

Salman Khan: ಅಮೆಜಾನ್ ಪ್ರೈಮ್‌ನ ಜನಪ್ರಿಯ ರಿಯಾಲಿಟಿ ಶೋ 'ಅಲೈಯನ್ಸ್' ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಶೋನ ಗ್ರಾಂಡ್ ಫಿನಾಲೆ ವಾರದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಸಹೋದರ ಸೊಹೈಲ್ ಖಾನ್ ಅವರನ್ನು ಪ್ರೋತ್ಸಾಹಿಸಲು ವಿಶೇಷವಾಗಿ ಆಗಮಿಸಿದ್ದರು. ಆದಾಗ್ಯೂ, ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಸಲ್ಮಾನ್ ತಾವೀಗ 16 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಹೇಳಿರುವುದು ಸದ್ಯ ಅಭಿಮಾನಿಗಳಲ್ಲಿ ಅಚ್ಚರಿ ಉಂಟುಮಾಡಿದೆ.
ಇದಲ್ಲದೆ, ಶೋನ ಪ್ರೋಮೋ ಒಂದರಲ್ಲಿ ಸೊಹೈಲ್ ಖಾನ್ ತಮ್ಮ ಕೋಪವನ್ನು ನಿಯಂತ್ರಿಸಲಾಗದೆ ಸ್ಟೋರ್‌ರೂಮ್ ಬಾಗಿಲಿಗೆ ಪದೇ ಪದೇ ಒದ್ದ ಭಾವುಕ ಘಟನೆಯನ್ನು ನೆನಪಿಸಿಕೊಂಡ ಸಲ್ಮಾನ್ ಇತರ ಸ್ಪರ್ಧಿಗಳನ್ನು ಉದ್ದೇಶಿಸಿ ನೀವೆಲ್ಲರೂ ಸೇರಿ ಸೊಹೈಲ್ಗೆ ವಿಪರೀತ ಒತ್ತಡ ನೀಡುತ್ತಿದ್ದೀರಾ? ಎಂದು ತಮಾಷೆಯಾಗಿ ಪ್ರಶ್ನಿಸಿದರು.