ನೀಟ್​ ಹೋರಾಟಕ್ಕೆ 1 ಲಕ್ಷ ಪಡೆದ ಆರೋಪ: ದುಡ್ಡು ಪಡೆದಿದ್ದು ಸಾಬೀತಾದರೆ ಇನ್​ಸ್ಟಾಗ್ರಾಮ್​ ಡಿಲೀಟ್​ ಮಾಡುತ್ತೇನೆ; ಉರ್ಫಿ ಜಾವೇದ್​ ಓಪನ್​ ಚಾಲೆಂಜ್​! Uorfi Javed on NEET Protest

ಉರ್ಫಿ ಜಾವೇದ್ NEET ಹೋರಾಟಕ್ಕೆ 1 ಲಕ್ಷ ಪಡೆದ ಆರೋಪ
ಉರ್ಫಿ ಜಾವೇದ್ NEET ಹೋರಾಟಕ್ಕೆ 1 ಲಕ್ಷ ಪಡೆದ ಆರೋಪ
Published on

ಪ್ರಮುಖ ಮುಖ್ಯಾಂಶಗಳು

  • ಉರ್ಫಿ ಜಾವೇದ್ NEET ಹೋರಾಟಕ್ಕೆ 1 ಲಕ್ಷ ಪಡೆದ ಆರೋಪ
  • ದುಡ್ಡು ಪಡೆದಿದ್ದು ಸಾಬೀತಾದರೆ ಇನ್‌ಸ್ಟಾಗ್ರಾಮ್ ಡಿಲೀಟ್ ಮಾಡುವುದಾಗಿ ಘೋಷಣೆ
  • ನಾನು ರೀಲ್​ ಮಾಡಲು ಯಾವುದೇ ಹಣವನ್ನು ಪಡೆದಿಲ್ಲ!
ಮುಂಬೈ: ನೀಟ್​ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ, ದೆಹಲಿಯ ಜಂತರ್​​-ಮಂತರ್​ನಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಗೆ ಬಾಲಿವುಡ್ ಸೇರಿದಂತೆ ವಿವಿಧ ರಂಗದ ನಟ-ನಟಿಯರು ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದ್ದರು.
ಆದರೆ, ಈ ಪ್ರತಿಭಟನೆಗೆ ಸೆಲೆಬ್ರಿಟಿಗಳ ಬೆಂಬಲವನ್ನು ಪಡೆಯಲು ಸಿಜೆಪಿ ಸ್ಥಾಪಕ ಅಭಿಜಿತ್​ ದೀಪ್ಕೆ ಹಣವನ್ನು ನೀಡಿದ್ದಾನೆಂದು ಸೋಷಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಫೈಜಲ್ ಅನ್ಸಾರಿ ಗಂಭೀರ ಆರೋಪಗಳನ್ನು ಮಾಡಿದ್ದರು.
ಅದರಲ್ಲೂ ಖ್ಯಾತ ಫ್ಯಾಷನ್ ಐಕಾನ್ ಉರ್ಫಿ ಜಾವೇದ್ (Uorfi Javed on NEET Protest) ​ಗೆ 1 ಲಕ್ಷ ರೂಪಾಯಿ ನೀಡಿ ರೀಲ್ ಹಾಕಿಸಲಾಗಿದೆ ಎಂದು ಫೈಜಲ್ ಹೇಳಿರುವುದು ಭಾರಿ ವಿವಾದ ಸೃಷ್ಟಿಸಿದೆ. ಈಗ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉರ್ಫಿ ಜಾವೇದ್, ಫೈಜಲ್ ವಿರುದ್ಧ ತೀವ್ರ ಸಿಡಿದೆದ್ದಿದ್ದು, ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಹೋಗಿ ನನ್ನ ರೇಟ್ ಎಷ್ಟು ಅಂತ ನೋಡಿ!

ಫೈಜಲ್ ಅನ್ಸಾರಿ ಮಾಡಿರುವ ಆರೋಪ ಕೇಳಿ ಬೆರಗಾದ ಉರ್ಫಿ ಜಾವೇದ್, ಮೊದಲು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "1 ಲಕ್ಷ??? 1 ಲಕ್ಷ!!!" ಎಂದು ಬರೆದುಕೊಂಡು ಅಚ್ಚರಿ ವ್ಯಕ್ತಪಡಿಸಿದರು. ಬಳಿಕ ಒಂದು ವೀಡಿಯೊ ಮಾಡಿ ಫೈಜಲ್ ಹಾಗೂ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ಈ ಹೇಳಿಕೆ ನೀಡುತ್ತಿರುವ ವ್ಯಕ್ತಿ ಒಬ್ಬ ದೊಡ್ಡ ಮೂರ್ಖ. ಈ ಹಿಂದೆ ನನ್ನ ಬಗ್ಗೆ 'ಉರ್ಫಿ ಟ್ರಾನ್ಸ್ಜೆಂಡರ್' ಎಂದು ಸುಳ್ಳು ಸುದ್ದಿಯನ್ನು ಇದೇ ವ್ಯಕ್ತಿ ಹಬ್ಬಿಸಿದ್ದ. ಸದಾ ಪಬ್ಲಿಸಿಟಿ ಗಿಟ್ಟಿಸಿಕೊಳ್ಳಲು ಹಪಹಪಿ ಇತನಿಗಿದೆ ಎಂದು ಹರಿಹಾಯ್ದಿದ್ದಾರೆ. ಮೊದಲು ಹೋಗಿ ನನ್ನ ಮಾರ್ಕೆಟ್​ ರೇಟ್​ ಎಷ್ಟಿದೆ ಎಂದು ತಿಳಿದುಕೊಂಡು ಬಾ, ಕೇವಲ ಇಂದು ಲಕ್ಷಕ್ಕೆ ನಾನು ರೀಲ್​ ಮಾಡುತ್ತೆನಂತೆ ಎಂದು ಉರ್ಫಿ ತರಾಟೆಗೆ ತೆಗೆದು ಕೊಂಡಿದ್ದಾರೆ.


ನಾನು ಯಾವುದೇ ಹಣ ಪಡೆದಿಲ್ಲ!

ಅಷ್ಟೇ ಅಲ್ಲದೆ, ಯಾವುದೇ ಅಧೀಕೃತ ಮೂಲಗಳು ಮತ್ತು ವಿಶ್ವಾಸಾರ್ಹತೆ ಇಲ್ಲದ ಇಂಥವರ ಮಾತುಗಳನ್ನು ನಂಬಿ ಸುದ್ದಿ ಪ್ರಸಾರ ಮಾಡುತ್ತಿರುವ ಮುಖ್ಯವಾಹಿನಿ ಮಾಧ್ಯಮಗಳ ಮೇಲೂ ಉರ್ಫಿ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.
ತಾವು ಯಾವುದೇ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ನನ್ನ ಬಳಿ ಸದ್ಯ ಯಾವುದೇ ದೊಡ್ಡ ಬ್ರ್ಯಾಂಡ್‌ಗಳಿಲ್ಲ, ನನ್ನ ಕೈಯಲ್ಲಿ ಹಣವೂ ಖಾಲಿಯಾಗಿದೆ ಎಂದಿದ್ದಾರೆ. ಅಲ್ಲದೆ, ತಾವು ಹಣ ಪಡೆದಿದ್ದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿರುವ ಅವರು, ಒಂದು ವೇಳೆ ತಾನು ತಪ್ಪು ಮಾಡಿದ್ದು ಸಾಬೀತಾದರೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡುವುದಾಗಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಫೈಜಲ್ ಅನ್ಸಾರಿ ಆರೋಪವೇನು?

ಫೈಜಲ್ ಅನ್ಸಾರಿ, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ವಿರುದ್ಧ ದೆಹಲಿ ಡಿಸಿಪಿಗೆ ಲಿಖಿತ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ತಮ್ಮ ಬಳಿ ಪುರಾವೆಗಳಿವೆಯೆಂದು FIR ಪ್ರತಿಯನ್ನು ತೋರಿಸಿರುವ ಅವರು, ದೀಪ್ಕೆ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಪುಣೆ ಮತ್ತು ಔರಂಗಾಬಾದ್‌ನಲ್ಲಿ ನನ್ನ ಮೇಲೆ ದಾಳಿಗಳಾಗಿದ್ದು, ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ. ದೆಹಲಿ ಪೊಲೀಸರು ತಕ್ಷಣ ದೀಪ್ಕೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಂದುವರಿದು ಮಾತನಾಡಿರುವ ಫೈಜಲ್, ದೀಪ್ಕೆ ಬಾಲಿವುಡ್ ಸೆಲೆಬ್ರಿಟಿಗಳಿಗೂ ಹಣ ಕೊಟ್ಟು ಜಂತರ್ ಮಂತರ್ ಪ್ರತಿಭಟನೆಗೆ ಆಹ್ವಾನಿಸಿದ್ದರು. ಉರ್ಫಿ ಜಾವೇದ್ 1 ಲಕ್ಷ ರೂ. ಹಾಗೂ ಪೂನಂ ಪಾಂಡೆ 20,000 ರೂ. ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ಉರ್ಫಿ ಏನು ಹೇಳಿದ್ದರು?

ಕಳೆದ ಜುಲೈ 20 ರಂದು ನಡೆದ 'ಚಲೋ ಸಂಸದ್' ಪ್ರತಿಭಟನೆ ಬಳಿಕ, ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದ ದೃಶ್ಯಗಳು ದೇಶಾದ್ಯಂತ ವೈರಲ್ ಆಗಿದ್ದವು. ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಉರ್ಫಿ ಜಾವೇದ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು. ಇದು ನಿಜಕ್ಕೂ ಹೃದಯವಿದ್ರಾವಕ. ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡಿದಾಗ ಸುಮ್ಮನಿರುವ ಇವರು, ಈಗ ಕ್ರೌರ್ಯ ಮೆರೆಯುತ್ತಿದ್ದಾರೆ ಎಂದು ಬರೆದುಕೊಂಡು ಸರ್ಕಾರದ ಧೋರಣೆಯನ್ನು ಪ್ರಶ್ನಿಸಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net