ರಕ್ಷಾ ಬಂಧನ ಜಾಹೀರಾತಿಗೆ 'ಡೀಪ್​ ವಿ ನೆಕ್​ ಬ್ಲೌಸ್' ಧರಿಸಿದ ಕೃತಿ ಸನೂನ್​; ಇಂಥ ಬಟ್ಟೆ ಹಾಕಿ ಹಬ್ಬ ಮಾಡ್ತಾರಾ? ಎಂದ ನೆಟ್ಟಿಗರು

Kriti Sanon's Raksha Bandhan Ad Sparks Debate Over 'Modern' Festive Look
Kriti Sanon's Raksha Bandhan Ad Sparks Debate Over 'Modern' Festive Look
Published on

ಪ್ರಮುಖ ಮುಖ್ಯಾಂಶಗಳು

  • ಕೃತಿ ಸನೂನ್​ ನಟಿಸಿರುವ ರಕ್ಷಾ ಬಂಧನದ ಜಾಹೀರಾತಿನ ವಿರುದ್ಧ ನೆಟ್ಟಿಗರು ಕಿಡಿ.
  • ಅರ್ಧಂಬರ್ಧ ಬಟ್ಟೆ ಹಾಕಿ ಯಾರು ಹಬ್ಬ ಮಾಡ್ತಾರೆ ಎಂದು ಕಿಡಿಕಾರಿದ ಜನರು.
  • ನಾಯಿಗೆ ರಾಖಿ ಕಟ್ಟುವುದು ಧಾರ್ಮಿಕ ನಿಂದನೆಗೆ ಕಾರಣವಾಗಬಹುದು ಎಂದ ನೆಟ್ಟಿಗರು.
Kriti Sanon's Raksha Bandhan Ad Sparks Debate Over Modern Festive Look:

ಬಾಲಿವುಡ್​ ನಟಿ ಕೃತಿ ಸನೂನ್​ ಅವರು ರಕ್ಷಾ ಬಂಧನದ ಜಾಹೀರಾತೊಂದರಲ್ಲಿ ನಟಿಸಿದ್ದು, ಅದರಲ್ಲಿ ಅವರು ಧರಿಸಿರುವ ಡೀಪ್​ ವೀ ನೆಕ್​​​ ಬ್ಲೌಸ್​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಹಬ್ಬದ ದಿನ ಇಂತಹ ಬಟ್ಟೆ ಧರಿಸೋದು ಸೂಕ್ತವೇ, ಅರ್ಧಂಬರ್ಧ ಬಟ್ಟೆ ಧರಿಸಿ ಯಾವುದಾದರೂ ಹಬ್ಬ ಮಾಡೋದು ನೋಡಿದ್ದೀರಾ ಎನ್ನುವ ಆಕ್ಷೇಪಗಳು ವ್ಯಕ್ತವಾಗುತ್ತಿದೆ.

ಕಾಕ್ಟೇಲ್​2 ಸಿನಿಮಾದಲ್ಲಿ ಕೃತಿ ಸನೂನ್​ ಮಿಂಚಿದ್ದರು. ಚಿತ್ರಮಂದಿರದಲ್ಲಿ ಈ ಸಿನಿಮಾ ಸಾಕಷ್ಟು ಹಿಟ್​ ಕಂಡ ನಂತರ, ಒಟಿಟಿಯಲ್ಲಿ ರಿಲೀಸ್​ ಆಗಿದೆ. ಆದರೆ ರಶ್ಮಿಕಾ ಮಂದಣ್ಣ ನಟನೆ ಹಾಗೂ ಹಿಂದಿ ಉಚ್ಛಾರತೆ ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿತ್ತು. ಸಿನಿಮಾ ಸಕ್ಸಸ್​ ನಂತರ ಜೀವಾ ಎನ್ನುವ ಜ್ಯುವೆಲ್ಲರಿ ಜಾಹೀರಾತಿನಲ್ಲಿ ನಟಿಸಿರುವ ಕೃತಿ ಅವರು, ಅದರಲ್ಲಿ ಬಿಳಿ ಬಣ್ಣದ ಬ್ರಾಲೆಟ್ ಶೈಲಿಯ ಬ್ಲೌಸ್ ಮತ್ತು ಕೇಪ್ ಮತ್ತು ಡ್ರಾಪ್ಡ್ ಸ್ಕರ್ಟ್ ಧರಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ರಕ್ಷಾ ಬಂಧನದ ಸಲುವಾಗಿ ಕೃತಿ ಸನೂನ್​ ಅವರು ತಮ್ಮನಿಗೆ ರಾಖಿ ಕಟ್ಟುತ್ತಾರೆ, ಈ ವೇಳೆ ಜೊತೆಯಲ್ಲೇ ಇರುವ ಶ್ವಾನವು ಬೊಗಳುತ್ತದೆ. ಆಗ ನಾಯಿಗೂ ಒಂದು ರಾಖಿಯನ್ನು ಕಟ್ಟಿ ತನ್ನ ಕುಟುಂಬಕ್ಕೆ ಸೇರಿದ್ದು ಎನ್ನುವಂತೆ ಬಿಂಬಿಸಲಾಗಿದೆ. ಪ್ರಾಣಿಗಳು ಕುಟುಂಬದ ಸದಸ್ಯರು ಎಂದು ಬಿಂಬಿಸುವುದು ಈ ಜಾಹೀರಾತಿನ ಉದ್ದೇಶವಾಗಿದೆ.

ನೆಟ್ಟಿಗರ ವಾದಗಳೇನು?

ಈ ಜಾಹೀರಾತಿನಲ್ಲಿ ಕೃತಿ ಸನೋನ್ ಅವರು ಸಣ್ಣ ಉಡುಪನ್ನು ಧರಿಸಿ ರಾಖಿ ಕಟ್ಟುತ್ತಿದ್ದಾರೆ. ಹಿಂದೆಲ್ಲಾ ಈ ರೀತಿಯ ಬೆತ್ತಲೆತನ ಅಥವಾ ಮೈತೋರಿಸಿಕೊಳ್ಳುವಿಕೆ ಇಷ್ಟು ಸಾಮಾನ್ಯವಾಗಿರಲಿಲ್ಲ ಎಂದು Manpu Ram ಎನ್ನುವವರು ಪೋಸ್ಟ್ ಮಾಡಿದ್ದಾರೆ.

ರಕ್ಷಾ ಬಂಧನಕ್ಕೆ ಮಾಡಲಾದ ಈ ಜಾಹೀರಾತನ್ನು...ಬೇರೆ ಧರ್ಮದ ಹಬ್ಬದ ಜಾಹೀರಾತಿಗೂ ಮಾಡಲಿ, ಉಡುಪು ಧರಿಸಿರುವ ವಿಧಾನವೂ ಹೀಗೆ ಇರಲಿ ಎಂದು ಹೇಳಿದ್ದಾರೆ.

ಮತ್ತೊಬ್ಬರು ಕೃತಿ ಸನೂನ್​ ಅವರನ್ನು ನೇರವಾಗಿ ಟ್ಯಾಗ್​ ಮಾಡಿ ನಟಿಗೆ ಹೀಗೆ ನಟಿಸಲು ನಾಚಿಕೆಯಾಗಬೇಕು. ಹೀಗೆ ಬಟ್ಟೆ ಧರಿಸಿ ಯಾರು ಹಬ್ಬವನ್ನು ಆಚರಿಸುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net