ಬಾಲಿವುಡ್‌ಗೆ ಮರಳಿದ ಪರಿಣೀತಿ, ಶಿಲ್ಪಾ ಶಿರೋಡ್ಕರ್

ಪರಿಣೀತಿ ಚೋಪ್ರಾ, ಶಿಲ್ಪಾ ಶಿರೋಡ್ಕರ್
ಪರಿಣೀತಿ ಚೋಪ್ರಾ, ಶಿಲ್ಪಾ ಶಿರೋಡ್ಕರ್
Published on

ಪ್ರಮುಖ ಮುಖ್ಯಾಂಶಗಳು

  • ಎರಡು ವರ್ಷಗಳ ಬಳಿಕ ಪರಿಣೀತಿ ನಟನೆಗೆ ಕಮ್ ಬ್ಯಾಕ್​
  • 26 ವರ್ಷಗಳ ಬಳಿಕ ಬಾಲಿವುಡ್ ಮರಳಿದ ಶಿಲ್ಪಾ ಶಿರೋಡ್ಕರ್
  • ಮಾಲ್ ಮಾಲಾ ವೀಕ್ಲೀ 2 ಚಿತ್ರದಲ್ಲಿ ಪರಿಣಿತಿ, ಶಿಲ್ಪಾ ಜತೆಗೆ ರವೀನಾ ಟಂಡನ್ ಅಭಿನಯ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಎರಡು ವರ್ಷಗಳ ಬಳಿಕ ಹಿಂದಿ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. 2023ರಲ್ಲಿ ಸಂಸದ ರಾಘವ್ ಚಡ್ಡಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅವರು ‘ಮಿಷನ್ ರಾಣಿಗಂಜ್’ ಮತ್ತು ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರಗಳಲ್ಲಿ ನಟಿಸಿದ್ದರು. ಆನಂತರ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಆ ಮಧ್ಯೆಯೇ, ಕಳೆದ ಅಕ್ಟೋಬರ್‌ನಲ್ಲಿ ಪರಿಣೀತಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಆರೈಕೆಗಾಗಿ ಕೆಲ ದಿನಗಳ ಕಾಲ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ಅವರು ಇದೀಗ ‘ಮಾಲಾಮಾಲ್ ವೀಕ್ಲಿ 2’ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಹೌದು, 2006ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ಪ್ರಿಯದರ್ಶನ್ ನಿರ್ದೇಶನದ, ನಟರಾದ ಪರೇಶ್ ರಾವಲ್, ಓಂ ಪುರಿ ಕಲಾ ಬಳಗದಲ್ಲಿದ್ದ ‘ಮಾಲಾಮಾಲ್ ವೀಕ್ಲಿ’ ಚಿತ್ರದ ಎರಡನೇ ಕಂತಿಗೆ ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ನಟ ಪರೇಶ್ ರಾವಲ್ ‘ಮಾಲಾಮಾಲ್ ವೀಕ್ಲಿ 2’ ಘೋಷಿಸಿದ್ದರು. ಇದೀಗ ಕಲಾಬಳಗದ ಆಯ್ಕೆಯಾಗಿದ್ದು, ಪರಿಣೀತಿ ಜೋಪ್ರಾ ಚಿತ್ರತಂಡ ಸೇರಿಕೊಂಡಿದ್ದಾರೆ. ಪರಿಣೀತಿ ಜತೆಗೆ ರವೀನಾ ಟಂಡನ್ ಕೂಡ ಕಲಾಬಳಗದಲ್ಲಿದ್ದಾರೆ. -ಏಜೆನ್ಸೀಸ್

26 ವರ್ಷಗಳ ಬಳಿಕ ಹಿಂದಿಗೆ ಶಿಲ್ಪಾ

‘ಮಾಲಾಮಾಲ್ ವೀಕ್ಲಿ 2’ ಚಿತ್ರದಲ್ಲಿ ನಟಿಯರಾದ ರವೀನಾ ಟಂಡನ್, ಪರಿಣೀತಿ ಚೋಪ್ರಾ ಜತೆಗೆ ಶಿಲ್ಪಾ ಶಿರೋಡ್ಕರ್ ನಟಿಸುವುದು ಖಚಿತವಾಗಿದೆ. ಆ ಮೂಲಕ ಅವರು ಬರೋಬ್ಬರಿ 26 ವರ್ಷಗಳ ಬಳಿಕ ಬಾಲಿವುಡ್‌ಗೆ ವಾಪಸ್ಸಾಗಿದ್ದಾರೆ. ಹಿಂದಿಯ ‘ಭ್ರಷ್ಟಾಚಾರ್’, ‘ನ್ಯಾಯ್ ಅನ್ಯಾಯ್’, ‘ಯೋಧ’, ‘ಬದ್ಮಾಶ್’ ಸೇರಿ 35ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಶಿಲ್ಪಾ ಎರಡೂವರೆ ದಶಕಗಳಿಂದ ಹಿಂದಿ ಚಿತ್ರರಂಗದಿಂದ ದೂರ ಇದ್ದರು. ‘ಗಜಗಾಮಿನಿ’ (2000) ನಟಿ ಅಭಿನಯಿಸಿದ್ದ ಕೊನೆಯ ಹಿಂದಿ ಚಿತ್ರವಾಗಿತ್ತು. ಆ ಬಳಿಕ 25 ವರ್ಷಗಳ ನಂತರ ತೆಲುಗಿನ ‘ಜಟಾಧರ’ ಮೂಲಕ ಮತ್ತೆ ಬಣ್ಣ ಹಚ್ಚಿದ್ದ ಶಿಲ್ಪಾ, ಇದೀಗ ಬಾಲಿವುಡ್‌ಗೆ ‘ಮಾಲಾಮಾಲ್ ವೀಕ್ಲಿ 2’ ಮೂಲಕ ಹಿಂದಿಗೆ ಮರಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net