮಾಧ್ಯಮಗಳ ಕಣ್ಣು ತಪ್ಪಿಸಲು ಸಾಧ್ಯವಾಗದ ಹಿನ್ನೆಲೆ ಇದೀಗ ಈ ವಿಚಾರ ಬಹಿರಂಗವಾಗಿದೆ. ಇದನ್ನು ನೋಡಿ ಸುಮ್ಮನಾಗದ ತಾಪ್ಸಿ, ಕಂಗನಾ ಹೆಸರನ್ನು ಎಲ್ಲಿಯೂ ಉಲ್ಲೇಖಿಸದೆ, ಈಗ ಸಾಬೀತಾಯಿತು ಎಂದು ಬರೆದುಕೊಂಡಿದ್ದಾರೆ.