ವಿರಾಟ್​, ರಣವೀರ್​ ಹಿಂದಿಕ್ಕಿದ ಕಿಂಗ್​ ಖಾನ್​​: ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಪಟ್ಟಕೇರಿದ ಶಾರುಖ್ ಖಾನ್​!​ Shah Rukh Khan

ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಪಟ್ಟಕ್ಕೇರಿದ ಕಿಂಗ್ ಖಾನ್
ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಪಟ್ಟಕ್ಕೇರಿದ ಕಿಂಗ್ ಖಾನ್
Published on

ಪ್ರಮುಖ ಮುಖ್ಯಾಂಶಗಳು

  • ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಪಟ್ಟಕ್ಕೇರಿದ ಕಿಂಗ್ ಖಾನ್
  • ವಿರಾಟ್ ಕೊಹ್ಲಿ, ರಣವೀರ್ ಸಿಂಗ್ ಹಿಂದಿಕ್ಕಿದ ಶಾರುಖ್ ಖಾನ್
  • ಪಟ್ಟಿಯಲ್ಲಿ ಕ್ರಿಕೆಟ್​-ಬಾಲಿವುಡ್​ ತಾರೆಗಳ ಹೆಸರು
ಮುಂಬೈ: ಇತ್ತೀಚೆಗೆ ಪ್ರಕಟವಾದ ಕ್ರೋಲ್‌ನ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ 2025 ವರದಿ ಪ್ರಕಾರ, ಸುಮಾರು 36 ಬ್ರಾಂಡ್​​ಗಳ ಜಾಹೀರಾತನ್ನು ಹೊಂದುವ ಮೂಲಕ ಬಾಲಿವುಡ್​ ನಟ ಕಿಂಗ್​ ಖಾನ್​ ಖ್ಯಾತಿಯ ಶಾರುಖ್​ ಖಾನ್ (​Shah Rukh Khan)​ ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಈ ಪಟ್ಟಿಯಲ್ಲಿ ಶಾರುಖ್​ ಖಾನ್​ ಸುಮಾರು 177.9 ಮಿಲಿಯನ್​ ಡಾಲರ್​ (1,691 ಕೋಟಿ) ಮೌಲ್ಯದೊಂದಿಗೆ ಪ್ರಥಮ ಸ್ಥಾನದಲ್ಲಿದರೆ, ಧುರಂಧರ್​ ಖ್ಯಾತಿಯ ರಣವೀರ್​ ಸಿಂಗ್ 162.9 ಮಿಲಿಯನ್​ ಡಾಲರ್ (1,547 ಕೋಟಿ) ನೊಂದಿಗೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಹಾಗೂ ರನ್​ ಮಷಿನ್​ ವಿರಾಟ್​ ಕೊಹ್ಲಿ 158.4 ಮಿಲಿಯನ್​ ಡಾಲರ್​​ (1,505 ಕೋಟಿ) ನೊಂದಿಗೆ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಮೂರನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಂಪ್​!

2024 ರಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ರಣವೀರ್ ಎರಡನೇ ಹಾಗೂ ಶಾರುಖ್​ ಖಾನ್​ ಮೂರನೇ ಸ್ಥಾನದಲ್ಲಿದ್ದರು. ಆದರೆ ಇವರ ಜವಾನ್​ ಮತ್ತು ಪಠಾಣ್​ ಸಿನಿಮಾಗಳು ಭರ್ಜರಿ ಯಶಸ್ಸನ್ನು ಕಂಡ ಹಿನ್ನಲೆಯಲ್ಲಿ, ಖಾನ್​ರ ಮಾರುಕಟ್ಟೆ ಮೌಲ್ಯ ಹೆಚ್ಚಳವಾದ ಹಿನ್ನಲೆಯಲ್ಲಿ ಈ ಬಾರಿ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

2024 ರಲ್ಲಿ ಶಾರುಖ್​ ಖಾನ್​ 28 ಬ್ರಾಂಡ್​ಗಳಿಗೆ ಜಾಹೀರಾತು ನೀಡುತ್ತಿದ್ದರೆ, ಈಗ ಈ ಸಂಖ್ಯೆ 36 ಕ್ಕೆ ಏರಿಕೆ ಕಂಡಿದ್ದು, ಖಾನ್​ ಪ್ರತಿ ಬ್ರಾಂಡ್​ನಿಂದ ಕನಿಷ್ಟ 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ. ಅಂತೆಯೇ ಇವರ ಕಿಂಗ್​ ಸಂಸ್ಥೆ ಕೂಡ ಲಾಭಗಳಿಸುತ್ತಿರುವ ಕಾರಣ ಶಾರುಖ್​ ಖಾನ್​ ಮತ್ತೊಮ್ಮೆ ಬಾದ್​ ಶಾ ಮೂಡ್​ಗೆ ಮರಳಿದ್ದಾರೆ ಎಂಬ ಲೆಕ್ಕಾಚಾರ ಕೇಳಿ ಬರುತ್ತಿದೆ.


ಪಟ್ಟಿಯಲ್ಲಿ ಸಿನಿಮಾ- ಕ್ರಿಕೆಟ್​ ತಾರೆಗಳ ಮೇಲುಗೈ!

ಬಿಡುಗಡೆಯಾದ ಪಟ್ಟಿ ಪ್ರಕಾರ, ಭಾರತದ ಬಹುತೇಕ ಜಾಹೀರಾತುಗಳಲ್ಲಿ ಕ್ರಿಕೆಟ್​ ಆಟಗಾರರು ಹಾಗೂ ಸಿನಿಮಾ ತಾರೆಗಳ ಹೆಸರೇ ತುಂಬಿದೆ. ಶಾರುಖ್​, ರಣವೀರ್​ ಹೊರತಾಗಿ ಆಲಿಯಾ ಭಟ್​, ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್​ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಹಾಗೆಯೇ ವಿರಾಟ್​ ಜೊತೆಗೆ, ಮಹೇಂದ್ರ ಸಿಂಗ್ ಧೋನಿ, ರೋಹಿತ್​ ಶರ್ಮಾ, ಸಚಿನ್​ ತೆಂಡೂಲ್ಕರ್​ ಹಾಗೂ ಜಸ್ಪ್ರೀತ್ ಬುಮ್ರಾ ಕೂಡ ಈ ಲಿಸ್ಟ್​ನಲ್ಲಿದ್ದಾರೆ. ಇತ್ತೀಚೆಗೆ ಕಾಮನ್​ವೆಲ್ತ್​​ ಕ್ರೀಡಾಕೂಟ ಮುಗಿದಿದ್ದು, ಮುಂದಿನ ವರ್ಷ ಕ್ರಿಕೆಟ್ ಹೊರತಾಗಿ ಇತರೆ ಆಟಗಾರರ ಹೆಸರನ್ನು ಕೂಡ ಕಾಣಲು ಅವಕಾಶವಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net