ಬಿಗ್​ಬಾಸ್​ ವೇದಿಕೆಯಲ್ಲಿ Salman Khan ​ ಆರೋಗ್ಯದಲ್ಲಿ ಏರುಪೇರು?; ಪ್ರೋಮೋ ಬಗ್ಗೆ ನಟ ಸ್ಪಷ್ಟನೆ ಕೊಟ್ಟಿದ್ದು ಹೀಗೆ

 Salman Khan addresses health fears after BB 20 promo, apologises
Salman Khan addresses health fears after BB 20 promo, apologises
Published on: 

ಪ್ರಮುಖ ಮುಖ್ಯಾಂಶಗಳು

  • ದೇವರ ದಯೆಯಿಂದ ನನ್ನ ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆಯಿಲ್ಲ.
  • ಇನ್​ಸ್ಟಾಗ್ರಾಮ್​ನಲ್ಲಿ ಅಧಿಕೃತ ಪೋಸ್ಟ್​ ಹಂಚಿಕೊಂಡ ನಟ ಸಲ್ಮಾನ್ ಖಾನ್.
  • ಸ್ಪರ್ಧಿ ಕಾಜಿ ಸಲ್ಮಾನ್​ರ ಆರೋಗ್ಯದ ಬಗ್ಗೆ ಸುಳ್ಳು ಹೇಳಿದ್ದನ್ನು ತಿದ್ದಲು ನಾಟಕ ಎಂದು ಸ್ಪಷ್ಟನೆ.
  • ಅರೆಬೆತ್ತಲೆಯಾಗಿ ಟ್ರೋಲಿಗರಿಗೆ ಸವಾಲ್ ಹಾಕಿದ ಸಲ್ಮಾನ್​ ಖಾನ್.
 Salman Khan addresses health fears after BB 20 promo, apologises: ಬಾಲಿವುಡ್​  ನಟ ಸಲ್ಮಾನ್​ ಖಾನ್ ಅವರು  ಬಿಗ್​ಬಾಸ್ ಕಾರ್ಯಕ್ರಮದಲ್ಲಿ ಅಸ್ವಸ್ಥರಾದವರಂತೆ ನಟಿಸಿದ ಪ್ರೋಮೋ ಹಂಚಿಕೊಳ್ಳಾಗಿತ್ತು. ಆ ಬೆನ್ನಲ್ಲೇ  ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಸಲ್ಮಾನ್​ ಖಾನ್ ಆರೋಗ್ಯದ ಬಗ್ಗೆ ನಾನಾ  ಪ್ರಶ್ನೆಗಳು, ಕಾಮೆಂಟ್​ಗಳು  ಹರಿದುಬಂದಿದ್ದವು. ಸದ್ಯ ನಟ ಎಲ್ಲ ಗೊಂದಲಕ್ಕೂ ತೆರೆ ಎಳೆದಿದ್ದಾರೆ, ತಮ್ಮ ಆರೋಗ್ಯ ಚೆನ್ನಾಗಿದೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದರು. 
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಇತ್ತೀಚಿನ ಬಿಗ್ ಬಾಸ್ 20 ಪ್ರೋಮೋ ವಿಡಿಯೋವೊಂದು ಅಭಿಮಾನಿಗಳಲ್ಲಿ ತೀವ್ರ ಆರೋಗ್ಯದ ಆತಂಕ ಮೂಡಿಸಿತ್ತು. ಶೋನ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರಿಗೆ ಎದೆನೋವು ಕಾಣಿಸಿಕೊಂಡಂತೆ ಹಾಗೂ ಅವರು ವೇದಿಕೆಯ ಮೇಲೆಯೇ ಕುಸಿದು ಬಿದ್ದು ವೈದ್ಯರನ್ನು ಕರೆದಂತೆ ಪ್ರೋಮೋದಲ್ಲಿ ತೋರಿಸಲಾಗಿತ್ತು. ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿ ಅಭಿಮಾನಿಗಳಲ್ಲಿ ಭೀತಿ ಮತ್ತು ಕಳವಳವನ್ನುಂಟುಮಾಡಿತ್ತು.  ಸದ್ಯ ಆ ಬಗ್ಗೆ ಖುದ್ದಾಗಿ ಅವರೇ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಲ್ಮಾನ್​ ಖಾನ್ ಹೇಳಿದ್ದೇನು?

ದೇವರ ದಯೆಯಿಂದ ನನ್ನ ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆಯಿಲ್ಲ  ಬಿಗ್ ಬಾಸ್ ಪ್ರೋಮೋವನ್ನು ಕಟ್ ಮಾಡಿದ ರೀತಿಯಲ್ಲಿ ಕಟ್ ಮಾಡಬಾರದಿತ್ತು. ಅದು ಉದ್ದೇಶವನ್ನೇ ಸಂಪೂರ್ಣವಾಗಿ ಹಾಳುಮಾಡುತ್ತದೆ ಮತ್ತು ಮನೆಯಲ್ಲಿ ಕಾಜಿ ಮಾಡುತ್ತಿದ್ದ ಅದೇ ಕೆಲಸವನ್ನು ನಾನೂ ಮಾಡುತ್ತಿದ್ದೇನೆ ಎಂಬಂತೆ ಕಾಣುತ್ತದೆ. ಮನೆಯಲ್ಲಿದ್ದ 15 ಜನರಿಗೆ ಆತ ನಟಿಸುತ್ತಿದ್ದಾನೆ ಎಂಬುದು ತಿಳಿದಿರಲಿಲ್ಲ. ಅವರು ಆತನ ಆರೋಗ್ಯದ ಬಗ್ಗೆ ಸಾಕಷ್ಟು ಚಿಂತೆಗೆ ಒಳಗಾಗಿದ್ದರು. ಹೀಗಿರುವಾಗ ಆತ ತನ್ನ ಆರೋಗ್ಯವನ್ನೇ ಮನರಂಜನೆಗಾಗಿ ಬಳಸಿಕೊಂಡಿದ್ದು ತಪ್ಪು ಎಂದು ಕಾಜಿಗೆ ಮನವರಿಕೆ ಮಾಡಿಕೊಡಲು ಈ ನಾಟಕವಾಡಿದ್ದು. ಪ್ರೋಮೋ ಕಟ್ ಮಾಡಿದ ರೀತಿಯ ಬಗ್ಗೆ ಕ್ಷಮೆಯಿರಲಿ, ಶೋಗಳನ್ನು ಪ್ರಮೋಟ್ ಮಾಡಲು ಅವರು ಬಳಸುವ ಫಾರ್ಮ್ಯಾಟ್ ಅದೇ ಇರಬಹುದು ಎಂದು ಅನಿಸುತ್ತದೆ, ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಸಲ್ಮಾನ್​ ಖಾನ್​ ಬರೆದುಕೊಂಡಿದ್ದಾರೆ.

ಪ್ರೋಮೋ ವಿವಾದದ ಅಸಲಿ ಕಥೆ ಏನು?

ಸ್ಪರ್ಧಿ ಕಾಜಿ ಟೌಕೀರ್ ಮನೆಯ ಇತರ 15 ಸದಸ್ಯರಿಗೆ ತಿಳಿಯದಂತೆ ತನ್ನ ಆರೋಗ್ಯದ ಬಗ್ಗೆ ಸುಳ್ಳು ಹೇಳಿ, ಅದನ್ನು ಮನರಂಜನೆಗಾಗಿ ಬಳಸಿಕೊಂಡಿದ್ದ. ಆರೋಗ್ಯದ ವಿಚಾರವಾಗಿ ಹೀಗೆ ತಮಾಷೆ ಮಾಡುವುದು ತಪ್ಪು ಎಂಬುದನ್ನು ಕಾಜಿಗೆ ಮನವರಿಕೆ ಮಾಡಿಕೊಡಲು ಸಲ್ಮಾನ್ ಖಾನ್ ಎದೆನೋವಿನ ನಾಟಕವಾಡಿದ್ದರು. ಆದರೆ ಪ್ರೋಮೋವನ್ನು ಎಡಿಟ್ ಮಾಡಿದ ರೀತಿಯಿಂದಾಗಿ ಸಲ್ಮಾನ್ ಅವರೇ ನಿಜಕ್ಕೂ ಅಸ್ವಸ್ಥರಾಗಿದ್ದಾರೆ ಎಂಬ ತಪ್ಪು ಸಂದೇಶ ಹೊರಹೊರಟಿತು.   

ಟ್ರೋಲಿಗರಿಗೆ ಸಲ್ಮಾನ್ ಖಾನ್ ಖಡಕ್ ಎಚ್ಚರಿಕೆ

ಇದಲ್ಲದೆ, ಆನ್‌ಲೈನ್‌ನಲ್ಲಿ ನಟರನ್ನು ಮತ್ತು ಮಹಿಳಾ ಕಲಾವಿದರ ಕಾಣಿಸಿಕೊಳ್ಳುವಿಕೆಯನ್ನು ಗುರಿಯಾಗಿಸಿ ಟ್ರೋಲ್ ಮಾಡುವವರನ್ನು ಸಲ್ಮಾನ್ ಖಾನ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತಮ್ಮ ಬೋಲ್ಡ್ ಲುಕ್ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಉತ್ತರಿಸುತ್ತಾ, ವೇದಿಕೆಯ ಮೇಲೆಯೇ ತಮ್ಮ ಟೋಪಿ ಮತ್ತು ಟಿ-ಶರ್ಟ್ ತೆಗೆದು, "ನನ್ನನ್ನು ಟ್ರೋಲ್ ಮಾಡಲು ಬಯಸುವಿರಾ? ಇಗೋ ನೋಡಿ, ಯಾವುದೇ ಸಿಕ್ಸ್​ ಪ್ಯಾಕ್ ಇಲ್ಲ, ನನ್ನ ಲುಕ್ ನೋಡಿ. ಈಗ ನನ್ನನ್ನು ಟ್ರೋಲ್ ಮಾಡಲು ಬಯಸುತ್ತೀರಾ? ಧೈರ್ಯವಿದ್ದರೆ ಮಾಡಿ" ಎಂದು ಸಲ್ಮಾನ್ ಟ್ರೋಲಿಗರಿಗೆ ಸವಾಲು ಹಾಕಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net