ನಾಸಿರುದ್ದೀನ್​ ಷಾ 'ಗುಳ್ಳೆ ನರಿ': ಅವರು ಭಾರತದ ಅನ್ನ ತಿಂದು, ಪಾಕಿಸ್ತಾನ ಭಜನೆ ಮಾಡುತ್ತಾರೆ; ಬಾಲಿವುಡ್​ ತಾರೆಗಳ ವಿರುದ್ಧ ಕಂಗನಾ ಕಿಡಿನುಡಿ! Kangana Ranaut on Bollywood

ಬಾಲಿವುಡ್ ನಟ ನಾಸಿರುದ್ದೀನ್ ಶಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್!
ಬಾಲಿವುಡ್ ನಟ ನಾಸಿರುದ್ದೀನ್ ಶಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್!
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ನಟ ನಾಸಿರುದ್ದೀನ್ ಶಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್!
  • ಬಾಲಿವುಡ್​ ತಾರೆಗಳು ಭಾರತದ ಅನ್ನ ತಿಂದು ಪಾಕಿಸ್ತಾನವನ್ನು ಭಜಿಸುತ್ತಾರೆ
  • ನಾಸಿರುದ್ದೀನ್ ಶಾ ಒಬ್ಬ ಗುಳ್ಳೆ ನರಿ
ನವದೆಹಲಿ: ದೆಹಲಿಯ ಜಂತರ್​-ಮಂತರ್​ನಲ್ಲಿ ನಡೆದಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಬಾಲಿವುಡ್​​ ನಟ-ನಟಿಯರು, ಈಗ ಜಾರ್ಖಂಡ್​ನಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಮೌನವಹಿಸಿರುವುದಕ್ಕೆ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut on Bollywood) ​ ಕಿಡಿಕಾರಿದ್ದಾರೆ.
ಕೆಲ ದಿನಗಳ ಹಿಂದೆ ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮನ್​ಲ್ಲಿ ಬರೆದುಕೊಂಡಿದ್ದ ಕಂಗನಾ, ಹಿರಿಯ ನಟ ನಾಸಿರುದ್ದೀನ್ ಷಾ ಒಬ್ಬ ಗುಳ್ಳೆ ನರಿ ಎಂದು ಕರೆದಿದ್ದರು. ಜಂತರ್​-ಮಂತರ್​ ಸಂದರ್ಭದಲ್ಲಿ ವಿಡಿಯೋ ಮೇಲೆ ವಿಡಿಯೋ ಮಾಡುತ್ತಿದ್ದ ನಾಸಿರುದ್ದೀನ್ ಷಾ ಈಗ ಎಲ್ಲಿದ್ದಾರೆ? ಅವರ ಜೊತೆ ಸೇರಿ ವಿಡಿಯೋ ಮಾಡುತ್ತಿದ್ದ ಉಳಿದವರು ಈಗ ಎಲ್ಲಿದ್ದಾರೆ? ದೆಹಲಿಗಾಗಿ ಮಿಡಿದ ಹೃದಯ ಜಾರ್ಖಂಡ್​ಗಾಗಿ ಏಕೆ ಮಿಡಿಯುತ್ತಿಲ್ಲ? ಎಂದು ನಟಿ ಪ್ರಶ್ನಿಸಿದ್ದರು.

ತಿನ್ನುವುದು ಭಾರತದ್ದು; ಭಜನೆ ಪಾಕಿಸ್ತಾನದ್ದು!

ಬಾಲಿವುಡ್​ ಮತ್ತು ಪಾಕಿಸ್ತಾನದ ಸಂಬಂಧ ಇಷ್ಟು ವರ್ಷವಾದರೂ ಮುಗಿದಿಲ್ಲ. ಇವರ ಎಲ್ಲಾ ಪ್ರೇಮಕತೆಗಳು ಪಾಕಿಸ್ತಾನದ ಜೊತೆಗೆ ಇರುತ್ತದೆ. ಇವರಿಗೆ ಆ ದೇಶದ ಮೇಲಿನ ಪ್ರೀತಿ ಇಲ್ಲಿ ತನಕ ಕಡಿಮೆಯೇ ಆಗಿಲ್ಲ.

ಇವರು ಬದುಕುತ್ತಿರುವುದು ಭಾರತದಲ್ಲಿ, ಅನ್ನ ತಿನ್ನುತ್ತಿರುವುದು ಭಾರತದ್ದು, ಆದರೆ ಭಜನೆ ಮಾತ್ರ ಪಾಕಿಸ್ತಾನದ್ದೇ ಮಾಡುತ್ತಾರೆ. ಈಗಲೂ ಇಲ್ಲಿ ಇದೇ ನಡೆದಿದೆ. ಜಂತರ್​-ಮಂತರ್​ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್​ ಆದಾಗ ಮೊಸಳೆ ಕಣ್ಣೀರು ಸುರಿಸಿದ್ದರು, ಈಗ ಜಾರ್ಖಂಡ್​​ ಬಗ್ಗೆ ಮೌನವಾಗಿದ್ದಾರೆ. ಇವರ ದ್ವಂದ್ವ ನೀತಿ ಈಗ ಜಗಜ್ಜಾಹಿರವಾಗಿದೆ ಎಂದಿದ್ದಾರೆ.


ಇವರ ಈ ನಡುವಳಿಕೆಗಾಗಿ ನಾನು ನಾಸಿರುದ್ದೀನ್​ ಷಾ ರನ್ನು ಗುಳ್ಳೆ ನರಿ ಎಂದಿದ್ದು, ನಾನು ಹೇಳಿದ್ದ ಮಾತನ್ನು ನಾನು ಖಂಡಿತವಾಗಿ ಸಮರ್ಥಿಸಿಕೊಳ್ಳುತ್ತೇನೆ, ಅವರ ವರ್ತನೆ ನಾನು ಹೇಳಿದ ಪ್ರಕಾರವೇ ಇದೆ ಎಂದು ಕಂಗನಾ ಸ್ಪಷ್ಟನೆ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net