ಬಾಲಿವುಡ್‌ಗೆ ಕೃತಿ ಶೆಟ್ಟಿ : ‘ಹಮ್ ತೇರೆ ಪ್ಯಾರ್ ಮೇ’ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ‘ಉಪ್ಪೇನಾ’ ನಟಿ krithi shetty

ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ನಯನತಾರಾ, ಸಮಂತಾ ರುಥ್ ಪ್ರಭು, ತಮನ್ನಾ ಭಾಟಿಯಾ, ಶ್ರುತಿ ಹಾಸನ್ ಹೀಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಮನಸೆಳೆದ ಬಳಿಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿಯರ ಪಟ್ಟಿ ದೊಡ್ಡದಿದೆ. ಇದೀಗ ಈ ಸಾಲಿಗೆ ಮತ್ತೊಬ್ಬ ನಟಿ ಸೇರ್ಪಡೆಯಾಗುತ್ತಿದ್ದಾರೆ. ಅವರೇ ಕೃತಿ ಶೆಟ್ಟಿ.
krithi shetty
ಕೃತಿ ಶೆಟ್ಟಿ
Published on: 

ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ನಯನತಾರಾ, ಸಮಂತಾ ರುಥ್ ಪ್ರಭು, ತಮನ್ನಾ ಭಾಟಿಯಾ, ಶ್ರುತಿ ಹಾಸನ್ ಹೀಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಮನಸೆಳೆದ ಬಳಿಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿಯರ ಪಟ್ಟಿ ದೊಡ್ಡದಿದೆ. ಇದೀಗ ಈ ಸಾಲಿಗೆ ಮತ್ತೊಬ್ಬ ನಟಿ ಸೇರ್ಪಡೆಯಾಗುತ್ತಿದ್ದಾರೆ. ಅವರೇ ಕೃತಿ ಶೆಟ್ಟಿ. ತೆಲುಗಿನ ‘ಉಪ್ಪೇನಾ’ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಮಂಗಳೂರು ಮೂಲದ ಕೃತಿ, ಕ್ರಮೇಣ ‘ಶ್ಯಾಮ್ ಸಿಂಗ ರಾಯ್’, ‘ಕಸ್ಟಡಿ’, ‘ಎಆರ್‌ಎಂ’ ಸೇರಿ 10ಕ್ಕೂ ಹೆಚ್ಚು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದು, ಇದೀಗ ಬಾಲಿವುಡ್‌ನತ್ತ ಹೆಜ್ಜೆ ಹಾಕುತ್ತಿದ್ದಾರೆ. ನಿರ್ದೇಶಕ ರೋಹಿತ್ ಶೆಟ್ಟಿ ಗರಡಿಯಲ್ಲಿ ಪಳಗಿರುವ ವಿಧಿ ಘೋಡ್ಗಾಂವ್ಕರ್ ಆ್ಯಕ್ಷನ್-ಕಟ್ ಹೇಳಲಿರುವ ‘ಹಮ್ ತೇರೆ ಪ್ಯಾರ್ ಮೇ’ ಮೂಲಕ ಕೃತಿ ಹಿಂದಿ ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ‘ಸೂಪರ್ 30’ (2019) ಚಿತ್ರದಲ್ಲಿ ಕೃತಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಹಮ್ ತೇರೆ ಪ್ಯಾರ್ ಮೇ’ಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುವ ಮೂಲಕ ಬಾಲಿವುಡ್‌ನಲ್ಲೂ ಛಾಪು ಮೂಡಿಸಲು ಮುಂದಾಗುತ್ತಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ‘ಸೂರ್ಯವಂಶಿ’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಸಿಂಘಂ’, ‘ಸಿಂಘಂ ರಿಟರ್ನ್ಸ್’ ಸೇರಿ ಹಲವು ಚಿತ್ರಗಳಿಗೆ ಕಾಸ್ಟಿಂಗ್, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿರುವ ವಿಧಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಸದ್ಯ ಕೃತಿ ಶೆಟ್ಟಿ ತೆಲುಗಿನ ‘ಜನವರಿ 12 ವಿಡುದುಲ’, ತಮಿಳಿನ ‘ಜೀನಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net