

ಮುಂಬೈ: ಬಾಲಿವುಡ್ನಲ್ಲಿ ತನ್ನ ನಟನೆಗಿಂತ, ಅದರ ಹೊರತಾದ ಸಂಗತಿಗಳಿಂದಲೇ ಸುದ್ದಿಯಲ್ಲಿರುವ ನಟಿ ಎಂದರೆ ಅದು ದಿಯಾ ಮಿರ್ಜಾ ಆಗಿದ್ದಾರೆ. ಕೆಲ ದಿನಗಳ ಹಿಂದೆ ದೀಪಾವಳಿ ಪಟಾಕಿ ಸಂಬಂಧಿಸಿದಂತೆ ತಮ್ಮ ನಾಲಿಗೆ ಹರಿಬಿಟ್ಟು ಟ್ರೋಲ್ ಆಗಿದ್ದ ನಟಿ ಈಗ, ತಮ್ಮದೇ ಚಿತ್ರರಂಗದ ನಟ ನವಾಜುದ್ದೀನ್ ಸಿದ್ದಿಕಿ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ನಟಿ ದಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಂನಲ್ಲಿ ನವಾಜುದ್ದೀನ್ ವಿರುದ್ಧ ಕಿಡಿಕಾರಿದ್ದು, ಈ ವ್ಯಕ್ತಿಗೆ ಒಬ್ಬರ ಜತೆ ಹೇಗೆ ಮಾತನಾಡಬೇಕೆಂದು ಸೌಜನ್ಯವಿಲ್ಲ, ಇತನ ದುರಂಹಕಾರದ ಅಗ್ರಸ್ಥಾನದಲ್ಲಿದೆ, ಇವನ ಜೊತೆ ಸಿನಿಮಾ ಶೂಟಿಂಗ್ ಮಾಡುವುದೊಂದು ದುಸ್ವಪ್ನವಾಗಿದ್ದು, ಇವನೊಂದು ಆಕ್ರಮಣಕಾರಿ ಕ್ಯಾರೆಕ್ಟರ್ ಎಂದು ದಿಯಾ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದು, ನವಾಜ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಆದರೆ, ನವಾಜುದ್ದೀನ್ ಸಿದ್ದಿಕಿ, ದಿಯಾ ಮಿರ್ಜಾ ಅವರ ಜತೆ ಹೇಗೆ ನಡೆದುಕೊಂಡಿದ್ದಾರೆ? ಏಕೆ ದಿಯಾ ಹೀಗೆ ಪೋಸ್ಟ್ ಹಾಕಿದ್ದಾಳೆಂದು ಈವರೆಗೆ ತಿಳಿದು ಬಂದಿಲ್ಲ. ಅಂತಯೇ, ಈ ಬಗ್ಗೆ ದಿಯಾ ಯಾವುದೇ ಹೆಚ್ಚುವರಿ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಅಷ್ಟಕ್ಕೀ ಇವರಿಬ್ಬರ ನಡುವೆ ಏನು ನಡೆದಿದೆ ಎಂದು ಪ್ರೇಕ್ಷಕರಲ್ಲಿ ಪ್ರಶ್ನೆ ಕಾಡುತ್ತಿದ್ದು, ಇದಕ್ಕ ದಿಯಾ ಅವರೇ ಒಂದು ಸ್ಪಷ್ಟನೆ ನೀಡಬೇಕಿದೆ.
ಇನ್ನು ದಿಯಾ ಮಿರ್ಜಾ ಮಾಡಿರುವ ಆರೋಪಕ್ಕೆ ನಟ ನವಾಜುದ್ದೀನ್ ಸಿದ್ದಿಕಿ ಕೂಡ ಯಾವುದೇ ಪ್ರತಿಕ್ರಿಯೆ ಇಲ್ಲಿವರೆಗೆ ನೀಡಿಲ್ಲ. ಆದರೆ, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಲಿ ಬೆಚೊಂದರ ಫೋಟೊವೊಂದನ್ನು ಹಾಕಿಕೊಂಡು, ಇಕ್ ಒಂಕಾರ್, ಗುರು ನಾನಕ್ ಸಾಹೀಬ್ ಎಂಬ ಸಿಖ್ ಶ್ಲೋಕದ ಸಾಲನ್ನು ಬರೆದುಕೊಂಡಿದ್ದಾರೆ. ಇದರ ಹಿಂದಿನ ಗೂಢಾರ್ಥ ಕೂಡ ಪ್ರೇಕ್ಷಕರಿಗೆ ತಿಳಿಯದಾಗಿದೆ.
ಆದರೆ, ದಿಯಾ ಮಿರ್ಜಾ ಹೀಗೆ ದಿಢೀರನೇ ದಾಳಿ ಮಾಡಿರುವುದು ಬಾಲಿವುಡ್ನಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಆದರೆ, ಕೆಲವರು ಇದೊಂದಿ ಪಿಆರ್ ಸ್ಟಂಟ್ ಇದ್ದರೂ ಇರಬಹುದೆಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಲೀ, ಇದಕ್ಕೆ ನಟಿ ದಿಯಾ ಅಥವಾ ನಟ ನವಾಜ್ ಸ್ಪಷ್ಟನೆ ನೀಡಿದ ನಂತರವೇ ಹಲವು ಅನುಮಾನಗಳು ಪರಿಹಾರವಾಗಬೇಕಿದೆ, (ಏಜೆನ್ಸೀಸ್).