ಅಫ್ಘಾನ್​ ಕ್ರಿಕೆಟರ್​ ಜೊತೆ ಬಾಲಿವುಡ್​ ಬ್ಯೂಟಿ ಸಂಬಂಧ? ಡೇಟಿಂಗ್​ ವದಂತಿ ಬಗ್ಗೆ ಅರ್ಷಿ ಖಾನ್ ಹೇಳಿದ್ದೇನು? Arshi Khan on Aftab Alam

ಅಫ್ತಾಬ್ ಆಲಂ ಜೊತೆಗಿನ ಸಂಬಂಧದ ಕುರಿತು ಅರ್ಷಿ ಖಾನ್​ ಹೇಳಿದ್ದೇನು?
ಅಫ್ತಾಬ್ ಆಲಂ ಜೊತೆಗಿನ ಸಂಬಂಧದ ಕುರಿತು ಅರ್ಷಿ ಖಾನ್​ ಹೇಳಿದ್ದೇನು?
Published on

ಪ್ರಮುಖ ಮುಖ್ಯಾಂಶಗಳು

  • ಬಿಗ್ ಬಾಸ್ ಖ್ಯಾತಿಯ ಅರ್ಷಿ ಖಾನ್ ಅಫ್ಘಾನ್ ಕ್ರಿಕೆಟರ್ ಜೊತೆ ಡೇಟಿಂಗ್?
  • ಅಫ್ತಾಬ್ ಆಲಂ ಜೊತೆಗಿನ ಸಂಬಂಧದ ಕುರಿತು ಅರ್ಷಿ ಖಾನ್​ ಹೇಳಿದ್ದೇನು?
  • ನಮ್ಮದು ಕೇವಲ ಸ್ನೇಹ, ಸಹೋದರ ಸಂಬಂಧ
ಮುಂಬೈ: ಬಿಗ್ ಬಾಸ್ ಖ್ಯಾತಿಯ ನಟಿ ಅರ್ಷಿ ಖಾನ್ (Arshi Khan on Aftab Alam) ಹಾಗೂ ಅಫ್ಘಾನಿಸ್ತಾನದ ಮಾಜಿ ಕ್ರಿಕೆಟಿಗ ಅಫ್ತಾಬ್ ಆಲಂ ಹೆಸರು ಕಳೆದ ಕೆಲವು ದಿನಗಳಿಂದ ಸಕ್ಕತ್ ಸೌಂಡ್‌ ಮಾಡುತ್ತಿತ್ತು.
ಇಬ್ಬರ ನಡುವೆ ಏನೋ ನಡೀತಿದೆ, ಡೇಟಿಂಗ್‌ನಲ್ಲಿದ್ದಾರೆ ಎಂಬೆಲ್ಲಾ ಗಾಸಿಪ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇಷ್ಟು ದಿನ ಈ ಬಗ್ಗೆ ತಲೆಕೆಡಿಸಿಕೊಳ್ಳದ ಅರ್ಷಿ ಖಾನ್, ಕೊನೆಗೂ ಈ ಎಲ್ಲಾ ವದಂತಿಗಳಿಗೆ ಈಗ ಫುಲ್‌ಸ್ಟಾಪ್ ಇಟ್ಟಿದ್ದಾರೆ.
ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಅರ್ಷಿ ಖಾನ್ ತಮ್ಮ ಹಾಗೂ ಅಫ್ತಾಬ್ ಆಲಂ ನಡುವಿನ ಸಂಬಂಧದ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ನಮ್ಮಿಬ್ಬರ ಮಧ್ಯೆ ಪ್ರೀತಿ-ಪ್ರೇಮ ಅಂತೆಲ್ಲಾ ಹಬ್ಬಿದ್ದ ಸುದ್ದಿಗಳೆಲ್ಲಾ ಶುದ್ಧ ಸುಳ್ಳು ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ನಮ್ಮದು ಬರೀ ಸ್ನೇಹ, ಅಣ್ಣ-ತಂಗಿ ಸಂಬಂಧ!

ಅಫ್ತಾಬ್ ಆಲಂ ಜೊತೆಗಿನ ಒಡನಾಟದ ಬಗ್ಗೆ ಮಾತನಾಡುತ್ತಾ ಅರ್ಷಿ, ನಮ್ಮಿಬ್ಬರ ನಡುವೆ ತುಂಬಾ ಉತ್ತಮ ಸಂಬಂಧವಿದೆ. ನಮ್ಮಿಬ್ಬರದು ಆಪ್ತವಾದ ಸ್ನೇಹ ಎಂದರೂ ಸುಳ್ಳಲ್ಲ. ಆದರೆ, ಜನ ಅಂದುಕೊಳ್ಳುತ್ತಿರುವ ಹಾಗೆ ನಾವಿಬ್ಬರೂ ಪ್ರೇಮಿಗಳಲ್ಲ. ನಮ್ಮ ಸ್ನೇಹ ಅಣ್ಣ-ತಂಗಿ ಅಥವಾ ಸೋದರಸಂಬಂಧಿಗಳ ಸಂಬಂಧದ ರೀತಿಯಲ್ಲಿದೆ ಎಂದಿದ್ದಾರೆ.

ನಾವು ಪರಸ್ಪರ ಪರಿಚಯವಾಗಿದ್ದು 2020ರಲ್ಲಿ. ಅಂದಿನಿಂದ ಇಂದಿನವರೆಗೂ ನಾವು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೇವೆ. ಅಫ್ತಾಬ್ ನನಗೆ ಒಳ್ಳೆಯ ಸ್ನೇಹಿತರೇ ಹೊರತು, ಬೇರೆ ಯಾವುದೇ ರೋಮ್ಯಾಂಟಿಕ್ ರಿಲೇಶನ್‌ಶಿಪ್ ನಮ್ಮ ನಡುವೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಮದುವೆಯ ಪ್ರಶ್ನೆಯೇ ಇಲ್ಲ!

ಈ ವದಂತಿಗೆಲ್ಲಾ ತೆರೆ ಎಳೆಯಲು ಅರ್ಷಿ ಖಾನ್ ಮತ್ತೊಂದು ಮುಖ್ಯ ಕಾರಣವನ್ನೂ ನೀಡಿದ್ದಾರೆ. ಅಫ್ತಾಬ್ ಆಲಂ ಈಗಾಗಲೇ ಮದುವೆಯಾಗಿದ್ದಾರೆ. ಅವರಿಗೆ ಐದು ಜನ ಮಕ್ಕಳೂ ಇದ್ದಾರೆ. ಹೀಗಿರುವಾಗ ನಮ್ಮಿಬ್ಬರ ಮದುವೆ ಅಥವಾ ಡೇಟಿಂಗ್ ಪ್ರಶ್ನೆಯೇ ಹುಟ್ಟುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಮದುವೆಯ ಬಗ್ಗೆಯೂ ಮಾತನಾಡಿದ ನಟಿ, ನಾನು ಯಾವಾಗ ಮದುವೆಯಾಗ್ತೀನಿ ಅಂತಾ ಎಲ್ಲರೂ ಕೇಳ್ತಿದ್ದಾರೆ. ಆದ್ರೆ ನಾನು ಮದುವೆ ಆದ್ರೆ ಯಾರೂ ಊಹಿಸದ ಹಾಗೆ, ಸದ್ದಿಲ್ಲದೆ, ಯಾವುದೇ ಅದ್ದೂರಿ ಪ್ರದರ್ಶನವಿಲ್ಲದೆ ಸರಳವಾಗಿ ಮಾಡ್ತೀನಿ ಎಂದು ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net