ಸೆಲ್ಫಿ ನೆಪದಲ್ಲಿ ಬಂದು ನಟಿಗೆ ಲಿಪ್ ಕಿಸ್! ಮಹಿಳಾ ಅಭಿಮಾನಿ ಸಡನ್ ಆಕ್ಷನ್‌ಗೆ ನಟಿ ನಿಕಿತಾ ರಾವಲ್ ಕಂಗಾಲು! Nikita Rawal

Nikita Rawal (ಚಿತ್ರ X)
Nikita Rawal (ಚಿತ್ರ X)
Published on

Nikita Rawal: ಬಾಲಿವುಡ್​ ನಟಿ ನಿಕಿತಾ ರಾವಲ್ ಅವರಿಗೆ ಇತ್ತೀಚಿನ ಸಾರ್ವಜನಿಕ ಕಾರ್ಯಕ್ರಮವೊಂದರ ರೆಡ್ ಕಾರ್ಪೆಟ್‌ನಲ್ಲಿ ಅತ್ಯಂತ ಆಘಾತಕಾರಿ ಪ್ರಸಂಗವೊಂದು ಎದುರಾಗಿದೆ. ಫೋಟೋ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಬಂದ ಮಹಿಳಾ ಅಭಿಮಾನಿಯೊಬ್ಬರು ನಟಿಯ ಅನುಮತಿಯಿಲ್ಲದೆ ಹಠಾತ್ತನೆ ಅವರ ತುಟಿಗೆ ಮುತ್ತಿಟ್ಟಿದ್ದು, ಈ ಅನಿರೀಕ್ಷಿತ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗ್ತಿರೋದೇನು?

ಶನಿವಾರ (ಆ.08) ರಂದು ನಡೆದ ಕಾರ್ಯಕ್ರಮವೊಂದರಲ್ಲಿ ನಿಕಿತಾ ರಾವಲ್​ ರೆಡ್​ ಕಾರ್ಪೆಟ್​ ಮೇಲೆ ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ನಟಿಯ ಬಳಿ ಬಂದು ಸೆಲ್ಫಿ ವಿನಂತಿಸಿದರು. ನಿಕಿತಾ ಕೂಡ ಸೌಜನ್ಯದಿಂದ ಮುಗುಳುನಗುತ್ತಾ ಫೋಟೋಗೆ ಅನುಮತಿ ನೀಡಿದರು. ಆದರೆ, ಫೋಟೋ ತೆಗೆಸಿಕೊಳ್ಳುತ್ತಿದ್ದಂತೆ ಆ ಮಹಿಳೆ ಮೊದಲು ನಿಕಿತಾ ಅವರ ಕೆನ್ನೆಗೆ ಮುತ್ತಿಟ್ಟರು. ತಕ್ಷಣವೇ ಅವರನ್ನು ಬಲವಂತವಾಗಿ ಎಳೆದುಕೊಂಡು ಕ್ಯಾಮರಾಗಳ ಮುಂದೆ ಅವರ ತುಟಿಗೆ ಮುತ್ತಿಟ್ಟಿದ್ದು ಎಲ್ಲೆಡೆ ವೈರಲ್ ಆಗಿದೆ.
ಈ ದಿಢೀರ್ ನಡವಳಿಕೆಯಿಂದ ತೀವ್ರ ಕಳವಳಗೊಂಡ ನಿಕಿತಾ, ತಕ್ಷಣವೇ ಆಕೆಯನ್ನು ತಡೆಯಲು ಪ್ರಯತ್ನಿಸಿದರು. ತಮ್ಮ ಬಾಯಿಗೆ ಕೈಯಿಟ್ಟುಕೊಂಡು ತೀವ್ರ ಮುಜುಗರ ಹಾಗೂ ಆಘಾತದಿಂದ ದೂರ ಸರಿಯಲು ಪ್ರಯತ್ನಿಸಿದರೂ, ಆ ಮಹಿಳೆ ನಟಿಯನ್ನು ಬಿಡದೇ ಬಲವಂತವಾಗಿ ಕೆನ್ನೆಗೆ ಮುತ್ತಿಟ್ಟು ಅಲ್ಲಿಂದ ಹೊರಟು ಹೋದರು.
ಆದಾಗ್ಯೂ, ನಟಿಯ ಒಪ್ಪಿಗೆ ಇಲ್ಲದಿರುವುದು ಹಾಗೂ ಅಸಮಾಧಾನ ವೀಡಿಯೋದಲ್ಲಿ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಾರೆಯರ ಸುರಕ್ಷತೆ ಮತ್ತು ಖಾಸಗಿತನದ ಕುರಿತು ಈ ವಿಟಿಯೋ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ನಟಿ ನಿಕಿತಾ ರಾವಲ್ ಹಿನ್ನೆಲೆ

ಮುಂಬೈ ಮೂಲದ ನಿಕಿತಾ ರಾವಲ್ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತೀಯ ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಅನಿಲ್ ಕಪೂರ್ ಮತ್ತು ಶೆಫಾಲಿ ಶಾ ನಟನೆಯ ಬ್ಲ್ಯಾಕ್ & ವೈಟ್, ಮಿಷ್ಟರ್ ಹಾಟ್ ಮಿಷ್ಟರ್ ಕೂಲ್, ದ ಹೀರೊ - ಅಭಿನಂದನ್, ಗರಂ ಮಸಾಲಾ, ಕ್ಯೂಟ್ ಕಮೀನಾ ಮತ್ತು ಅಮ್ಮಾ ಕೀ ಬೋಲಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
2012 ರಿಂದ ತೆಲುಗು ಚಿತ್ರರಂಗದಲ್ಲೂ ಸಕ್ರಿಯರಾಗಿರುವ ಇವರು, ಕೇಂದ್ರ ಸರ್ಕಾರದ ಬೆಂಬಲಿತ 'ಡ್ರಗ್ ಮುಕ್ತ ಭಾರತ' (Drug-free India) ಜಾಗೃತಿ ಅಭಿಯಾನದ ಯೋಜನೆಯಲ್ಲೂ ಭಾಗವಹಿಸಿದ್ದರು.

ಮುಂಬರುವ ಚಿತ್ರ

ಹಿರಿಯ ನಟರಾದ ಅರ್ಷದ್ ವಾರ್ಸಿ ಮತ್ತು ಚಂಕಿ ಪಾಂಡೆ ಅವರೊಂದಿಗೆ ‘ರೋಟಿ ಕಪ್ಡಾ ಔರ್ ರೊಮ್ಯಾನ್ಸ್’ ಎಂಬ ಮುಂಬರುವ ಹೊಸ ಚಿತ್ರದಲ್ಲಿ ನಿಕಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net