Karan Johar: ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೈಗೊಂಡಿರುವ ದಿಢೀರ್ ನಿರ್ಧಾರವೊಂದು ಇಡೀ ಚಿತ್ರರಂಗ ಹಾಗೂ ಅವರ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಯಾವಾಗಲೂ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿರುತ್ತಿದ್ದ ಕರಣ್ ತಮ್ಮ ಆಪ್ತ ಸ್ನೇಹಿತರಾದ ಕಿಂಗ್ ಖಾನ್ ಶಾರುಖ್ ಖಾನ್, ಕಾಜೋಲ್, ಮನೀಶ್ ಮಲ್ಹೋತ್ರಾ, ನಟಿ ಅನನ್ಯಾ ಪಾಂಡೆ ಮತ್ತು ಫರಾ ಖಾನ್ ಸೇರಿದಂತೆ ಇಡೀ ಬಾಲಿವುಡ್ ಸೆಲೆಬ್ರಿಟಿಗಳನ್ನು ಏಕಾಏಕಿ 'ಅನ್‌ಫಾಲೋ' (Unfollow) ಮಾಡಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಈ ಅನ್‌ಫಾಲೋ ನಿರ್ಧಾರದ ಕುರಿತು ಹರಿದಾಡುತ್ತಿದ್ದ ಎಲ್ಲಾ ಗಾಸಿಪ್‌ಗಳಿಗೆ ಕರಣ್ ತಾವೇ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ.