ರಾಮಾಯಣ ಸಿನಿಮಾ ನೋಡಿ ಬೆರಗಾದ ಡ್ರೀಮ್ ಗರ್ಲ್ ಹೇಮಾ ಮಾಲಿನಿ! ರಣಬೀರ್, ಸಾಯಿ ಪಲ್ಲವಿ ನಟನೆಗೆ ಮನಸೋತ ನಟಿ! Ramayan movie

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ, ಬಾಲಿವುಡ್‌ನ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಅವರ ಮನಸ್ಸನ್ನು ಸಂಪೂರ್ಣವಾಗಿ ಗೆದ್ದುಕೊಂಡಿದೆ. ಪ್ರೀಮಿಯರ್ ಶೋ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ರದ ದೃಶ್ಯ ವೈಭವ ಹಾಗೂ ಕಲಾವಿದರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಾಯಕ ಪಾತ್ರಗಳಿಗೆ ಕಲಾವಿದರ ಆಯ್ಕೆ ಸೂಕ್ತವಾಗಿದೆ ಎಂದು ಹೇಳಿದ್ದಾರೆ. Ramayan movie
ರಾಮಾಯಣ ಸಿನಿಮಾ ನೋಡಿ ಬೆರಗಾದ ಡ್ರೀಮ್ ಗರ್ಲ್ ಹೇಮಾ ಮಾಲಿನಿ
ರಾಮಾಯಣ ಸಿನಿಮಾ ನೋಡಿ ಬೆರಗಾದ ಡ್ರೀಮ್ ಗರ್ಲ್ ಹೇಮಾ ಮಾಲಿನಿWEB
Published on: 

ನವದೆಹಲಿ: ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ, ಬಾಲಿವುಡ್‌ನ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಅವರ ಮನಸ್ಸನ್ನು ಸಂಪೂರ್ಣವಾಗಿ ಗೆದ್ದುಕೊಂಡಿದೆ. ಪ್ರೀಮಿಯರ್ ಶೋ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ರದ ದೃಶ್ಯ ವೈಭವ ಹಾಗೂ ಕಲಾವಿದರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಾಯಕ ಪಾತ್ರಗಳಿಗೆ ಕಲಾವಿದರ ಆಯ್ಕೆ ಸೂಕ್ತವಾಗಿದೆ ಎಂದು ಹೇಳಿದ್ದಾರೆ. ಚಿತ್ರವನ್ನು ನೋಡಲು ಕಡಿಮೆ ನಿರೀಕ್ಷೆಯೊಂದಿಗೆ ಹೋಗಿದ್ದೆ. ಆದರೆ ಚಿತ್ರದ ಪ್ರಸ್ತುತಿ ಮತ್ತು ವಿಶೇಷ ದೃಶ್ಯ ಪರಿಣಾಮಗಳು ಅಚ್ಚರಿ ಮೂಡಿಸಿದವು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚಿತ್ರದ ನಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಣಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಕಲಾವಿದರ ಆಯ್ಕೆಯನ್ನು ಅವರು ಮೆಚ್ಚಿದ್ದಾರೆ. ಸಿನಿಮಾ ಪ್ರೇಕ್ಷಕರನ್ನು ಮತ್ತೊಂದು ಕಾಲಘಟ್ಟಕ್ಕೆ ಕರೆದೊಯ್ಯುವ ಅನುಭವ ನೀಡಿದೆ ಎಂದಿದ್ದಾರೆ. ಭಾರತೀಯ ಪ್ರೇಕ್ಷಕರಿಗೆ ಇದು ವಿಭಿನ್ನ ಅನುಭವವಾಗಿದ್ದು, ಹೊಸ ತಂತ್ರಜ್ಞಾನದ ಬಳಕೆ ಚಿತ್ರಕ್ಕೆ ವಿಶೇಷ ಮೆರುಗು ನೀಡಿದೆ ಎಂದು ಹೇಮಾ ಮಾಲಿನಿ ತಿಳಿಸಿದ್ದಾರೆ.

ಇದನ್ನೂ ಓದಿ : ಕೊಲೆಯಾದವರಿಂದಲೇ ಬಂತು ಮೆಸೇಜ್! 16 ದಿನದಲ್ಲಿ 7 ಕೊಲೆ ಮಾಡಿದ ಬೆಂಗ್ಳೂರು ಕ್ಯಾಬ್ ಚಾಲಕನ ಭಯಾನಕ ಸಂಚು ಬಯಲು bengluru crime

ಬಾಕ್ಸ್ ಆಫೀಸ್‌ನಲ್ಲೂ ರಾಮಾಯಣ ಅಬ್ಬರ

ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ ಭಾರತದಲ್ಲಿ ಒಟ್ಟು 413.90 ಕೋಟಿ ರೂ. ಗಳಿಕೆ ಮಾಡಿದೆ. ದೇಶೀಯ ನಿವ್ವಳ ಗಳಿಕೆ 346.35 ಕೋಟಿ ರೂ. ತಲುಪಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ 250 ಕೋಟಿ ರೂ. ಗಳಿಸಿದ್ದು, ಜಾಗತಿಕ ಒಟ್ಟು ಗಳಿಕೆ 663.90 ಕೋಟಿ ರೂ. ತಲುಪಿದೆ. ಐದನೇ ದಿನ ಹಿಂದಿ ಆವೃತ್ತಿಯಿಂದ 87.25 ಕೋಟಿ ರೂ., ಕನ್ನಡದಿಂದ 7.50 ಕೋಟಿ ರೂ., ತೆಲುಗಿನಿಂದ 6 ಕೋಟಿ ರೂ., ತಮಿಳಿನಿಂದ 4 ಕೋಟಿ ರೂ. ಹಾಗೂ ಮಲಯಾಳಂನಿಂದ 2.75 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.

ಶನಿವಾರದಂದು ಈ ಸಿನಿಮಾ ಭಾರತದಲ್ಲಿ 69.80 ಕೋಟಿ ಗಳಿಸಿತ್ತು. ಆದರೆ ಭಾನುವಾರ ಗಳಿಕೆಯಲ್ಲಿ ಕೊಂಚ ಕುಸಿತ ಕಂಡುಬಂದಿದ್ದು, ಒಟ್ಟು 21,770 ಶೋಗಳಿಂದ 56.15 ಕೋಟಿ ಕಲೆಕ್ಷನ್ ಮಾಡಿದೆ.( ಏಜೇನ್ಸಿಸ್​)