ಅದೊಂದು ವಿಫಲ ಪ್ರಯತ್ನ: 'ರಾಮಾಯಣ' ವನ್ನು 'ಆದಿಪುರುಷ್​' ಜೊತೆ ಹೋಲಿಸಬೇಡಿ; ಪ್ರೇಕ್ಷಕರಲ್ಲಿ ಮನೋಜ್ ಮುಂತಶಿರ್ ಮನವಿ! Manoj Muntashir on Adipurush and Ramayana

ರಾಮಾಯಣ' ಚಿತ್ರವನ್ನು 'ಆದಿಪುರುಷ್' ಜೊತೆ ಹೋಲಿಸಬೇಡಿ
ರಾಮಾಯಣ' ಚಿತ್ರವನ್ನು 'ಆದಿಪುರುಷ್' ಜೊತೆ ಹೋಲಿಸಬೇಡಿ
Published on

ಪ್ರಮುಖ ಮುಖ್ಯಾಂಶಗಳು

  • ಅದೊಂದು ವಿಫಲ ಸಿನಿಮಾ
  • ರಾಮಾಯಣ' ಚಿತ್ರವನ್ನು 'ಆದಿಪುರುಷ್' ಜೊತೆ ಹೋಲಿಸಬೇಡಿ
  • ಪ್ರೇಕ್ಷಕರಲ್ಲಿ ಮನವಿ ಮಾಡಿದ ಗೀತರಚನೆಕಾರ ಮನೋಜ್ ಮುಂತಶಿರ್
ಮುಂಬೈ: ಕೇವಲ ಬಾಲಿವುಡ್​ ಮಾತ್ರವಲ್ಲದೆ ಈಡೀ ಭಾರತದ ಚಿತ್ರರಂಗಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಸಿನಿಮಾ ಎಂದರೆ ಅದು ನಮಿತ್​ ಮಲೋತ್ರಾ ನಿರ್ಮಾಣದ ರಾಮಾಯಣ ಎಂದರೆ ಸುಳ್ಳಲ್ಲ. ನಮ್ಮ ದೇಶದ ಮಣ್ಣಿನ ಕತೆ ದೊಡ್ಡ ಪರದೆ ಮೇಲೆ ಯಾವ ರೀತಿಯಲ್ಲಿ ಕಾಣಿಸಲಿದೆ ಎಂಬ ಕುತೂಹಲ ಪ್ರತಿಯೊಬ್ಬ ಭಾರತೀಯನಲ್ಲಿದೆ ಎಂದರೆ ತಪ್ಪಾಗದು.
ಆದರೆ, ಕೆಲ ದಿನಗಳಿಂದ ಇದೇ ರೀತಿ ರಾಮಾಯಣದ ಕತೆಯನ್ನು ಸಿನಿಮಾದಲ್ಲಿ ಹೇಳಲು ಹೋಗಿದ್ದ ಆದಿಪುರುಷ್​ ಸಿನಿಮಾಗೆ 'ರಾಮಾಯಣ' ಸಿನಿಮಾವನ್ನು ಹೋಲಿಸುವ ಸುದ್ದಿಗಳು ಅಲ್ಲಲ್ಲಿ ಕೇಳಿಬರುತ್ತಿದ್ದು, ಈ ಬಗ್ಗೆ ಗೀತರಚನೆಕಾರ ಮನೋಜ್ ಮುಂತಶಿರ್ (Manoj Muntashir on Adipurush and Ramayana) ಮೌನ ಮುರಿದಿದ್ದಾರೆ.

ರಾಮಾಯಣವನ್ನು ಆದಿಪುರುಷ್​ ಜೊತೆ ಹೋಲಿಸಬೇಡಿ!

ರಾಮಾಯಣ ಸಿನಿಮಾವನ್ನು ಈ ಹಿಂದೆ ತೆರೆಕಂಡಿದ್ದ ಆದಿಪುರುಷ್​ ಜೊತೆ ಹೋಲಿಸಿ ಮಾತನಾಡುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿರುವ ಮನೋಜ್ ಮುಂತಶಿರ್, ನಾನು ಆದಿಪುರುಷ್​ ಸಿನಿಮಾದ ಹಾಡುಗಳನ್ನು ಬರೆದಿದ್ದೆನೆ. ಆ ಸಿನಿಮಾವನ್ನು ಯಶಸ್ವಿಗೊಳಿಸಲು ತಂಡ ತುಂಬಾ ಕಷ್ಟಪಟ್ಟಿತ್ತು, ಆದರೆ ಜನರಿಗೆ ಸಿನಿಮಾ ಇಷ್ಟವಾಗಲಿಲ್ಲ, ಅದೊಂದು ವ್ಯರ್ಥ ಪ್ರಯತ್ನವಾಯಿತು ಎಂದಿದ್ದಾರೆ.

ಆದರೆ ಈಗ ತೆರೆ ಮೇಲೆ ಬರಲಿರುವ ರಾಮಾಯಣ ಸಿನಿಮಾ ಮೇಲೆ ನನಗೆ ಕೂಡ ಬಹಳ ನಂಬಿಕೆಯಿದೆ. ಅದರಲ್ಲೂ ನನಗೆ ರಾವಣನ ಪಾತ್ರದಲ್ಲಿ ಯಶ್​ ಕಾಣಿಸಿಕೊಳ್ಳುತ್ತಿರುವುದು ವೈಯಕ್ತಿಕವಾಗಿ ಇಷ್ಟವಾಗಿದ್ದು, ಈ ಸಿನಿಮಾವನ್ನು ಬೇರೆ ಯಾವುದೇ ಸಿನಿಮಾಗಳಿಗೆ ಹೋಲಿಸಬೇಡಿ ಎಂದು ಮನವಿ ಮಾಡಿದ್ದಾರೆ.


ದೀಪಾವಳಿಗೆ 'ರಾಮಾಯಣ'!

ನಮಿತ್​ ಮಲೋತ್ರಾ ನಿರ್ಮಾಣದ, ಮನೋಜ್​ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ರಾಮಾಯಣ ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆಯಾಗಲಿ ಎಂದು ಸಿನಿ ತಂಡ ಈಗಾಗಲೇ ತಿಳಿಸಿದೆ. 

2026 ರ ದೀಪಾವಳಿಗೆ ಸಿನಿಮಾದ ಮೊದಲ ಭಾಗ ತೆರೆಕಂಡರೆ, 2027 ರ ದೀಪಾವಳಿಗೆ ಎರಡನೇ ಭಾಗ ಬಿಡುಗಡೆಯಾಗಲಿದೆ. 

ಈ ಸಿನಿಮಾದಲ್ಲಿ ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​ ಕಾಣಿಸಿಕೊಂಡರೆ, ರಾವಣನಾಗಿ ಯಶ್​, ಸೀತೆಯಾಗಿ ಸಾಯಿ ಪಲ್ಲವಿ, ಹನುಮನಾಗಿ ಸನ್ನಿ ಡಿಯೋಲ್​ ಮಿಂಚಲಿದ್ದಾರೆ. ಇವರು ಜೊತೆ ಪ್ರತಿಯೊಂದು ಪಾತ್ರದಲ್ಲಿ ಖ್ಯಾತನಾಮರೇ ಅಭಿನಯಿಸಲಿದ್ದು, ಈ ಸಿನಿಮಾದ ಬಜೆಟ್​ ಸುಮಾರು 4,000 ಕೋಟಿ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net