ಪತ್ನಿಯ ಆರೋಪದ ಬೆನ್ನಲ್ಲೇ ಬಿಗ್ ಟ್ವಿಸ್ಟ್: ನಟಿ​ ಜೊತೆ ಕಾಣಿಸಿಕೊಂಡ ಗೋವಿಂದ! ವಿಡಿಯೋ ವೈರಲ್.. Govinda

Govinda (ಚಿತ್ರ X)
Govinda (ಚಿತ್ರ X)
Published on

ಮುಂಬೈ: ಬಾಲಿವುಡ್ ನಟ ಗೋವಿಂದ (

Govinda)

ಅವರ ವೈಯಕ್ತಿಕ ಜೀವನದ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ತಮ್ಮ ಎರಡನೇ ಮದುವೆಯ ಕುರಿತು ಹಬ್ಬಿರುವ ವದಂತಿಗಳ ವಿರುದ್ಧ ನಟ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಕೋಮಲ್ ರಾನಿ ಜೊತೆ ಮದುವೆ ವದಂತಿ

ಗೋವಿಂದ ತಮ್ಮ 'ರೂಪಾ' ಚಿತ್ರದ ಸಹನಟಿ ಕೋಮಲ್ ರಾನಿ ಸ್ವರ್ಣಕಾರ್ ಅವರನ್ನು ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಅವರ ಪತ್ನಿ ಸುನೀತಾ ಅಹುಜಾ ಆರೋಪಿಸಿದ್ದಾರೆ.
ಇತ್ತೀಚೆಗೆ ಗೋವಿಂದ ವಿರುದ್ಧ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದ ಸುನೀತಾ, ಅವರು ಕೋಮಲ್ ಅವರನ್ನು ಮದುವೆಯಾಗಲು ಬಯಸಿದ್ದರಿಂದಲೇ ನಾನು ಈ ಪ್ರಕರಣವನ್ನು ವಾಪಾಸ್ಸು ಪಡೆದೆ. ಆದಾಗ್ಯೂ, 5-6 ವರ್ಷಗಳಿಂದ ನಾನು ಸುಮ್ಮನಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಗೋವಿಂದ ಅವರ ಮ್ಯಾನೇಜರ್ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

ಸಾರ್ವಜನಿಕವಾಗಿ ಕಾಣಿಸಿಕೊಂಡ ಜೋಡಿ

ಆರೋಪ-ಪ್ರತ್ಯಾರೋಪಗಳ ನಡುವೆಯೇ, ನಟ ಗೋವಿಂದ ಹಾಗೂ ಕೋಮಲ್ ರಾನಿ ಒಟ್ಟಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಳಿ ಉಡುಪಿನಲ್ಲಿ ಆಗಮಿಸಿದ ಕೋಮಲ್ ಜೊತೆ ವೇದಿಕೆಗೆ ಆಗಮಿಸಿದ ಗೋವಿಂದ್​ ಅವರಿಗೆ ಸ್ವಾಗತ ನೀಡಿದರು. ಆದಾಗ್ಯೂ, ಸಂಘಟಕರು ನೀಡಿದ ಉಡುಗೊರೆಗಳನ್ನು ತಮ್ಮ ತಂಡಕ್ಕೆ ಹಸ್ತಾಂತರಿಸಿದ ಗೋವಿಂದ, ಕ್ಯಾಮೆರಾಗಳನ್ನು ಕಂಡ ತಕ್ಷಣ ವೀಡಿಯೊ ಚಿತ್ರೀಕರಣ ಮಾಡದಂತೆ ವಿನಂತಿಸಿದರು.

ಸುಳ್ಳು ಸುದ್ದಿ ಹರಡಿದರೆ 100 ಕೋಟಿ ನಷ್ಟಪರಿಹಾರದ ಎಚ್ಚರಿಕೆ

ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನದ ಕುರಿತು ಹರಡುತ್ತಿರುವ ವದಂತಿಗಳನ್ನು ತಡೆಯಲು ಗೋವಿಂದ ಕಾನೂನು ನೋಟಿಸ್​ ಜಾರಿ ಮಾಡಿದ್ದಾರೆ. ಆದಾಗ್ಯೂ, ತಮ್ಮ ಒಪ್ಪಿಗೆಯಿಲ್ಲದೆ ತಪ್ಪು ಮಾಹಿತಿ, ಮಾರ್ಫ್ ಮಾಡಿದ ಚಿತ್ರಗಳು, ಡೀಪ್​ ಫೇಕ್​ ತಂತ್ರಜ್ಞಾನ ಬಳಸಿ ಧ್ವನಿ ಅಥವಾ ಚಿತ್ರಗಳನ್ನು ಬಳಸುವ ಮಾಧ್ಯಮಗಳು, ಡಿಜಿಟಲ್ ವೇದಿಕೆಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಜೊತೆಗೆ ಸೈಬರ್ ಅಪರಾಧ ಹಾಗೂ ಮಾನನಷ್ಟ ಮೊಕದ್ದಮೆಯಡಿ 100 ಕೋಟಿ ನಷ್ಟ ಪರಿಹಾರ ಕೋರಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ನೋಟಿಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net