ಶ್ರೀಲೀಲಾ-ಜಾಹ್ನವಿ ಜುಗಲ್‌ಬಂದಿ: ತ್ರಿಕೋನ ಲವ್‌ಸ್ಟೋರಿಯಲ್ಲಿ ಒಂದಾದ ಉತ್ತರ - ದಕ್ಷಿಣದ ನಟಿಯರು

ಜಾಹ್ನವಿ, ಶ್ರೀಲೀಲಾ
ಜಾಹ್ನವಿ, ಶ್ರೀಲೀಲಾ
Published on

ಪ್ರಮುಖ ಮುಖ್ಯಾಂಶಗಳು

  • ಸತತ ಸೋಲಿನಿಂದ ಕಂಗಟ್ಟಿರುವ ಜಾಹ್ನವಿ-ಶ್ರೀಲೀಲಾ
  • ಹಿಂದಿಯ ಹೊಸ ರೊಮ್ಯಾಂಟಿಕ್ ಸಿನಿಮಾದಲ್ಲಿ ಒಂದಾದ ನಟಿಯರು
  • ಉಮೇಶ್ ಬಿಷ್ಟ್ ನಿರ್ದೇಶನದ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ

ಭಾರತೀಯ ಚಿತ್ರರಂಗದಲ್ಲಿ ನಟಿಯರಾದ ಜಾಹ್ನವಿ ಕಪೂರ್ ಹಾಗೂ ಶ್ರೀಲೀಲಾ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಕೈಯಲ್ಲಿ ಹೆಚ್ಚು ಅವಕಾಶಗಳಿದ್ದರೂ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಸೋಲು ಇಬ್ಬರನ್ನು ಕಂಗಡೆಸಿದೆ. ತೆಲುಗಿನ ‘ಭಗವಂತ್ ಕೇಸರಿ’ ಬಳಿಕ ಶ್ರೀಲೀಲಾ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲ. ಇನ್ನು ಜಾಹ್ನವಿ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆದರೂ, ಟ್ರೋಲ್ ಆಗಿದ್ದೆ ಹೆಚ್ಚು. ಇದೀಗ ಈ ಇಬ್ಬರು ನಟಿಯರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಹೌದು, ಹಿಂದಿಯ ‘ಪಗ್ಲಾಯಟ್’, ‘ಓ ತೇರಿ’ ಖ್ಯಾತಿಯ ಉಮೇಶ್ ಬಿಷ್ಟ್ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಒಂದೇ ಹುಡುಗನನ್ನು ಇಬ್ಬರು ಪ್ರೀತಿಸುವ ಸುತ್ತ ಸಾಗುತ್ತದೆ. ಇದೀಗ ಈ ಚಿತ್ರಕ್ಕೆ ಹೀರೋ ಆಯ್ಕೆಯ ಮುನ್ನವೇ ನಾಯಕ ನಟಿಯರ ಆಯ್ಕೆಯಾಗಿದ್ದು, ಶ್ರೀಲೀಲಾ ಮತ್ತು ಜಾಹ್ನವಿ ಕಪೂರ್ ಅಭಿನಯಿಸುತ್ತಿರುವುದು ಖಚಿತವಾಗಿದೆ. ಈ ಮೂಲಕ ಮೊದಲ ಬಾರಿಗೆ ಇಬ್ಬರು ಒಂದಾಗುತ್ತಿದ್ದಾರೆ. ಸದ್ಯ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಈ ಮೊದಲು ರಾಷ್ಟ್ರಪ್ರಶಸ್ತಿ ವಿಜೇತ ವಿಕ್ರಾಂತ್ ಮಸ್ಸಿಯನ್ನು ನಾಯಕನ ಪಾತ್ರಕ್ಕೆ ಚಿತ್ರತಂಡ ಸಂಪರ್ಕಿಸಿದೆ. ಆದರೆ, ಅವರು ಬೇರೆ ಸಿನಿಮಾಗಳಲ್ಲಿ ಬಿಜಿ ಇರುವುದರಿಂದ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಅದಕ್ಕಾಗಿ ಚಿತ್ರತಂಡ ಬೇರೆಯವರತ್ತ ಮುಖ ಮಾಡಿದೆ. ಶ್ರೀಲೀಲಾ ಸದ್ಯ ಕಾರ್ತಿಕ್ ಆರ್ಯನ್‌ಗೆ ಜೋಡಿಯಾಗಿ ಒಂದು ಚಿತ್ರದಲ್ಲಿ ನಟಿಸುತ್ತಿದ್ದರೆ, ಜಾಹ್ನವಿ ಕಪೂರ್ ‘ಪೆದ್ದಿ’ ಬಳಿಕ ‘ಲಗ್ ಜಾ ಗಲೇ’ಯಲ್ಲಿ ಅಭಿನಯಿಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net