'ರಾಮಾಯಣ'ದಲ್ಲಿ ರಾಹಾ? ನಿತೇಶ್​ ತಿವಾರಿ ಸಿನಿಮಾದ ಜತೆ ಪುತ್ರಿಗಿದೆ ಸ್ಪೆಷಲ್​ ಕನೆಕ್ಷನ್ ಎಂದ ನಟ ರಣಬೀರ್​ | Raha ​Kapoor

Raha ​Kapoor
'ರಾಮಾಯಣ'ದಲ್ಲಿ ರಾಹಾ? ನಿತೇಶ್​ ತಿವಾರಿ ಸಿನಿಮಾದ ಜತೆ ಪುತ್ರಿಗಿದೆ ಸ್ಪೆಷಲ್​ ಕನೆಕ್ಷನ್ ಎಂದ ನಟ ರಣಬೀರ್​ | Raha ​Kapoor
Published on: 

ಮುಂಬೈ: ಜಾಗತಿಕವಾಗಿ ನವೆಂಬರ್​ 05ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ನಿತೇಶ್ ತಿವಾರಿ ನಿರ್ದೇಶನದ ಹಾಗೂ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್​, ಬಾಲಿವುಡ್​ ಹೀರೋ ರಣಬೀರ್​ ಕಪೂರ್​, ತಮಿಳು ನಟಿ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' (Ramayana) ಸಿನಿಮಾಗೆ ಇದೀಗ ಸಿನಿಪ್ರಿಯರಿಂದ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್​ ಮತ್ತು ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ತೆರೆ ಮೇಲೆ ಮೋಡಿ ಮಾಡಿದ್ದಾರೆ. ಸಿನಿಮಾದ ಬಿಡುಗಡೆಗೂ ಮುನ್ನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ರಣಬೀರ್​, ತಮ್ಮ ಪುತ್ರಿ ರಾಹಾ ಕಪೂರ್ (Raha Kapoor) ರಾಮಾಯಣ ಸಿನಿಮಾದ ಭಾಗವಾಗಿರುವ ಬಗ್ಗೆ ಸಣ್ಣ ಸುಳಿವು ಬಿಟ್ಟುಕೊಟ್ಟಿರುವುದು ಸದ್ಯ ನಟನ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ​

ಶೂಟಿಂಗ್ ಸೆಟ್‌ನಲ್ಲಿ ಹೆಚ್ಚಿದ ಆಸಕ್ತಿ

ರಾಮಾಯಣ 1ರ ಚಿತ್ರೀಕರಣದ ಸಮಯದಲ್ಲಿ ರಾಹಾ ಆಗಾಗ್ಗೆ ಶೂಟಿಂಗ್ ಸೆಟ್‌ಗೆ ಭೇಟಿ ನೀಡುತ್ತಿದ್ದಳು. ಸೆಟ್‌ನಲ್ಲಿ ಪೌರಾಣಿಕ ಕಥಾಹಂದರ ಹಾಗೂ ಪಾತ್ರಗಳ ಶೂಟಿಂಗ್ ನಡೆಯುವುದನ್ನು ನೇರವಾಗಿ ನೋಡುತ್ತಿದ್ದ ಮಗಳಿಗೆ, ಶ್ರೀರಾಮನ ಕಥೆಯ ಮೇಲೆ ಹೆಚ್ಚು ಆಸಕ್ತಿ ಮತ್ತು ಕುತೂಹಲ ಮೂಡಿತು ಎಂದು ಹೇಳಿದ್ದಾರೆ.

ಈ ಆಸಕ್ತಿಯಿಂದಾಗಿಯೇ ಆಕೆಗೆ ಚಿತ್ರದಲ್ಲಿ ಒಂದು ಸಣ್ಣ ದೃಶ್ಯದಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. ರಾಹಾ ನನ್ನ, ಸಾಯಿ ಪಲ್ಲವಿ (ಸೀತೆ) ಹಾಗೂ ರವಿ ದುಬೆ ಅವರೊಂದಿಗೆ ಸ್ಕ್ರೀನ್​ ಶೇರ್​ ಮಾಡಿದ್ದಾಳೆ. ಇದು ರಾಹಾಳ ಚೊಚ್ಚಲ ಆನ್-ಸ್ಕ್ರೀನ್ ನಟನೆಯಾಗಿದ್ದು, ನಮಗೆ ಖುಷಿ ತಂದಿದೆ ಎಂದರು. ಅಸಲಿಗೆ, ಮೊದಲ ಭಾಗದಲ್ಲಿ ಆಕೆ ಇಲ್ಲ ಎಂಬುದು ಒಂದೆಡೆಯಾದರೆ, ಎರಡನೇ ಭಾಗದಲ್ಲಿ ಆಕೆ ಅಭಿನಯಿಸಿರಬಹುದು ಎಂಬ ಮಾತುಗಳು ಸದ್ಯ ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿವೆ.

Also Read
ಒಂದೇ ಒಂದು ದುರಂತಕ್ಕೆ ಇಡೀ ಊರೇ ಸರ್ವನಾಶ! 40 ವರ್ಷಗಳ ಹಿಂದೆಯೇ ಮೌನಕ್ಕೆ ಜಾರಿದ ನಗರವಿದು | Pripyat
Raha ​Kapoor

ನನ್ನ ಮಗಳೇ ನನ್ನ ಜೀವನದ ಬೆಳಕು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ನವೆಂಬರ್ 6ಕ್ಕೆ ಅವಳಿಗೆ 4 ವರ್ಷ ತುಂಬಲಿದ್ದು, ದೀಪಾವಳಿಯ ಶುಭ ಸಂದರ್ಭದಲ್ಲೇ ಆಕೆಯ ಜನ್ಮದಿನವೂ ಬರಲಿದೆ ಎಂದು ಹೇಳಿದರು. ಇನ್ನು, ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿರುವ ರಾಮಾಯಣ ಚಿತ್ರದಲ್ಲಿ ರಣಬೀರ್​, ಯಶ್​, ರವಿ ದುಬೆ, ಸಾಯಿ ಪಲ್ಲವಿ ಸೇರಿದಂತೆ ಪ್ರಮುಖ ಪಾತ್ರಗಳಿಗೆ ಮೆಚ್ಚುಗೆಗಳ ಹರಿದುಬರುತ್ತಿವೆ. ಅದರಲ್ಲೂ, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್​ ಅವರ ಅಭಿನಯಕ್ಕೆ ವಿಶೇಷ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದಿರುವ ಚಿತ್ರವು ಮುಂದಿನ ದಿನಗಳಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).