Hollywood Movies ruling Indian BO - ಭಾರತದಲ್ಲಿ ಹಾಲಿವುಡ್ ಚಿತ್ರಗಳ ಹಂಗಾಮ

Hollywood Movies ruling Indian BO
Hollywood Movies ruling Indian BO
Published on
Hollywood Movies ruling Indian BO -
ಭಾರತೀಯ ಸಿನಿಮಾಗಳು ಪ್ಯಾನ್​ ಇಂಡಿಯಾ, ಪ್ಯಾನ್​ ವರ್ಲ್ಡ್​ ಅಂತ ಸವಾರಿ ಹೊರಟಿದ್ದರೆ, ಇತ್ತ ಹಾಲಿವುಡ್​ ಚಿತ್ರಗಳು ಸದ್ದಿಲ್ಲದೇ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿವೆ. ಅದಕ್ಕೆ ಸಾ ಎಂಬಂತೆ ಈ ವರ್ಷ ಇದುವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಗಳಿಕೆ ಮಾಡಿಕೊಂಡ ಟಾಪ್​ 10 ಚಿತ್ರಗಳ ಪೈಕಿ ಎರಡು ಇಂಗ್ಲೀಷ್​ ಸಿನಿಮಾಗಳು ಸ್ಥಾನ ಪಡೆದಿವೆ. ಅಲ್ಲದೇ ಇನ್ನೂ ನಾಲ್ಕು ಸಿನಿಮಾಗಳು ₹50 ಕೋಟಿಗೂ ಹೆಚ್ಚು ಗಳಿಕೆ ಮಾಡಿಕೊಂಡಿವೆ. ಹಾಲಿವುಡ್​ ಇತಿಹಾಸದಲ್ಲೇ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿಕೊಂಡ ಟಾಪ್​ 10 ಸಿನಿಮಾಗಳಲ್ಲಿ ಆರು 2020ರ ನಂತರ ಬಿಡುಗಡೆಯಾಗಿರುವ ಚಿತ್ರಗಳಿವೆ. ಅದರರ್ಥ ಭಾರತದ ಮಾರುಕಟ್ಟೆಗಾಗಿ ಹಾಲಿವುಡ್​ ಮತ್ತು ಭಾರತೀಯ ಸಿನಿಮಾಗಳ ನಡುವಿನ ಕದನ ತೀವ್ರಗೊಳ್ಳುವ ಕಾಲ ಸನ್ನಿಹಿತವಾಗಿದೆ. ಆದರೆ, ಇದರಿಂದ ಭಾರತದ ಸಣ್ಣ ಮತ್ತು ಮಧ್ಯಮ ಬಜೆಟ್​ನ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿ ಪ್ರಾದೇಶಿಕ ಚಿತ್ರಗಳಿಗೆ ಅತಿದೊಡ್ಡ ಹೊಡೆತ ಬೀಳುವ ಸಾಧ್ಯತೆಯೂ ಇದೆ.

ಇಂಡಿಯಾ ಈ ವರ್ಷ...

ಈ ವರ್ಷ ಭಾರತದ ವಿವಿಧ ಚಿತ್ರರಂಗಗಳಲ್ಲಿ ಸುಮಾರು 1000ಕ್ಕೂ ಅಧಿಕ ಚಿತ್ರಗಳು ರಿಲೀಸ್​ ಆಗಿವೆ. ಇದುವರೆಗೆ ತೆರೆಗೆ ಬಂದ 95 ಹಿಂದಿ ಸಿನಿಮಾಗಳಲ್ಲಿ "ಧುರಂಧರ್​ 2', "ಬಾರ್ಡರ್​ 2', "ಧಮಾಲ್​ 4', "ಭೂತ್​ ಬಂಗ್ಲಾ', 104 ತಮಿಳು ಚಿತ್ರಗಳಲ್ಲಿ "ಕರುಪ್ಪು', "ಜನನಾಯಗನ್​', 115 ತೆಲುಗು ಸಿನಿಮಾಗಳಲ್ಲಿ "ಪೆದ್ದಿ' ಮತ್ತು "ಮನಶಂಕರ ವರಪ್ರಸಾದಗಾರು'... ಹೀಗೆ ಮೂರು ಭಾಷೆಗಳು 320 ಪ್ಲಸ್​ ಚಿತ್ರಗಳಲ್ಲಿ ಎಂಟು ಭಾರತದ ಸಿನಿಮಾಗಳು ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆದಿವೆ. ಆದರೆ, ಈ ವರ್ಷ ಭಾರತದಲ್ಲಿ ಅತಿಹೆಚ್ಚು ಕಲೆಕ್ಷನ್​ ಮಾಡಿಕೊಂಡ ಎರಡನೇ ಸಿನಿಮಾ ಹಿಂದಿ, ತೆಲುಗು, ತಮಿಳಿನ ಚಿತ್ರವಲ್ಲ. ಬದಲಾಗಿ ಹಾಲಿವುಡ್​ನ ಸೂಪರ್​ಹೀರೋ ಸಿನಿಮಾ "ಸ್ಪೈಡರ್​​ಮ್ಯಾನ್​: ಬ್ರ್ಯಾಂಡ್​​ ನ್ಯೂ ಡೇ'. ರಿಲೀಸ್​ ಆದ ಕೇವಲ 12 ದಿನಗಳಲ್ಲಿ ಭಾರತದಲ್ಲೇ ಬರೋಬ್ಬರಿ ₹525 ಕೋಟಿ ಬಾಚಿಕೊಳ್ಳುವ ಮೂಲಕ, ಹಾಲಿವುಡ್​ ಇತಿಹಾಸದಲ್ಲೇ ಭಾರತದಲ್ಲಿ ₹500 ಕೋಟಿ ಕ್ಲಬ್​ಗೆ ಸೇರಿದ ಮೊದಲ ಇಂಗ್ಲೀಷ್​ ಸಿನಿಮಾ ಹಾಗೂ ಅತಿಹೆಚ್ಚು ಗಳಿಕೆ ಮಾಡಿಕೊಂಡ ಹಾಲಿವುಡ್​ ಸಿನಿಮಾ ಎಂಬ ದಾಖಲೆ ಸೃಷ್ಟಿಸಿದೆ. ಹಾಗೇ ಕಳೆದ ತಿಂಗಳು ರಿಲೀಸ್​ ಆದ ಕ್ರಿಸ್ಟೋರ್​ ನೊಲನ್​ ನಿರ್ದೇಶನದ "ದ ಒಡಿಸ್ಸಿ' ಕೂಡ ಭಾರತದಲ್ಲಿ ₹230 ಕೋಟಿ ಗಳಿಕೆ ಮಾಡಿಕೊಂಡಿದೆ. ಉಳಿದಂತೆ "ಅಬ್ಸೆಷನ್​' (₹84 ಕೋಟಿ), "ಪ್ರಾಜೆಕ್ಟ್​ ಹೇಲ್​ ಮೇರಿ' (₹75 ಕೋಟಿ), "ಮೈಕಲ್​' (₹72 ಕೋಟಿ) ಸೇರಿ ಇನ್ನೂ ಕೆಲ ಹಾಲಿವುಡ್​ ಸಿನಿಮಾಗಳು ಈ ವರ್ಷ ಭಾರತದ ಬಾಕ್ಸಾಫಿಸಿನಲ್ಲೂ ಗೆಲುವಿನ ಓಟ ಕಂಡಿವೆ.

ಗುಣಮಟ್ಟದ ಡಬ್ಬಿಂಗ್​

ಹಾಲಿವುಡ್​ ಸಿನಿಮಾಗಳನ್ನು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಡಬ್ಬಿಂಗ್​ ಮಾಡಿ ಥಿಯೇಟರ್​ಗಳಲ್ಲಿ ರಿಲೀಸ್​ ಮಾಡುವುದು, ಹಾಗೂ ಇನ್ನೂ ಹತ್ತಿಪ್ಪತ್ತು ಭಾಷೆಗಳಲ್ಲಿ ಡಬ್​ ಮಾಡಿ ಒಟಿಟಿಯಲ್ಲಿ ಬಿಡುಗಡೆ ಮಾಡುವುದು, ಟಿವಿಯಲ್ಲಿ ಪ್ರಸಾರ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಹೀಗಾಗಿ ಭಾರತದಲ್ಲಿ ಹಾಲಿವುಡ್​ ಸಿನಿಮಾಗಳಿಗೆ ಹೊಸ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ""ಸ್ಪೈಡರ್​​ಮ್ಯಾನ್​: ಬ್ರ್ಯಾಂಡ್​​ ನ್ಯೂ ಡೇ'. ಹೌದು, ಭಾರತದಲ್ಲಿ ಸಿನಿಮಾ ರಿಲೀಸ್​ ಆದ ಮೊದಲ ಮೂರು ದಿನ ಇಂಗ್ಲೀಷ್​ನ 8000 ಶೋಗಳು ಶೇಕಡಾ 55ರಷ್ಟು ತುಂಬಿದ್ದರೆ, ಹಿಂದಿ, ತಮಿಳು, ತೆಲುಗಿನ 7000 ಶೀಗಳು ಶೇಕಡಾ 95ರಷ್ಟು ಹೌಸ್​ುಲ್​ ಆಗಿವೆ.

ಕೈಹಿಡಿಯುತ್ತಿರುವ ಜೆನ್​ಜಿ

ಭಾರತದ ಜೆನ್​ಜಿ ಸೂಪರ್​ಹೀರೋ ಮೋಡಿಗೆ ಒಳಗಾಗಿದ್ದಾರೆ. ಅದಕ್ಕೆ ಪೂರಕ ಎಂಬಂತೆ ""ಸ್ಪೈಡರ್​​ಮ್ಯಾನ್​: ಬ್ರ್ಯಾಂಡ್​​ ನ್ಯೂ ಡೇ'​' ಚಿತ್ರವನ್ನು ಭಾರತದಲ್ಲಿ 60 ಲಕ್ಷಕ್ಕೂ ಅಧಿಕ ಮಂದಿ ಆನ್​ಲೈನ್​ ಮೂಲಕ ಟಿಕೆಟ್​ ಬುಕ್​ ಮಾಡಿ ವೀಸಿದ್ದಾರೆ. ಮೆಟ್ರೋ ನಗರಗಳ ಪೈಕಿ ಬೆಂಗಳೂರಿನ ಪ್ರೇಕ್ಷಕರು "ಜೇಡಮಾನವ'ನ ಜೇಬು ತುಂಬಿಸಿದ್ದಾರೆ. ಬೆಂಗಳೂರು ಅತಿಹೆಚ್ಚು ಅರ್ಥಾತ್​ ಶೇಕಡಾ 23ರಷ್ಟು ಪಾಲು ಹೊಂದಿದ್ದರೆ, ಹೈದರಾಬಾದ್​ ಶೇ. 17, ಮುಂಬೈ ಶೇ. 15 ಹಾಗೂ ದೆಹಲಿ ಶೇ. 14ರಷ್ಟು ಪಾಲು ಹೊಂದಿವೆ. ಹಾಗೇ ಪಟ್ಟಣ ಪ್ರದೇಶಗಳಲ್ಲೂ ಜೆನ್​ಜಿಗಳು ಹೆಚ್ಚಾಗಿ ಹಾಲಿವುಡ್​ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ.

ಮಾರ್ಕೆಟಿಂಗ್​ ಮ್ಯಾಜಿಕ್​

ಹಾಲಿವುಡ್​ ತಂಡಗಳು ಭಾರತದ ಮಾರುಕಟ್ಟೆಯನ್ನು ಗಂಭೀರವಾಗಿ ಪರಿಗಣಿಸುತ್ತಿವೆ. ಅದಕ್ಕೆ ಸಾ ಎಂಬಂತೆ ಆಸ್ಕರ್​ ವಿಜೇತ ನಿರ್ದೇಶಕ ಕ್ರಿಸ್ಟೋರ್​ ನೊಲನ್​, ನಟರಾದ ಮ್ಯಾಟ್​ ಡೇಮನ್​ ಮತ್ತು ಟಾಮ್​ ಹಾಲೆಂಡ್​ ವಿಶ್ವಾದ್ಯಂತ ಪ್ರಚಾರಕ್ಕಾಗಿ ಆರು ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅದರಲ್ಲಿ ಒಂದು ಮುಂಬೈ ಕೂಡ ಆಗಿತ್ತು. ಇನ್ನು 2023ರಲ್ಲಿ "ರಿಂಗ್ಸ್​ ಆಫ್​ ಪವರ್​' ವೆಬ್​ಸರಣಿ ತಂಡ ಐದು ದಿನಗಳ ಕಾಲ ಭಾರತದಲ್ಲಿ ಪ್ರಚಾರ ನಡೆಸಿತ್ತು. ಹಾಗೇ ಇತ್ತೀಚಿನ ದಿನಗಳಲ್ಲಿ ಹಾಲಿವುಡ್​ ತಂಡಗಳು ಭಾರತದ ಕಲಾವಿದರಿಗೂ ಅವಕಾಶ ನೀಡುವ ಮೂಲಕ ಇಲ್ಲಿನ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಈಗಾಗಲೇ ಪ್ರಿಯಾಂಕಾ ಚೋಪ್ರಾ ಜೊನಾಸ್​ ಹಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆಲಿಯಾ ಭಟ್​ (ಹಾರ್ಟ್​ ಆ್​ ಸ್ಟೋನ್​), ಶೋಭಿತ ಧುಲಿಪಲ (ಮಂಕಿ ಮ್ಯಾನ್​), ಅಲಿ ಫಜಲ್​ (ಕಂದಹಾರ್​), ಧನುಷ್​ (ಗ್ರೇ ಮ್ಯಾನ್​), ಇಶಾನ್​ ಖಟ್ಟರ್​ (ದ ಪೆರ್ಕ್ಟ್​ ಕಪಲ್​), ವಿದ್ಯುತ್​ ಜಮ್ವಾಲ್​ (ಮಾರ್ಟಲ್​ ಕಾಂಬ್ಯಾಟ್​ 2) ಹಾಲಿವುಡ್​ನಲ್ಲಿ ನಟಿಸಿದ್ದು, ಸದ್ಯ ತಬು, ಸಯಾನಿ ಗುಪ್ತಾ ಸೇರಿ ಇನ್ನೂ ಕೆಲ ಕಲಾವಿದರು ಇಂಗ್ಲೀಷ್​ ಸಿನಿಮಾಗಳಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net