ಕೀರ್ತಿ ಪತಾಕೆ!: ಆರು ಸಿನಿಮಾಗಳು ಕೈಯಲ್ಲಿರುವಾಗಲೇ ಮತ್ತೊಂದು ಸಿನಿಮಾ ಘೋಷಿಸಿದ ನಟಿ

ಕೀರ್ತಿ ಸುರೇಶ್​
ಕೀರ್ತಿ ಸುರೇಶ್​
Published on

ಪ್ರಮುಖ ಮುಖ್ಯಾಂಶಗಳು

  • ಮದುವೆ ಬಳಿಕವೂ ಬಿಜಿಯಾದ ನಟಿ ಕೀರ್ತಿ ಸುರೇಶ್
  • ಡೊರೊಥಿ ಸಿನಿಮಾ ಘೋಷಿಸಿದ ಬಹುಭಾಷಾ ತಾರೆ
  • ಟೈಟಲ್​ ಟೀಸರ್ ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡ ನಟಿ

ಮದುವೆ ಬಳಿಕವೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಜತೆಗೆ ಬೇಡಿಕೆಯಲ್ಲಿರುವ ನಟಿಯರ ಪಟ್ಟಿ ದೊಡ್ಡದಿದೆ. ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಯನತಾರಾ, ಕಾಜಲ್, ಜ್ಯೋತಿಕಾ.. ಹೀಗೆ ಸಾಗುತ್ತದೆ. ಇದಕ್ಕೆ ಇದೀಗ ಕೀರ್ತೀ ಸುರೇಶ್ ಸೇರಿಸಬಹುದು. ಯಾಕೆಂದರೆ, ಮದುವೆ ಬಳಿಕವೂ ಅವರು ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ. ಸದ್ಯ ಅವರ ಕೈಯಲ್ಲಿ ಒಟ್ಟು ನಾಲ್ಕು ಭಾಷೆಯ ಆರು ಸಿನಿಮಾಗಳಿವೆ. ಈಗಾಗಲೇ ಮೂರು ಸಿನಿಮಾಗಳ ಶೂಟಿಂಗ್ ಮುಗಿಸಿದ್ದರೆ, ಇನ್ನು ಮೂರು ಚಿತ್ರಗಳ ಶೂಟಿಂಗ್‌ನಲ್ಲಿದ್ದಾರೆ. ಹೀಗಿರುವಾಗಲೇ ಕೀರ್ತಿ ಸುರೇಶ್ ತಮಿಳಿನ ‘ಡೊರೊಥಿ’ ಎಂಬ ಹೊಸ ಚಿತ್ರ ಘೋಷಿಸಿದ್ದಾರೆ. 1.28 ನಿಮಿಷದ ಟೈಟಲ್ ಟೀಸರ್ ರಿಲೀಸ್ ಮಾಡುವ ಮೂಲಕ ಇತ್ತೀಚೆಗೆ ಸಿನಿಮಾ ಘೋಷಿಸಲಾಯಿತು. ‘ಪೆಟ್ಟಾ’ ಖ್ಯಾತಿಯ ಕಾರ್ತಿಕ್ ಸುಬ್ಬರಾಜ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸದ್ಯ ರಿಲೀಸ್ ಮಾಡಿರುವ ಟೀಸರ್‌ನಲ್ಲಿ ಕೀರ್ತಿ ಸುರೇಶ್ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೊರೆಂಟೊ ಚಲನಚಿತ್ರೋತ್ಸವದಲ್ಲಿ ಸಿನಿಮಾ ತೆರೆಕಂಡು ಮೆಚ್ಚುಗೆ ಗಳಿಸಿದೆ. ಇದೇ ಸೆ. 25ಕ್ಕೆ ಚಿತ್ರ ತೆರೆಗೆ ಬರಲಿದೆ. ಕೀರ್ತಿ ಜತೆಗೆ ಸನಂತ್ ಮತ್ತು ರಿಷಿಕಾಂತ್ ಕಲಾಬಳಗದಲ್ಲಿದ್ದಾರೆ. ಇನ್ನುಳಿದಂತೆ ಕೀರ್ತಿ ಸುರೇಶ್ ಸದ್ಯ ಹಿಂದಿಯ ‘ರ‌್ತಾರ್’, ತಮಿಳಿನ ‘ಸತ್ಯವಾನ್ ಸಾವಿತ್ರಿ’ ರಿಲೀಸ್‌ಗೆ ಎದುರುನೋಡುತ್ತಿದ್ದರೆ, ತೆಲುಗಿನ ‘ರೌಡಿ ಜನಾರ್ದನ’, ತಮಿಳಿನ ‘ಕನ್ನಿವೇಡಿ’, ಮಲಯಾಳಂನ ‘ತೊಟ್ಟಂ’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net