ಕಳೆದ ಕೆಲವು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಕಂಗನಾ ಅವರ ಹೊಸ ಫೋಟೋವೊಂದು ಸಿಕ್ಕಾಪಟ್ಟೆ ಹರಿದಾಡುತ್ತಿತ್ತು. ಅದರಲ್ಲಿ ಅವರು ಸಾಂಪ್ರದಾಯಿಕ ಉಡುಪು ಧರಿಸಿ, ಕೊರಳಲ್ಲಿ ಮಂಗಳಸೂತ್ರದೊಂದಿಗೆ ಕಾಣಿಸಿಕೊಂಡಿದ್ದರು.ಈ ಫೋಟೋ ನೋಡಿದ ಅಭಿಮಾನಿಗಳು ಕಂಗನಾ ಯಾರಿಗೂ ತಿಳಿಯದಂತೆ ಸಪ್ತಪದಿ ತುಳಿದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಲು ಶುರು ಮಾಡಿದ್ದರು.