ವಿದ್ಯುತ್ ಚಿತ್ರದಲ್ಲಿ "ಧಾಲ್ಸಿಮ್' ಎಂಬ ಯೋಗಾ ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1987ರಲ್ಲಿ ಜಪಾನ್ ಮೂಲದ ಕಂಪನಿ "ಸ್ಟ್ರೀಟ್ ಫೈಟರ್' ವಿಡಿಯೋ ಗೇಮ್ ರಿಲೀಸ್ ಮಾಡಿತ್ತು. ವಿಶ್ವಾದ್ಯಂತ ಈ ಗೇಮ್ಗೆ ಅದ್ಭುತ ಪ್ರತಿಕ್ರಿಯೆ ದೊರೆತ ಬೆನ್ನಲ್ಲೇ, 1991ರಲ್ಲಿ "ಸ್ಟ್ರೀಟ್ ಫೈಟರ್ 2' ಬಿಡುಗಡೆ ಮಾಡಲಾಗಿತ್ತು. ಈ ಎರಡನೇ ವಿಡಿಯೋ ಗೇಮ್ನಲ್ಲಿ ಭಾರತ ಮೂಲದ ಯೋಗಗುರು "ಧಾಲ್ಸಿಮ್' ಪಾತ್ರವನ್ನು ಪರಿಚಯಿಸಲಾಗಿತ್ತು. ವಿಶೇಷ ಅಂದರೆ ಇದರಲ್ಲಿ ಧಾಲ್ಸಿಮ್ಗೆ ಬೆಂಕಿ ಉಗುಳುವ ಕೈ, ಕಾಲು, ಕತ್ತನ್ನು ಎಷ್ಟು ಉದ್ದ ಬೇಕಾದರೂ ಮಾಡುವ ಶಕ್ತಿಗಳಿರುತ್ತವೆ. ಅದಕ್ಕೂ ಉತ್ತಮ ಪ್ರತಿಕ್ರಿಯೆ ದೊರೆತ ಬೆನ್ನಲ್ಲೇ, 1994ರಲ್ಲಿ "ಸ್ಟ್ರೀಟ್ ಫೈಟರ್' ಸಿನಿಮಾ ಮೂಡಿಬಂದಿತ್ತು.