ಸಲ್ಮಾನ್ ಖಾನ್ ನಂತ್ರ ಆಮೀರ್ ಬೆನ್ನು ಬಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್: 3ನೇ ಮದುವೆಗೆ 'ಲವ್ ಜಿಹಾದ್' ಪಟ್ಟ ಕಟ್ಟಿ ಬೆದರಿಕೆ!.. Aamir Khan
Aamir Khan Gets Threats From Lawrence Bishnoi Gang
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಾಲಿವುಡ್ ನಟ ಆಮೀರ್ ಖಾನ್ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಬೆದರಿಕೆ
ಲವ್ ಜಿಹಾದ್ಗೆ ಉತ್ತೇಜನ ಕೊಟ್ಟರೆ ಸಹಿಸೋದಿಲ್ಲ ಎಂದ ಬಿಷ್ಣೋಯ್ ಗ್ಯಾಂಗ್
ಸಲ್ಮಾನ್ ಖಾನ್ ನಂತರ ಆಮೀರ್ ಖಾನ್ ವಿರುದ್ಧ ಕಿಡಿಕಾರಿದ ಬಿಷ್ಣೋಯ್ ಗ್ಯಾಂಗ್
ಹೌದು, ಬಾಲಿವುಡ್ ನಟ ಆಮೀರ್ ಖಾನ್ ಅವರು ಗೌರಿ ಸ್ಪ್ರಾಟ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಜುಲೈ.5ರಂದು ಕಾಲಿಟ್ಟಿದ್ದರು. ಆ ನಂತರ ಸಾಕಷ್ಟು ಟೀಕೆ ಹಾಗೂ ಟ್ರೋಲ್ಗೆ ಒಳಗಾದರು. ಆ ಬೆನ್ನಲ್ಲೇ ಶರಿಯಾ ವಿರುದ್ಧ ಮದುವೆ ಮಾಡಿಕೊಳ್ಳಲಾಗಿದೆ ಎಂದ ಮೌಲ್ವಿಗಳು ಫತ್ವಾ ಹೊರಡಿಸಿದ್ದರು. ಸದ್ಯ ಅವರಿಗೆ ಎದುರಾಗಿರುವ ಮತ್ತೊಂದು ಸಂಕಷ್ಟ ಎಂದರೆ ಅದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ.
ಲಾರೆನ್ಸ್ ಬಿಷ್ಣೋಯ್ ಗ್ರೂಪ್ನ ಆರ್ಜೂ ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ ಎಂಬಾತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಲವ್ ಜಿಹಾದ್ ಪ್ರಚಾರ ಮಾಡುವವರನ್ನು ಸಹಿಸೋದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಪೋಸ್ಟ್
ಟೈಸನ್ ಬಿಷ್ಣೋಯ್ ಹೇಳಿದ್ದೇನು?
ನಟ ಆಮೀರ್ ಖಾನ್ರಂತಹ ಜನರು ಲವ್ ಜಿಹಾದ್ನಂತಹ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಇದು ನಮ್ಮ ಹಿಂದೂ ಸಂಪ್ರದಾಯದ ಸಂಸ್ಕೃತಿಗೆ ವಿರುದ್ಧವಾಗಿದೆ. ನಾವು ಈ ವ್ಯಕ್ತಿಯನ್ನು ಸಹಿಸೋದಿಲ್ಲ. ಶೀಘ್ರದಲ್ಲೇ ಆತ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದು ಸನಾತನ ಧರ್ಮ ಮತ್ತು ರಾಷ್ಟ್ರದ ವಿರುದ್ಧವಾಗಿದೆ ಎಂದು ಟೈಸನ್ ಬಿಷ್ಣೋಯ್ ಬರೆದುಕೊಂಡಿದ್ದಾನೆ.
ಇಂತಹ ಕೃತ್ಯಗಳನ್ನು ಉತ್ತೇಜಿಸುವವರು ಯಾರೇ ಆಗಲಿ ಅವರನ್ನು ನಮ್ಮದೇ ಆದ ರೀತಿಯಲ್ಲಿ ತಕ್ಕ ಪಾಠ ಕಲಿಸಲಾಗುವುದು. ನಾವು ನಮ್ಮ ಸಹೋದರಿಯರು ಹಾಗೂ ಸಹೋದರರಿಗೆ ಭರವಸೆ ನೀಡುತ್ತಿದ್ದೇವೆ. ಸೆಲಬ್ರೆಟಿಯ ಪಟ್ಟವನ್ನು ಹೊತ್ತು ಇಂತಹ ಕೃತ್ಯಕ್ಕೆ ಪ್ರೋತ್ಸಾಹಿಸುವವರನ್ನು ಸುಮ್ಮನೆ ಬಿಡೋದಿಲ್ಲ ಎಂದು ಹೇಳಿದ್ದಾರೆ.
ಪೊಲೀಸರಿಗೆ ಶ್ಲಾಘಿಸಿದ್ದು ಯಾಕೆ?
ಆಮೀರ್ ಖಾನ್ ವಿರುದ್ಧ ಕಿಡಿಕಾರಿದ ಬೆನ್ನಲ್ಲೇ ಮತ್ತೊಂದು ವಿಚಾರವನ್ನು ಈ ಗ್ಯಾಂಗ್ ವ್ಯಕ್ತಪಡಿಸಿದೆ. ಅದು ಇತ್ತೀಚೆಗೆ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ 13 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿತ್ತು. ಈ ಘಟನೆಯನ್ನು ಬೇಧಿಸಿದ ಪೊಲೀಸರ ಕಾರ್ಯವನ್ನು ಗ್ಯಾಂಗ್ ಶ್ಲಾಘಿಸಿದೆ. ಅಲ್ಲದೇ ಕೆಲವು ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಪ್ರಕರಣದಲ್ಲಿ ರಾಜಕೀಯ ನಾಯಕರು ತಮ್ಮ ಹಸ್ತಕ್ಷೇಪವನ್ನು ನಿಲ್ಲಿಸದೇ ಹೋದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ನಿರ್ವಹಿಸುವ ಯಾವುದೇ ಅಪರಾಧಿಗಳಿಗೆ ಉದ್ದೇಶಿಸಲಾದ ಅದೇ ಕ್ರೂರ ಪರಿಣಾಮಗಳನ್ನು ನಮ್ಮ ಮೂಲಕ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ, (ಏಜೆನ್ಸೀಸ್).