_1787496658997.webp?w=480&auto=format%2Ccompress&fit=max)
_1787496658997.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬಾಲಿವುಡ್ ನಟಿ ವಾಮಿಕಾ ಗಬ್ಬಿ ಸದ್ಯ ಖುಷಿಯಲ್ಲಿದ್ದಾರೆ. ಬಾಲಿವುಡ್ ಜತೆ ಕಾಲಿವುಡ್‌ನಲ್ಲೂ ಮಿಂಚುತ್ತಿರುವ ಅವರು, ಬಾಕ್ಸಾಫೀಸಿನಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸುತ್ತಿದ್ದಾರೆ. ಇದೇ ವರ್ಷದ ಆರಂಭದಲ್ಲಿ ರಿಲೀಸ್ ಆಗಿದ್ದ ‘ಭೂತ್ ಬಂಗ್ಲಾ’ ಹಾಗೂ ಕಳೆದ 7ರಂದು ಬಿಡುಗಡೆಯಾಗಿರುವ ತಮಿಳಿನ ‘ಡಿಸಿ’ ಚಿತ್ರಗಳು ನಟಿಯ ಸಕ್ಸಸ್ ರೇಟ್ ಹೆಚ್ಚಿಸಿವೆ. ಅದರಲ್ಲೂ ‘ಡಿಸಿ’ ತೆರೆಕಂಡು ಎರಡೇ ವಾರಕ್ಕೆ 100 ಕೋಟಿ ಕ್ಲಬ್ ಸೇರುವ ಮೂಲಕ ತಮಿಳು ಚಿತ್ರರಂಗದಲ್ಲಿ ಮೈಲಿಗಲ್ಲು ಸಾಧಿಸಿದೆ. ಹೀಗಾಗಿ, ಈ ಗೆಲುವಿನ ಖುಷಿಯಲ್ಲಿರುವ ವಾಮಿಕಾ ಸದ್ಯ ಬೇಡಿಕೆಯಲ್ಲಿದ್ದಾರೆ. ಹೀಗಾಗಿ ಸಂಭಾವನೆಯನ್ನೂ ದುಪ್ಪಟ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ‘ಡಿಸಿ’ ಚಿತ್ರಕ್ಕೆ 3 ಕೋಟಿ ಪಡೆದಿದ್ದ ವಾಮಿಕಾ, ಇದೀಗ ಹೊಸ ಸಿನಿಮಾಗಳಿಗೆ ಆರು ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ವಾಮಿಕಾ ಗಬ್ಬಿ ಹಿಂದಿಯ ‘ಪ್ರಹಾರ್: ದ ಉಜ್ವಲ್ ನಿಕ್ಕಂ ಸ್ಟೋರಿ’, ‘ಕುಕು ಕೀ ಕುಂಡ್ಲಿ’, ತೆಲುಗಿನ ‘ಜಿ2’, ಮಲಯಾಳಂನ ‘ಟಿಕಿ ಟಕಾ’, ತಮಿಳಿನ ‘ಜೆನಿ’ ಚಿತ್ರಗಳ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇನ್ನು ಪಂಜಾಬಿ ಸಿನಿಮಾ ‘ಕಿಕ್ಲಿ’, ತಮಿಳಿನ ‘ಇರವಾಕಾಲಂ’ ಹಾಗೂ ಹಿಂದಿಯ ‘ದಿಲ್ ಕಾ ದರ್ವಾಜಾ ಖೋಲ್ ನಾ ಡಾರ್ಲಿಂಗ್’ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಮಧ್ಯೆಯೇ ಅವರು ‘ಜೈ ಹನುಮಾನ್’ ಚಿತ್ರಕ್ಕೂ ಸಹಿ ಮಾಡಿದ್ದಾರೆ. -ಏಜೆನ್ಸೀಸ್