_1785855525058.webp?w=480&auto=format%2Ccompress&fit=max)
_1785855525058.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿ’ಸೋಜಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ‘ಎಬಿಸಿಡಿ’ ಸರಣಿ, ‘ರೇಸ್ 3’, ‘ಸ್ಟ್ರೀಟ್ ಡಾನ್ಸರ್ 3ಡಿ’ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಅವರು ಇದೀಗ ಬಾಲಿವುಡ್ ನಟ ಟೈಗರ್ ಶ್ರಾಫ್ ಗೆ ಆ್ಯಕ್ಷನ್-ಕಟ್ ಹೇಳಲು ಸಿದ್ಧತೆ ನಡೆಸುತ್ತಿದ್ದಾರೆ. ಇದೊಂದು ಆ್ಯಕ್ಷನ್ ಚಿತ್ರವಾಗಿದ್ದು, ಸದ್ಯ ಕಲಾಬಳಗದ ಆಯ್ಕೆ ನಡೆದಿದೆ. ಟೈಗರ್ ಶ್ರಾಫ್ ಜತೆಗೆ ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್
ಎಲ್ವಿಶ್ ಯಾದವ್, ಅಭಿಷೇಕ್ ಬ್ಯಾನರ್ಜಿ, ಪಶ್ಮಿನಾ ರೋಷನ್ ತಾರಾಗಣದಲ್ಲಿರುವುದು ಖಚಿತವಾಗಿದೆ. ಹಾಗಾದರೆ, ಟೈಗರ್ ಶ್ರಾಫ್ಗೆ ನಾಯಕಿ ಯಾರು ಎಂಬ ಕುತೂಹಲ ಇದ್ದೇ ಇತ್ತು. ಇದೀಗ ‘ಛೋರಿ’ ಸರಣಿ, ‘ರಾಮಸೇತು’ ನಟಿ ನುಶ್ರತ್ ಭರೂಚಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಅವರು ಟೈಗರ್ ಗೆ ಜೋಡಿಯಾಗುತ್ತಿದ್ದಾರೆ. ತೆಲುಗಿನ ‘ತಾಜ್‌ಮಹಲ್’ ಮೂಲಕ ಪ್ರಸಿದ್ಧಿಯಾಗಿದ್ದ ನುಶ್ರತ್, ಬಳಿಕ ಹಿಂದಿಯ ‘ಲವ್ ಸೆಕ್ಸ್ ಧೋಖಾ’, ‘ಸೋನು ಕೀ ಟೀಟು ಕೀ ಸ್ವೀಟಿ’, ‘ಛತ್ರಪತಿ’ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗ್ಲಾಮರ್ ಜತೆಗೆ ಆ್ಯಕ್ಷನ್ ಲುಕ್ ಇರುವ ಕಾರಣ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ನಟಿ ಪಾತ್ರದ ಸಿದ್ಧತೆಯಲ್ಲಿದ್ದಾರೆ. ‘ಈ ಚಿತ್ರದ ಕಥೆಗೆ ಶಕ್ತಿಯಾಗುವಂತಹ ಹಾಗೂ ಭಾವನಾತ್ಮಕವಾಗಿ ಅಭಿನಯಿಸುವವರನ್ನು ತಂಡ ಹುಡುಕುತ್ತಿತ್ತು. ಈ ಮಾನದಂಡಗಳಿಗೆ ನುಶ್ರತ್ ಒಪ್ಪುವ ಕಾರಣ ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಅಭಿಮಾನಿಗಳು ಈ ಚಿತ್ರದಲ್ಲಿ ಹೊಸ ರೀತಿಯ ನುಶ್ರತ್‌ರನ್ನು ಕಾಣಲಿದ್ದಾರೆ’ ಎಂದು ತಂಡ ಹೇಳಿಕೊಂಡಿದೆ. -ಏಜೆನ್ಸೀಸ್