ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರನಡೆದಿದ್ದೇಕೆ?: ಕೊನೆಗೂ ಮೌನ ಮುರಿದ ನಿರ್ಮಾಪಕ ಪ್ರಣಯ್ ರೆಡ್ಡಿ ವಂಗಾ! Deepika Padukone

Deepika Padukone (ಚಿತ್ರ X)
Deepika Padukone (ಚಿತ್ರ X)
Published on

Deepika Padukone: ಪ್ರಭಾಸ್ ಅಭಿನಯದ ಹಾಗೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹುನಿರೀಕ್ಷಿತ 'ಸ್ಪಿರಿಟ್' (Spirit) ಸಿನಿಮಾದಿಂದ ನಟಿ ದೀಪಿಕಾ ಪಡುಕೋಣೆ ಹೊರನಡೆದಿರುವ ಸುದ್ದಿ ಸಿನಿರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸಂಭಾವನೆ, ಕೆಲಸದ ಸಮಯ ಹಾಗೂ ಸಿನಿರಂಗದ ಬೇಡಿಕೆಗಳ ಕುರಿತಂತೆ ಹಲವಾರು ವದಂತಿಗಳು ಹರಿದಾಡಿದ್ದವು. ಆದರೆ, ಇದೀಗ ಈ ಎಲ್ಲಾ ಚರ್ಚೆಗಳಿಗೆ ಚಿತ್ರದ ನಿರ್ಮಾಪಕ ಹಾಗೂ ಸಂದೀಪ್​ ರೆಡ್ಡಿ ವಂಗಾ ಹಾಗೂ ಅವರ ಸಹೋದರ ಪ್ರಣಯ್​ ರೆಡ್ಡಿ ತೆರೆ ಎಳೆದಿದ್ದಾರೆ.

ಸಂಭಾವನೆ ಮತ್ತು ವೇಳಾಪಟ್ಟಿಯ ತೊಡಕು

ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಣಯ್​ ರೆಡ್ಡಿ ವಂಗಾ, ದೀಪಿಕಾ ಈ ಯೋಜನೆಯಿಂದ ಹೊರಬರಲು ಸಂಭಾವನೆ ಮತ್ತು ದಿನಾಂಕಗಳ (Scheduling) ಸಮಸ್ಯೆಯೇ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಸಂದೀಪ್ ಅವರು ಒಂದೂವರೆ  ವರ್ಷಗಳಿಂದ ದೀಪಿಕಾ ಜೊತೆ ಮಾತುಕತೆಯಲ್ಲಿದ್ದು, ಅವರನ್ನು ಸಿನಿಮಾದಲ್ಲಿ ನಟಿಸಬೇಕೆಂದು ಆಕ್ಷೇಪಿಸಿದ್ದರು. ಆದರೆ, ಸಂಭಾವನೆ ಮತ್ತು ಸಮಯ ಹೊಂದಾಣಿಕೆಯಾಗದಿದ್ದಾಗ, ಇತರ ಆಯ್ಕೆಗಳನ್ನು ಹುಡುಕುವುದು ನಿರ್ದೇಕರಿಗೆ ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ. 

ಚಿತ್ರದ ಶೇ. 10 ರಷ್ಟು ಲಾಭಕ್ಕೆ ಬೇಡಿಕೆ!

ದೀಪಿಕಾ ಕೇಳಿದ ಸಂಭಾವನೆಯ ವಿವರ ನೀಡಿದ ಪ್ರಣಯ್, ದೀಪಿಕಾ ಚಿತ್ರದ ಒಟ್ಟು ಲಾಭದಲ್ಲಿ ಶೇ. 10 ರಷ್ಟು ಪಾಲು ಕೇಳಿದ್ದರು. ಆದಾಗ್ಯೂ, ಪ್ರತಿಯೊಬ್ಬರಿಗೂ ತಮ್ಮ ಬೇಡಿಕೆ ಇಡುವ ಹಕ್ಕಿದೆ. ನಮಗೆ ನೀಡಲು ಸಾಧ್ಯವಿದ್ದರೆ ನೀಡಬಹುದು. ಆದರೆ, ಸಿನಿಮಾದ ಒಟ್ಟು ಬಜೆಟ್​ ಮತ್ತು ಲೆಕ್ಕಾಚಾರ ನಮಗೆ ಹೊಂದಬೇಕಾಗುತ್ತದೆ. ನಾವು ಅವರಿಗೆ ಹೆಚ್ಚುವರಿಯಾಗಿ 5ರಿಂದ 6 ಕೋಟಿ ರೂಪಾಯಿ ನೀಡಲು ಸುದ್ಧರೆದ್ದವು. ಆದರೆ, ಲಾಭದಲ್ಲಿ ಪಾಲು ಕೇಳಿದಾಗ ಆ ಲೆಕ್ಕಾಚಾರ ನಮಗೆ ಸರಿ ಎನಿಸಲಿಲ್ಲ. ಹಾಗಾಗಿ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ವಿವರಿಸಿದ್ದಾರೆ.

ಕಥೆ ಸೋರಿಕೆ ಮಾಡಿದ ಆರೋಪ

ಚಿತ್ರತಂಡಕ್ಕೆ ತೀವ್ರ ಬೇಸರ ತಂದ ಮತ್ತೊಂದು ವಿಚಾರವನ್ನು ಹಂಚಿಕೊಂಡ  ನಿರ್ಮಾಪಕರು ನಾವು ಇತರೆ ನಟಿಯರ ಆಯ್ಕೆ ಪರಿಶೀಲಿಸಲು ಪ್ರಾರಂಭಿಸುತ್ತಿದ್ದಂತೆಯೇ ಅವರು ಚಿತ್ರದ ವಿವರಗಳನ್ನು ಹೊರಗೆ ಸೋರಿಕೆ ಮಾಡಲು ಆರಂಭಿಸಿದರು. ನಾವು ಅವರೊಂದಿಗೆ ಚಿತ್ರದ ಬಗ್ಗೆ ಚರ್ಚಿಸಿರುವುದನ್ನು ಅವರು ಆಂತರಿಕವಾಗಿ ಉಳಿಸಿಕೊಳ್ಳಬೇಕಿತ್ತು. ಇದರಿಂದ ನಮಗೆ ಕಿರಿಕಿರಿ ಉಂಟಾಯಿತು ಎಂದು ಪ್ರಣಮ್ ತಿಳಿಸಿದ್ದಾರೆ.

ತೃಪ್ತಿ ಡಿಮ್ರಿಗೆ ಆಫರ್: ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ನಿರ್ಮಾಪಕರ ಈ ಗಂಭೀರ ಆರೋಪಗಳ ಕುರಿತು ನಟಿ ದೀಪಿಕಾ ಪಡುಕೋಣೆ ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನು ದೀಪಿಕಾ ಈ ಚಿತ್ರದಿಂದ ಹೊರನಡೆದ ನಂತರ, 'ಅನಿಮಲ್' ಸಿನಿಮಾ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ತೃಪ್ತಿ ಡಿಮ್ರಿ (Triptii Dimri) ಅವರನ್ನು ಪ್ರಭಾಸ್ ಜೋಡಿಯಾಗಿ ಆಯ್ಕೆ ಮಾಡಲಾಗಿದೆ. ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಸ್ಪಿರಿಟ್' ಸಿನಿಮಾವು ಮಾರ್ಚ್ 5, 2027 ರಂದು ವಿಶ್ವಾದ್ಯಂತ ಪ್ರದರ್ಶನ ಕಾಣಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net