ಮೊದಲ ದಿನವೇ ಫ್ಲಾಪ್‌ ಅಂದಿದ್ದರು.. ಈಗ 60 ಕೋಟಿ ಕಲೆಕ್ಷನ್! 2 ಕೋಟಿಯ ‘ಹನುಮಾನ್ ಅಂಶ’ ಸಕ್ಸಸ್ ಸ್ಟೋರಿ ಇಲ್ಲಿದೆ | Hanuman Ansh

ನೀಮ್ ಕರೋಲಿ ಬಾಬಾ ಜೀವನ ಆಧರಿಸಿದ 'ಹನುಮಾನ್ ಅಂಶ್' ಸಿನಿಮಾ
ನೀಮ್ ಕರೋಲಿ ಬಾಬಾ ಜೀವನ ಆಧರಿಸಿದ 'ಹನುಮಾನ್ ಅಂಶ್' ಸಿನಿಮಾ
Published on
ಮುಂಬೈ: ಸದ್ಯ ಭಾರತೀಯ ಚಿತ್ರರಂಗದಲ್ಲಿ ಸಿನಿಮಾವೊಂದನ್ನು ನಿರ್ಮಿಸ ಬೇಕೆಂದರೆ ನೂರಾರು ಕೋಟಿ ಹೂಡಿಕೆ ಮಾಡಬೇಕು, ಸ್ಟಾರ್​ ನಟ-ನಟಿಯರನ್ನು ಕಾಸ್ಟಿಂಗ್​ ಮಾಡಬೇಕು ಜೊತೆ ಸಿನಿಮಾವನ್ನು ಐದಾರು ಭಾಷೆಗಳಲ್ಲಿ  ಡಬ್ಬಿಂಗ್​ ಮಾಡಿ ಪ್ಯಾನ್​ ಇಂಡಿಯಾ ಸಿನಿಮಾ ಎಂದು ಮಾರ್ಕೆಟಿಂಗ್​ ಮಾಡಬೇಕು. ಅಂದರೆ ಮಾತ್ರ ಸಿನಿಮಾ ಯಶಸ್ಸನ್ನು ಕಾಣುತ್ತದೆ ಎಂದು ಹೇಳಲಾಗುತ್ತದೆ.
ಆದರೆ, ನಿರ್ಮಿಸಿರುವ ಸಿನಿಮಾದ ಕಥೆ ಹಾಗೂ ಬಾಯ್ಮಾತಿನ ಮೂಲಕ ದೊರೆಯುವ ಪ್ರಚಾರದ ಮುಂದೆ ಯಾವ ಪ್ಯಾನ್​ ಇಂಡಿಯಾ ಪ್ರಮೋಶನ್​ ಕೂಡ ಮಕಾಡೆ ಮಲಗುತ್ತೆ ಎನ್ನುವುದಕ್ಕೆ ಇತ್ತೀಚೆಗೆ ತೆರೆಕಂಡಿರುವ ಹನುಮಾನ್ ಅಂಶ (Hanuman Ansh) ಸಿನಿಮಾವೇ ನೈಜ ನಿದರ್ಶನವಾಗಿದೆ. 

2 ಕೋಟಿ ಹೂಡಿದೆ ಶೇ.2000 ಲಾಭ!

ವಿಶಾಲ್​ ಚತುರ್ವೇದಿ ನಿರ್ದೇಶನದ ಈ ಹನುಮಾನ್​ ಅಂಶ ಎಂಬ ಸಿನಿಮಾ ಕೇವಲ 2 ಕೋಟಿ ಬಂಡವಾಳದೊಂದಿದೆ ಆಗಸ್ಟ್​​ 7 ರಂದು ತೆರೆಕಂಡಿತ್ತು. ಮೊದಲ ದಿನ ಕೇವಲ 10 ಲಕ್ಷ ಗಳಿಕೆ ಮಾಡುವ ಮೂಲಕ ಈ ಸಿನಿಮಾ ಫ್ಲಾಪ್​​ ಆಗಲಿದೆ ಎಂದು ಬಿ-ಟೌನ್​ ಮಾನಾಡಿಕೊಳ್ಳುತ್ತಿತ್ತು.
ಆದರೆ, ನಂತರದ ದಿನಗಳಲ್ಲಿ ಈ ಸಿನಿಮಾ ಕುರಿತು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಚಾರ ದೊರೆತ ಪರಿಣಾಮ ನಾಲ್ಕನೇ ವಾರಕ್ಕೆ ಈ ಸಿನಿಮಾ ಸುಮಾರು 28 ಕೋಟಿ ಗಳಿಕೆ ಮಾಡಿ ಬಾಕ್ಸ್​​ ಆಫೀಸ್​ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ, ಇಲ್ಲಿವರೆಗೆ ಸುಮಾರು 60 ಕೋಟಿಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ಹೂಡಿಕೆಗಿಂತ ಸುಮಾರು 21 ಪಟ್ಟು ಹೆಚ್ಚಿಗೆ ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
ಧುರಂಧರ್​ ರೆಕಾರ್ಡ್​ ಬ್ರೇಕ್​!
ಆದಿತ್ಯ ಧರ್​ ನಿರ್ದೇಶನದ ಹಾಗೂ ರಣವೀರ್ ಸಿಂಗ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಧುರಂಧರ್​ (ಮೊದಲ ಭಾಗ) ಸಿನಿಮಾ 100 ಕೋಟಿ ಬಂಡವಾದೊಂದಿದೆ ತೆರೆಕಂಡು ಸುಮಾರು 1200 ಕೋಟಿ ಗಳಿಸಿ ಶೇ.1000 ಲಾಭಗಳಿಸಿದ ಸಿನಿಮಾ ಎಂಬ ದಾಖಲೆ ಮಾಡಿತ್ತು. ಆದರೆ ಈಗ ಹನುಮಾನ್​ ಅಂಶ ಶೇ.2000 ಪಟ್ಟು ಲಾಭ ಗಳಿಸುವ ಮೂಲಕ ಈ ದಾಖಲೆಯನ್ನು ಪುಡಿಗಟ್ಟಿದೆ. ಇನ್ನೂ ಈ ಸಿನಿಮಾ 100 ಕೋಟಿ ಗಳಿಕೆ ಮಾಡಿದರೆ ಈ ಲೆಕ್ಕಾಚಾರ ಶೇ.5000 ಆಗಲಿದೆ ಎಂದು ಹೇಳಲಾಗುತ್ತಿದೆ.

ಏನಿದು ಹನುಮಾನ್​ ಅಂಶ ಸಿನಿಮಾ? 

ಹನುಮಾನ್​ ಅಂಶ ಎಂಬ ಈ ಸಿನಿಮಾ ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಯನ್ನು ಆಧರಿಸಿ ನಿರ್ಮಿಸಲಾದ ಸಿನಿಮಾವಾಗಿದೆ. ಲಕ್ಷ್ಮಣ ದಾಸ್ ಎಂಬ ಬಾಲಕ ತನ್ನ ತಾಯಿಯ ನಿಧನ ಬಳಿಕ ಹೇಗೆ ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಾ, ಜನ ಸೇವೆ ಮಾಡುತ್ತಾ ವಿಶ್ವ ಪ್ರಸಿದ್ಧಿಯನ್ನು ಪಡೆಯುತ್ತಾನೆ ಎನ್ನುವುದೇ ಚಿತ್ರದ ಕಥಾ ಹಂದರವಾಗಿದೆ. 
ನೀಮ್ ಕರೋಲಿ ಬಾಬಾ ಅವರನ್ನು ಸಾಕ್ಷಾತ್​ ಆಂಜನೇಯನ ಅವತಾರವೆಂದು ಜನ ನಂಬುವ ಕಾರಣಕ್ಕಾಗಿ ಈ ಸಿನಿಮಾಗೆ ಹನುಮಾನ್​ ಅಂಶ ಎಂದು ಹೆಸರಿಡಲಾಗಿದ್ದು, ಸಿನಿಮಾದ ಅನಿರೀಕ್ಷಿತ ಯಶಸ್ಸಿನ ನಂತರ ನಿರ್ದೇಶಕ ವಿಶಾಲ್​ ಚತುರ್ವೇದಿ ಹನುಮಾನ್​ ಅಂಶ ಪಾರ್ಟ್​ 2 ಅನ್ನು ಘೋಷಿಸಿದ್ದಾರೆ, (ಏಜನ್ಸೀಸ್​).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net