ಸಿನಿಮಾಗಳ ವಿಷಯದಲ್ಲಿ ಮೊದಲ ಮೂರು ದಿನ ಅತ್ಯಮೂಲ್ಯ. ಮೊದಲ ವಾರಾಂತ್ಯದಲ್ಲಿ ಓಡದ ಶೇಕಡಾ 99ರಷ್ಟು ಚಿತ್ರಗಳು ಗೆಲ್ಲುವುದು ಕಷ್ಟ ಎನ್ನಲಾಗುತ್ತದೆ. ಆದರೆ, ಶೇಕಡಾ 1ಕ್ಕಿಂತ ಕಡಿಮೆ ಚಿತ್ರಗಳು ಮೊದಲ ಎರಡು ವಾರ ಡಲ್ ಆಗಿದ್ದು, ಮೂರನೇ ವಾರ ಹೌಸ್ುಲ್ ಆಗಿ ಗೆದ್ದಿರುವ ಉದಾಹರಣೆಯೂ ಇದೆ. "ತುಂಬಾದ್', "ಆಶಿಕಿ' ಅದಕ್ಕೆ ಉತ್ತಮ ಉದಾಹರಣೆ. ಇದೀಗ ಮತ್ತೊಂದು ಬಾಲಿವುಡ್ ಸಿನಿಮಾ ಈ ಮ್ಯಾಜಿಕ್ಗೆ ಸಾಯಾಗಿದೆ. ಹೆಸರು "ಹನುಮಾನ್ ಅಂಶ್'. ಹನುಮಂತನ ಅವತಾರವೆಂದೇ ಪ್ರಸಿದ್ಧರಾಗಿದ್ದ ನೀಮ್ ಕರೋಲಿ ಬಾಬಾ ಜೀವನಾಧಾರಿತ ಚಿತ್ರವಿದು. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರದಲ್ಲಿ ಶೋಭಿನವ್ ಸತ್ಯಾ, ಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಆ. 7ರಂದು 200ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಮೊದಲ ವಾರಾಂತ್ಯಕ್ಕೆ ಕೇವಲ ₹89 ಲಕ್ಷ ಗಳಿಕೆ ಮಾಡಿಕೊಂಡಿತ್ತು. ಹೀಗಾಗಿ ಎರಡನೇ ವಾರ ಸ್ಕ್ರೀನ್ಗಳ ಸಂಖ್ಯೆಯನ್ನು 40ಕ್ಕೆ ಇಳಿಸಲಾಗಿತ್ತು. ಎರಡನೇ ವಾರ ₹46 ಲಕ್ಷ ಗಳಿಸಿದ ಚಿತ್ರ, ರಿಲೀಸ್ ಆದ 15 ದಿನಗಳಲ್ಲಿ ಕೇವಲ ₹1.25 ಕೋಟಿ ಕಲೆಕ್ಷನ್ ಮಾಡಿಕೊಂಡಿತ್ತು. ಅಲ್ಲಿಗೆ ಸಿನಿಮಾ ಕಥೆ ಮುಗಿಯಿತು ಎನ್ನುತ್ತಿರುವಾಗಲೇ, ಮೂರನೇ ವಾರ ಮ್ಯಾಜಿಕ್ ನಡೆದಿದೆ. ಮೌತ್ ಟು ಮೌತ್ ಪಬ್ಲಿಸಿಟಿಯಿಂದ ಪ್ರೇಕ್ಷಕರು ಹೆಚ್ಚಾಗಿದ್ದು, ಒಂದೇ ವಾರದಲ್ಲಿ ₹3.20 ಕೋಟಿ ಗಳಿಕೆ ಮಾಡಿಕೊಂಡಿದೆ. ಹೀಗಾಗಿ ಮೂರನೇ ವಾರ ಥಿಯೇಟರ್ಗಳ ಸಂಖ್ಯೆಯನ್ನು 400ಕ್ಕೆ ಏರಿಸಲಾಗಿದೆ. ಅದರಲ್ಲೂ ಕಳೆದ ಭಾನುವಾರ (ಆ.23) ಸಿನಿಮಾ ರಿಲೀಸ್ ಆದ ಒಂದೇ ದಿನ ₹2.18 ಕೋಟಿ ಕಲೆಕ್ಷನ್ ಆಗಿದ್ದು, ಇದೀಗ ಚಿತ್ರದ ಒಟ್ಟು ಗಳಿಕೆ ₹5.36 ಕೋಟಿ ದಾಟಿದೆ ಎನ್ನಲಾಗಿದೆ. ಆ ಮೂಲಕ ಬಾಕ್ಸಾಫಿಸಿನಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಇದೀಗ ಇಂದಿನಿಂದ "ಟಾಕ್ಸಿಕ್' ಅಬ್ಬರದ ನಡುವೆ "ಹನುಮಾನ್ ಅಂಶ್' ಮುಂದಿನ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.