ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ವೈರಲ್ ಆಯ್ತು ಮೀಸಲಾತಿ ವಿರೋಧಿ ಪೋಸ್ಟ್: ಕೊನೆಗೂ ಮೌನ ಮುರಿದು ಕರಾವಳಿ ಬೆಡಗಿ ಹೇಳಿದ್ದೇನು..? Shilpa Shetty

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty  ಚಿತ್ರ Instagram)
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty ಚಿತ್ರ Instagram)
Published on
Shilpa Shettyಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಪೋಸ್ಟ್ ಒಂದಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರಿನಲ್ಲಿ ಹರಡಲಾಗುತ್ತಿರುವ ಈ ಪೋಸ್ಟ್ ಸಂಪೂರ್ಣವಾಗಿ ನಕಲಿಯಾಗಿದ್ದು, ಜನರನ್ನು ದಾರಿ ತಪ್ಪಿಸುವ ಹುನ್ನಾರ ಎಂದು ಬಹಿರಂಗವಾಗಿ ಖಂಡಿಸಿದ್ದಾರೆ.
ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯ ಮೂಲಕ ಸ್ಪಷ್ಟೀಕರಣ ನೀಡಿರುವ ಶಿಲ್ಪಾ, ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳನ್ನು ಮತ್ತು ತಮ್ಮ ಹೆಸರನ್ನು ಬಳಸಿ ಸೃಷ್ಟಿಸಲಾದ ಪೋಸ್ಟ್‌ಗಳನ್ನು ನಂಬಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಹೆಸರಿನಲ್ಲಿದ್ದ ವೈರಲ್ ಪೋಸ್ಟ್‌ನಲ್ಲೇನಿತ್ತು?

ಮೀಸಲಾತಿಯನ್ನು ಮುಟ್ಟಬೇಡಿ. ಸಾಮಾನ್ಯ ವರ್ಗದ ವೈದ್ಯರು ಸಾಮಾನ್ಯ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಿ ಮತ್ತು ಉಳಿದವರೆಲ್ಲರೂ ತಮ್ಮ ಜಾತಿಯ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಿ. ಕೆಲವು ವರ್ಷಗಳ ಕಾಲ ಹೀಗೆಯೇ ಮಾಡಿ. ಆಗ ಜನರೇ ಜಾತಿ ಮೀಸಲಾತಿಯನ್ನು ಕೊನೆಗೊಳಿಸಲು ಕೇಳಲು ಪ್ರಾರಂಭಿಸುತ್ತಾರೆ. ಮೀಸಲಾತಿಯ ಮೂಲಕ ನೀವು ಕೌಶಲ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ಬರೆಯಲಾಗಿತ್ತು. 
ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ವೈರಲ್ ಆಯ್ತು ಮೀಸಲಾತಿ ವಿರೋಧಿ ಪೋಸ್ಟ್!

ನಟಿ ನೀಡಿದ ಸ್ಪಷ್ಟನೆ ಏನು?

ವಿಷಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್​ ಹಂಚಿಕೊಂಡ ಶಿಲ್ಪಾ, ನನ್ನ ಹೆಸರಿನೊಂದಿಗೆ ಮೀಸಲಾತಿ ಕುರಿತು ನಕಲಿ ಹೇಳಿಕೆಗಳನ್ನು ತಪ್ಪಾಗಿ ಲಗತ್ತಿಸಿರುವುದನ್ನು ನೋಡಿ ನನಗೆ ಆಘಾತವಾಯಿತು. ಇದೊಂದು ಸಂಪೂರ್ಣ ಕಟ್ಟುಕಥೆ. ಈ ಸುಳ್ಳು ಸುದ್ದಿಯನ್ನು ಯಾರೂ ನಂಬಬೇಡಿ ಎಂದು ಸ್ಪಷ್ಟಪಡಿಸಿದರು.

ಶಿಲ್ಪಾ ಶೆಟ್ಟಿ ಅವರ ವೃತ್ತಿಜೀವನದ ವಿವರಗಳು

1993 ರ ಸೂಪರ್ ಹಿಟ್ ಥ್ರಿಲ್ಲರ್ 'ಬಾಜಿಗರ್' ಚಿತ್ರದ ಮೂಲಕ ಅಭಿನಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಶಿಲ್ಪಾ, ತದನಂತರ 'ಮೈ ಖಿಲಾಡಿ ತೂ ಅನಾಥಿ', 'ಜಾನ್ವರ್', 'ಧಡ್ಕನ್', 'ರಿಷ್ಟೇ', 'ಫಿರ್ ಮಿಲೇಂಗೆ' ಮತ್ತು 'ಲೈಫ್ ಇನ್ ಎ... ಮೆಟ್ರೋ' ನಂತಹ ಹಲವಾರು ಜನಪ್ರಿಯ ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇತ್ತೀಚೆಗೆ ಪ್ರೇಮ್ ನಿರ್ದೇಶನದ ಕನ್ನಡದ 'ಕೆಡಿ: ದಿ ಡೆವಿಲ್' ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ, ಸಂಜಯ್ ದತ್, ವಿ. ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಜಿಶು ಸೇನ್‌ಗುಪ್ತಾ ಮತ್ತು ನೋರಾ ಫತೇಹಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
 ಪ್ರಸ್ತುತ ಅವರು 'ಮಾ ಹೈ ನಾ' ಎಂಬ ರಿಯಾಲಿಟಿ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಇದರಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳು ತಮ್ಮ ಪೋಷಕರು ಅಥವಾ ಮಕ್ಕಳೊಂದಿಗೆ ಸೇರಿ ಅಡುಗೆ ಸವಾಲುಗಳು ಮತ್ತು ಮನರಂಜನಾ ವಿಭಾಗಗಳಲ್ಲಿ ಭಾಗವಹಿಸುತ್ತಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net