Sara Arjun: ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾದಲ್ಲಿ ಹಮ್ಜಾ ಅಲಿ ಮಜಾರಿ (ರಣವೀರ್ ಸಿಂಗ್) ಯ ಪತ್ನಿ ಯಲಿನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿ ಪಡೆದ ನಟಿ ಎಂದರೆ ಸಾರಾ ಅರ್ಜುನ್ ಆಗಿದ್ದಾರೆ. ಸದ್ಯ ಸಾರಾ ಅರ್ಜುನ್ ಮಾಲ್ಡೀವ್ಸ್ ಪ್ರವಾಸದಲ್ಲಿ ಬ್ಯುಸಿ ಆಗಿದ್ದು, ಅಲ್ಲಿಯ ಸುಂದರ ಕಡಲ ತೀರದಲ್ಲಿ ಕೆಲ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಅವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.