Dhurandhar - ಧುರಂಧರ! ಸುಳ್ಳೆಷ್ಟು? ನಿಜವೆಷ್ಟು?

ಧುರಂಧರ್​
ಧುರಂಧರ್​
Published on

ಪ್ರಮುಖ ಮುಖ್ಯಾಂಶಗಳು

  • ಒಂದು ತಪ್ಪು ನಡೆ, ಮಾತು, ಅನುಮಾನ ಸಾಕು, ಜೀವಕ್ಕೆ ಕುತ್ತು.
  • ಶತ್ರು ದೇಶಗಳಿಗೆ ಸ್ವಯಂಪ್ರೇರಿತರಾಗಿ ಹೋಗುವ ಕೆಲ ಧೈರ್ಯಶಾಲಿಗಳಿದ್ದಾರೆ. ಅವರೇ ಸ್ಪೈ ಅಥವಾ ಗೂಢಚಾರಿಗಳು.
  • 1050 ಕೋಟಿ ರೂ. ಗಳಿಕೆ ಮಾಡಿಕೊಂಡಿರುವ ಧುರಂಧರ್ ಸಿನಿಮಾ
  • ಮೊದಲ ವಾರ 218 ಕೋಟಿ ರೂ. ಕಲೆಕ್ಷನ್​ ಮಾಡಿಕೊಂಡಿದ್ದ ಸಿನಿಮಾ ಎರಡನೇ ವಾರ ರೂ. 262 ಕೋಟಿ ಬಾಚಿಕೊಂಡಿದೆ
Dhurandhar - ಸ್ಪೈ ಸಿನಿಮಾ ಜಾನರ್​ನಲ್ಲಿ ಹೊಸ ಯುಗ ಆರಂಭಿಸಿದ "ಧುರಂಧರ್​'
ಅದೊಂದು ವಿಷಕಾರಿ ಹಾವುಗಳೇ ತಂಬಿರುವ ದ್ವೀಪ. ಒಬ್ಬರೇ ಆ ದ್ವೀಪದಲ್ಲಿರಬೇಕು. ಬರಿಗಾಲಿನಲ್ಲೇ ನಡೆದಾಡಬೇಕು. ಕೋಟ್ಯಂತರ ಹಾವುಗಳ ನಡುವೆ, ಅತ್ಯಂತ ವಿಷಕಾರಿ ಅಪರೂಪ ಪ್ರಭೇದದ ಹಾವನ್ನು ಹಿಡಿದು, ಅದರ ವಿಷ ಸಂಗ್ರಹಿಸಬೇಕು. ಖುದ್ದು ಆ ಹಾವುಗಳಿಗೂ ಅದು ಗೊತ್ತಾಗಬಾರದು! ಸಾಧ್ಯವೇ? ಖಂಡಿತ ಇಲ್ಲ. ಅಲ್ಲಿ ಕಾಲಿಟ್ಟರೆ ಸಾವು ಖಚಿತ ಅಂತ ಹಿಂದೆ ಸರಿದುಬಿಡುತ್ತೇವೆ. ಆದರೆ, ಅಂತಹ ಅಪಾಯಕಾರಿ ಜಾಗಕ್ಕೂ ಸ್ವಯಂಪ್ರೇರಿತರಾಗಿ ಹೋಗಿ ಇದ್ದು ಬರುವ ಕೆಲ ಧೈರ್ಯಶಾಲಿಗಳಿದ್ದಾರೆ. ಅವರೇ ಸ್ಪೈ ಅಥವಾ ಗೂಢಚಾರಿಗಳು. 100 ದಿನಗಳ ಬಿಗ್​ಬಾಸ್​ನಲ್ಲೆ ಮನುಷ್ಯನ ನಿಜ ಗುಣ ಬಯಲಾಗಿಬಿಡುತ್ತದೆ. ಇನ್ನು ಶತ್ರು ರಾಷ್ಟಗಳಲ್ಲಿ, ಅಲ್ಲಿನ ಜನರಲ್ಲಿ ಒಬ್ಬರಾಗಿ ಬದುಕುವ ಸ್ಪೈಗಳು ಇನ್ನೆಷ್ಟು ಎಚ್ಚರದಿಂದಿರಬೇಕು. ಒಂದು ತಪ್ಪು ನಡೆ, ಮಾತು, ಅನುಮಾನ ಸಾಕು, ಜೀವಕ್ಕೆ ಕುತ್ತು. ಹೀಗಿದ್ದರೂ ಭಾರತದ ಕೆಲ ಗೂಢಚಾರಿಗಳು ತಮ್ಮ ಜೀವದ ಹಂಗು ತೊರೆದು ಪಾಕಿಸ್ತಾನದಲ್ಲಿದ್ದರು. ಈಗ ಗೂಢಚಾರಿಕೆ ಮತ್ತು ಭಾರತೀಯ ಗೂಢಚಾರಿಗಳ ಬಗ್ಗೆ ಏಕೆ ಮಾತು ಎಂದರೆ ಅದಕ್ಕೆ ಕಾರಣ "ಧುರಂಧರ್​' ಸಿನಿಮಾ. ಆದಿತ್ಯ ಧರ್​ ನಿರ್ದೇಶನದ ರಣವೀರ್​ ಸಿಂಗ್​, ಅಯ್​ ಖನ್ನಾ, ಸಂಜಯ್​ ದತ್​, ಸಾರಾ ಅರ್ಜುನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ. ಸಾಮಾನ್ಯವಾಗಿ ಮೊದಲ ವಾರದಿಂದ ಎರಡನೇ ವಾರಕ್ಕೆ ಚಿತ್ರದ ಗಳಿಕೆ ಕಡಿಮೆಯಾಗುತ್ತದೆ. ಆದರೆ, "ಧುರಂಧರ್​' ಅದಕ್ಕೆ ವಿರುದ್ಧವಾಗಿದ್ದು, ವಾರದಿಂದ ವಾರಕ್ಕೆ ಗಳಿಕೆ ಹೆಚ್ಚಿಸಿಕೊಂಡಿದೆ. ಮೊದಲ ವಾರ 218 ಕೋಟಿ ರೂ. ಕಲೆಕ್ಷನ್​ ಮಾಡಿಕೊಂಡಿದ್ದ ಸಿನಿಮಾ ಎರಡನೇ ವಾರ ರೂ. 262 ಕೋಟಿ ಬಾಚಿಕೊಂಡಿದೆ. ಆ ಮೂಲಕ ಅತಿ ವೇಗವಾಗಿ ರೂ. 500 ಕೋಟಿ ಕ್ಲಬ್​ ಸೇರಿದ ಬಾಲಿವುಡ್​ ಸಿನಿಮಾ ಎಂಬ ದಾಖಲೆಗೆ ಪಾತ್ರವಾಗಿದೆ. ಜತೆಗೆ ಮೂರನೇ ಶುಕ್ರವಾರ ಮೊದಲೆರಡು ಶುಕ್ರವಾರಗಳಿಗಿಂತ ಹೆಚ್ಚು ಗಳಿಕೆ ಮಾಡಿಕೊಂಡಿದ್ದು, ರೂ. 1000 ಕೋಟಿಯೂ ದೂರವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಭಾರತದ ಜೇಮ್ಸ್​ ಬಾಂಡ್​ಗಳು

ರವೀಂದ್ರ ಕೌಶಿಕ್​ (ದ ಬ್ಲಾ$್ಯಕ್​ ಟೈಗರ್​ ಎಂದು ಜನಪ್ರಿಯರಾಗಿದ್ದರು. 16 ವರ್ಷಗಳ ಜೈಲುವಾಸ ಅನುಭವಿಸಿ 2001ರಲ್ಲಿ ಅನಾರೋಗ್ಯದಿಂದ ನಿಧನ), ಕಾಶ್ಮೀರ್​ ಸಿಂಗ್​ (35 ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆ), ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ (ಏಳು ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಗೂಢಚಾರಿಯಾಗಿ ಸೇವೆ), ಸರಬ್ಜಿತ್​ ಸಿಂಗ್​ (ಗೂಢಚಾರಿ ಎಂದು ಪಾಕಿಸ್ತಾನದ ಆರೋಪ, ಆದರೆ ಅದನ್ನು ಭಾರತ ಮತ್ತು ಸರಬ್ಜಿತ್​ ಕುಟುಂಬದವರು ನಿರಾಕರಿಸಿದ್ದರು. 22 ವರ್ಷಗಳಿಂದ ಜೈಲಿನಲ್ಲಿದ್ದ ಅವರನ್ನು 2013ರಲ್ಲಿ ಪಾಕ್​ ಕೈದಿಗಳೇ ಹಲ್ಲೆ ಮಾಡಿ ಕೊಂದುಬಿಟ್ಟರು. ಈ ಹತ್ಯೆ ಮಾಡಿಸಿದ್ದು ಪಾಕಿಸ್ತಾನದ ಗುಪ್ತಚರ ದಳ ಐಎಸ್​ಐ ಎಂಬ ಆರೋಪವಿದೆ), ಕುಲಭೂಷಣ್​ ಜಾಧವ್​ (ಭಾರತದ ಮಾಜಿ ನೌಕಾಸೇನೆ ಅಧಿಕಾರಿ. 2016ರಲ್ಲಿ ಬಂಧನವಾಗಿದ್ದು, ಮರಣದಂಡನೆ ಶಿೆ ಅನುಭವಿಸುತ್ತಿದ್ದಾರೆ. ತಾನೊಬ್ಬ ಗೂಢಚಾರಿ ಎಂದು ತಪ್ಪೊಪ್ಪಿಕೊಂಡಿದ್ದು, ಭಾರತ ಅದನ್ನು ಅಲ್ಲಗಳೆದಿದೆ), 2020ರಲ್ಲಿ ಗೂಢಚಾರಿಕೆ ಆರೋಪದಲ್ಲಿ ಆಸ್ಟ್ರೆಲಿಯಾ ಇಬ್ಬರು ಭಾರತೀಯರನ್ನು ಗಡಿಪಾರು ಮಾಡಿತ್ತು.

ಅನಾಮಿಕರಿಂದ ಉಗ್ರರ ಸರಣಿ ಹತ್ಯೆ

ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅನಾಮಿಕ ವ್ಯಕ್ತಿಗಳಿಂದ ಉಗ್ರ ಸಂಟನೆಗಳ ಮುಖಂಡರ ಸರಣಿ ಹತ್ಯೆಯ ಸುದ್ದಿ ಆಗಾಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 2023 ಒಂದೇ ವರ್ಷದಲ್ಲಿ 15 ಮಂದಿ ಸೇರಿ 2020ರಿಂದೀಚೆಗೆ ಒಟ್ಟು 20ಕ್ಕೂ ಹೆಚ್ಚು ಉಗ್ರರನ್ನು ಟಾರ್ಗೆಟ್​ ಕಿಲ್ಲಿಂಗ್​ ಮೂಲಕ ಸದೆಬಡಿಯಲಾಗಿದೆ. 1999ರಲ್ಲಿ ಕಂದಹಾರ್​ನಲ್ಲಿ ಭಾರತೀಯ ವಿಮಾನವನ್ನು ಹೈಜಾಕ್​ ಮಾಡಿದದ ಉಗ್ರರಲ್ಲಿ ಒಬ್ಬನಾಗಿದ್ದ ಜಹೂರ್​ ಮಿಸ್ತ್ರಿ, ಜೈಷ್​ ಎ ಮೊಹಮ್ಮದ್​ ಸಂಟನೆಯ ಕಮಾಂಡರ್​ ಶಾಹಿದ್​ ಲತ್​ೀ, ಭಾರತದ ಮೋಸ್ಟ್​ ವಾಂಟೆಡ್​ ಉಗ್ರನಾಗಿದ್ದ ಸಲೀಮ್​ ರೆಹ್ಮಾನಿ, ಹಿಜ್ಬುಲ್​ ಮುಜಾಹಿದೀನ್​ನ ಬಷೀರ್​ ಅಹ್ಮದ್​ ಪೀರ್​, ಲಷ್ಕರ್​ ಎ ತೊಯ್ಯಬಾದ ಕಮಾಂಡರ್​ ರಿಯಾಜ್​ ಅಹ್ಮದ್​, ಖಲಿಸ್ತಾನಿ ಉಗ್ರ ಪರಮಜಿತ್​ ಸಿಂಗ್​ ಪಂಜ್ವಾರ್​ ಸೇರಿ ಪಾಕಿಸ್ತಾನದಲ್ಲಿ ಹಲವರು ಹತ್ಯೆಯಾಗಿದ್ದಾರೆ. ಜತೆಗೆ ಕೆನಡಾದಲ್ಲೂ ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್​ ನಿಜ್ಜರ್​ನ ಹತ್ಯೆ ಭಾರತೀಯ ಗೂಢಚಾರಿಗಳ ಕೆಲಸ ಎಂದು ಆರೋಪಿಸಲಾಗಿತ್ತು.

ನೈಜ ಘಟನೆಗಳ ದರ್ಶನ

"ರಾಜೀ', "ರೋಮಿಯೋ ಅಕ್ಬರ್​ ವಾಲ್ಟರ್​', "ಮಿಷನ್​ ಮಜ್ನೂ', "ಖೂಫಿಯಾ', "ಮುಖಬೀರ್​ & ದ ಸ್ಟೋರಿ ಆ್​ ಎ ಸ್ಪೈ' (ವೆಬ್​ಸರಣಿ), "ಐಬಿ71', "ಮದ್ರಾಸ್​ ಕೆಫೆ', "ಬೆಲ್​ಬಾಟಂ'... ಹೀಗೆ ನೈಜ ಘಟನೆಯಾಧಾರಿತ ಅಥವಾ ಪ್ರೇರಿತ ಸ್ಪೈ ಸಿನಿಮಾಗಳು ಹಲವು ಬಂದಿವೆ. ಹಾಗೇ "ಏಕ್​ ಥಾ ಟೈಗರ್​', "ಟೈಗರ್​ ಜಿಂದಾ ಹೈ', "ಟೈಗರ್​ 3', "ಪಠಾಣ್​', "ವಾರ್​' ಸೇರಿ ಹಲವು ಕಾಲ್ಪನಿಕ ಕಥೆಗಳೂ ಬಂದಿವೆ. ಆದರೆ, "ಧುರಂಧರ್​' ಚಿತ್ರದಷ್ಟು ಗಾಢವಾಗಿ ಯಾವ ಸಿನಿಮಾ ಕೂಡ ಪ್ರೇಕ್ಷಕರ ಮೇಲೆ ಪ್ರಭಾವ ಬೀರರಲಿಲ್ಲ. "ಧುರಂದರ್​' ಯಾವುದೋ ಒಂದು ನೈಜ ಟನೆಯಾಧಾರಿತ ಚಿತ್ರವಲ್ಲ. ಸರಣಿ ಟನೆಗಳಿಂದ ಪ್ರೇರಿತ ಕಥೆ. 1999ರ ಕಂದಹಾರ್​ ವಿಮಾನ ಹೈಜಾಕ್​ ಪ್ರಕರಣ, 2001ರ ಭಾರತೀಯ ಸಂಸತ್​ ಮೇಲಿನ ದಾಳಿ, 2008ರ ಮುಂಬೈ ಭಯೋತ್ಪಾದಕ ದಾಳಿ ಮತ್ತು ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಘಟನೆಗಳ ಸುತ್ತ ಕಥೆ ಸಾಗುತ್ತದೆ. ಉಗ್ರರು ಮತ್ತು ಐಎಸ್​ಐ ನಡುವಿನ ನಂಟು, ನಕಲಿ ನೋಟುಗಳ ಚಲಾವಣೆ, ಅಕ್ರಮ ಶಸ್ತ್ರಾಸ್ತ್ರಗಳ ಸಾಗಣೆ, ಕರಾಚಿ ರಾಜಕೀಯ, ಲ್ಯಾರಿ ಅಂಡರ್​ವರ್ಲ್ಡ್​, ಬಲೂಚಿಯವರು ಮತ್ತು ಪಾಕಿಸ್ತಾನ ಸರ್ಕಾರದ ನಡುವಿನ ಗುದ್ದಾಟ... ಹೀಗೆ ಹಲವಾರು ನೋಡಿರದ, ಕೇಳಿರದ ಅಂಶಗಳು ಚಿತ್ರದಲ್ಲಿವೆ.

ರಕ್ತಪಿಪಾಸು ರೆಹ್ಮಾನ್​ ಡಕಾಯಿತ್​

ಕರಾಚಿಯ ಲ್ಯಾರಿ ಸುಮಾರು 10 ಲಕ್ಷ ಜನಸಂಖ್ಯೆಯಿರುವ ಪ್ರದೇಶ. ಬಲೂಚಿಗಳ ಪ್ರಾಬಲ್ಯವಿರುವ ಏರಿಯಾ. ಲ್ಯಾರಿ ಗೆದ್ದರೆ ಕರಾಚಿ ಗೆದ್ದಂತೆ, ಕರಾಚಿ ಗೆದ್ದರೆ ಇಡೀ ಪಾಕಿಸ್ತಾನ ಗೆದ್ದಂತೆ ಎಂಬ ಮಾತಿದೆ. ಹೀಗಾಗಿಯೇ ಲ್ಯಾರಿಯ ಆಡಳಿತ ಚುಕ್ಕಾಣಿ ಹಿಡಿಯಲು ಸರ್ಕಾರಗಳಿಗಿಂತ ಮಾಫಿಯಾ ಮತ್ತು ಅಂಡರ್​ವರ್ಲ್ಡ್​ನವರಲ್ಲೇ ಸ್ಪರ್ಧೆ ಹೆಚ್ಚು. ಅತಿ ಸಣ್ಣ ವಯಸ್ಸಿನಲ್ಲೇ ಲ್ಯಾರಿಯ ಡಾನ್​ ಆಗಿದ್ದವನು ರೆಹ್ಮಾನ್​ ಬಲೂಚ್​ ಅಲಿಯಾಸ್​ ರೆಹ್ಮಾನ್​ ಡಕಾಯತ್​. "ಧುರಂಧರ್​' ಚಿತ್ರದಲ್ಲಿ ರೆಹ್ಮಾನ್​ ಪಾತ್ರವನ್ನು ಅಕ್ಷಯ್​ ಖನ್ನಾ ನಿಭಾಯಿಸಿದ್ದಾರೆ. ಈಗಾಗಲೇ ಫ್ಲಿಪ್ಪೆರಾಚಿ ಹಾಡಿರುವ ಅಕ್ಷಯ್​ ಖನ್ನಾ ಎಂಟ್ರಿ ಅರೇಬಿಕ್​ ಹಾಡು ದೊಡ್ಡ ಮಟ್ಟದಲ್ಲಿ ವೈರಲ್​ ಆಗಿದೆ. ಚಿತ್ರದಲ್ಲಿ ರೆಹ್ಮಾನ್​ ಪಾತ್ರವನ್ನು ಕ್ರೂರಿಯಂತೆ ಚಿತ್ರಿಸಲಾಗಿದ್ದು, ಆತ ಮಾನವೀಯತೆಯೇ ಇಲ್ಲದ ರಾಕ್ಷಸನಂತೆ ಕಾಣಬಹುದು. ಆದರೆ, ನಿಜ ಜೀವನದಲ್ಲಿ ಈ ರೆಹ್ಮಾನ್​ ರೀಲ್​ಗಿಂತಲೂ ಹೆಚ್ಚು ಕ್ರೂರಿಯಾಗಿದ್ದನಂತೆ. 13ನೇ ವಯಸ್ಸಿನಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಹಾಕಿ ಅಪರಾಧ ಜಗತ್ತಿಗೆ ಕಾಲಿಟ್ಟ ಆತ, 15ನೇ ವಯಸ್ಸಿನಲ್ಲಿ ಹೆತ್ತ ತಾಯಿಯನ್ನೇ ಕೊಂದಿದ್ದನಂತೆ. ನೂರಕ್ಕೂ ಅಧಿಕ ಪ್ರಕರಣಗಳಲ್ಲಿ ಆತನ ಹೆಸರು ಕೇಳಿಬಂದಿದ್ದು, ಸರ್ಕಾರ 50 ಲಕ್ಷ ಪಾಕಿಸ್ತಾನ ರೂಪಾಯಿ ಇನಾಮು ಘೋಷಿಸಿತ್ತು. ಅದರ ನಡುವೆಯೂ ಬಲೂಚಿಯರ ಬೆಂಬಲವಿದ್ದ ಕಾರಣ ಪೀಪಲ್ಸ್​ ಅಮನ್​ ಕಮಿಟಿ ಪಕ್ಷ ಸ್ಥಾಪಿಸಿದ್ದ. ಮೂರು ಮದುವೆಯಾಗಿದ್ದ ಅವನಿಗೆ 17 ಮಕ್ಕಳಿದ್ದರು, 2009ರಲ್ಲಿ ಕೇವಲ 29ನೇ ವಯಸ್ಸಿಗೇ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾದ.

ತನ್ನದೇ ಅಭಿಮಾನಿ ಪಾತ್ರದಲ್ಲಿ ಸಂಜಯ್​ ದತ್​!

ಕರಾಚಿ ಎಸ್​ಪಿ ಅಸ್ಲಂ ಖಾನ್​ ಚೌಧರಿಯನ್ನು ನೋಡಿದರೆ, ಅವರು ಮತ್ತು ಬಾಲಿವುಡ್​ ನಟ ಸಂಜಯ್​ ದತ್​ ಇಬ್ಬರೂ ಅವಳಿಗಳಾ ಅಂತ ಅನ್ನಿಸದೇ ಇರದು. ಸ್ಟೆ$ಲ್​, ಬಾಡಿ ಲಾಂಗ್ವೇಜ್​, ಸಿಗರೇಟ್​ ಸೇದುವ ರೀತಿ, ನಡೆಯುವುದು... ಹೀಗೆ ಬಾಲ್ಯದಲ್ಲಿ ಬೇರ್ಪಟ್ಟ ಅವಳಿಗಳಂತೆ ಕಾಣುತ್ತಾರೆ. ಆದರೆ, ವಿಶೇಷ ಅಂದರೆ ಈ ಅಸ್ಲಂ ಚೌಧರಿ ನಟ ಸಂಜಯ್​ ದತ್​ ಅಭಿಮಾನಿಯಂತೆ. ಹೀಗಾಗಿಯೇ ಸಂಜು ಬಾಬಾ ಅವರ ಸ್ಟೆ$ಲ್​ ಹೆಚ್ಚು ಕಾಪಿ ಮಾಡುತ್ತಿದ್ದರಂತೆ. ಎನ್​ಕೌಂಟರ್​ ಸ್ಪೆಷಲಿಸ್ಟ್​ ಆಗಿದ್ದ ಅಸ್ಲಂ, ರೆಹ್ಮಾನ್​ ಬಲೂಚಿ ಮತ್ತು ಗ್ಯಾಂಗನ್ನು ಮಟ್ಟ ಹಾಕಲು ಪ್ರಾರಂಭಿಸಿದ್ದ ಲ್ಯಾರಿ ಟಾಸ್ಕ್​ ೋರ್ಸ್​ ನೇತೃತ್ವ ವಹಿಸಿದ್ದ. ರೆಹ್ಮಾನ್​ ಬೇಟೆಯಾಡಿದ ಅಸ್ಲಂನನ್ನೇ 2014ರಲ್ಲಿ ಭಯೋತ್ಪಾದಕರು ಬೇಟೆಯಾಡಿ ಕೊಂದರು.

ಅಜಿತ್​ ದೋವಲ್​

ಬಹುಭಾಷಾ ನಟ ಆರ್​. ಮಾಧವನ್​ "ಧುರಂಧರ್​'ನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ರನ್ನು ಹೋಲುವ ಅಜಯ್​ ಸನ್ಯಾಲ್​ ಪಾತ್ರದಲ್ಲಿ ನಟಿಸಿದ್ದಾರೆ. ಉಗ್ರರನ್ನು ಭಾರತಕ್ಕೆ ರ್ತು ಮಾಡುವ ಮೂಲಕ, ಗಡಿ ಜತೆಗೆ ಒಳಗೂ ದಾಳಿ ನಡೆಸಿ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದ ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಉತ್ತರ ನೀಡಲು ಮುಂದಾಗುವ ಅಜಯ್​ ಸನ್ಯಾಲ್​ ಈ "ಧುರಂಧರ್​' ಪ್ಲಾ$್ಯನ್​ ಮಾಡುತ್ತಾರೆ. ಅಪರಾಧವೆಸಗಿ ನೇಣಿಗೆ ಕೊರಳೊಡ್ಡಲು ನಿಂತಿರುವ, ಸಾವಿಗೆ ಹೆದರದ, ಕ್ರಿಮಿನಲ್​ ಒಬ್ಬನನ್ನು ಆಯ್ಕೆ ಮಾಡಿ ತರಬೇತಿ ಕೊಟ್ಟು, ಗೂಢಚಾರಿಯನ್ನಾಗಿಸಿ ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ.

ಮೇಜರ್​ ಇಕ್ಬಾಲ್​

ಪಾಕಿಸ್ತಾನದ ಮಾಜಿ ಸೇನಾಧಿಕಾರಿ ಇಲ್ಯಾಸ್​ ಕಾಶ್ಮೀರಿಯನ್ನು ಹೋಲುವ ಮೇಜರ್​ ಇಕ್ಬಾಲ್​ ಪಾತ್ರದಲ್ಲಿ ನಟ ಅರ್ಜುನ್​ ರಾಮಪಾಲ್​ ನಟಿಸಿದ್ದಾರೆ. ಇಲ್ಯಾಸ್​ ಮುಂಬೈ ಉಗ್ರ ದಾಳಿಯ ಮಾಸ್ಟರ್​ ಮೈಂಡ್​. ಇಲ್ಯಾಸ್​ ನೇತೃತ್ವದಲ್ಲಿ ಡೇವಿಡ್​ ಹೆಡ್ಲಿ, ರೆಹ್ಮಾನ್​ ಬಲೂಚ್​, ಖನಾನಿ ಸಹೋದರರು, ಕಸಾಬ್​ ಮತ್ತು ತಂಡ ಸೇರಿ ಮುಂಬೈ ದಾಳಿಯನ್ನು ಹೇಗೆ ಪ್ಲಾ$್ಯನ್​ ಮಾಡಿತು ಎಂಬುದನ್ನೂ "ಧುರಂದರ್​'ನಲ್ಲಿ ನೋಡಬಹುದು.

ಉಜೈರ್​ ಬಲೂಚ್​

ರೆಹ್ಮಾನ್​ ಸೋದರ ಸಂಬಂಧಿ ಉಜೈರ್​ ಬಲೂಚ್​. ರೆಹ್ಮಾನನ ಎಲ್ಲ ಕೆಮ್​ಗಳ ಸಹಭಾಗಿ ಈತ. ರೆಹ್ಮಾನ್​ನಂತೆಯೇ ಕ್ರೂರಿಯಾಗಿದ್ದ ಉಜೈರ್​ ತನ್ನ ಎದುರಾಳಿ ಗ್ಯಾಂಗ್​ನ ಸದಸ್ಯರನ್ನು ಕೊಂದು, ಅವರ ತಲೆಗಳನ್ನೇ ುಟ್​ಬಾಲ್​ ಮಾಡಿಕೊಂಡು ಆಟವಾಡಿದ್ದನಂತೆ. ಇಂತಹ ಉಜೈರ್​ ಪಾತ್ರದಲ್ಲಿ ಡಾನಿಶ್​ ಪೆಂಡೊರ್​ ನಟಿಸಿದ್ದಾರೆ. ಪಾಕಿಸ್ತಾನ ಮಾತ್ರವಲ್ಲದೇ ದುಬೈ, ಅ್ಘಾನಿಸ್ತಾನ, ಮಸ್ಕತ್​ ಸೇರಿ ಹಲವೆಡೆ ಕೋಟ್ಯಂತರ ಬೆಲೆಯ ಆಸ್ತಿಗಳನ್ನು ಹೊಂದಿರುವ ಉಜೈರ್​ 2016ರಿಂದ ಜೈಲಿನಲ್ಲಿದ್ದಾನೆ.

ನಬಿಲ್​ ಗಬೊಲ್​

ಪಾಕಿಸ್ತಾನದ ಮಾಜಿ ಸಚಿವ, ಸಂಸದ ನಬಿಲ್​ ಗಬೊಲ್​ ಪಾತ್ರದಿಂದ ಸ್ಫೂರ್ತಿ ಪಡೆದು ನಿರ್ದೇಶಕ ಆದಿತ್ಯ ಧರ್​ ನಟ ರಾಕೇಶ್​ ಬೇಡಿಯವರ ಜಮೀಲ್​ ಜಮಾಲಿ ಪಾತ್ರ ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಲ್ಯಾರಿಯಲ್ಲಿ ಅಂಡರ್​ವರ್ಲ್ಡ್​ ದೊಡ್ಡ ಮಟ್ಟಕ್ಕೆ ಬೆಳೆಯಲು ನಬಿಲ್​ ಗಬೊಲ್​ ಕೂಡ ಕಾರಣ ಎನ್ನಲಾಗಿದೆ. ವಿಮಾನದಲ್ಲಿ ಸಹಪ್ರಯಾಣಿಕನ ಮೇಲೆ ಹಲ್ಲೆ, ವ್ಯಕ್ತಿಯೊಬ್ಬನ ಮೇಲೆ ಶೂಟೌಟ್​ ಸೇರಿ ಹಲವು ಆರೋಪಗಳು ಈತನ ಮೇಲಿವೆ.
ಡಿ-ಕಂಪನಿಯ ದಾವೂದ್​ ಇಬ್ರಾಹಿಂ (ಡಾನಿಷ್​ ಇಕ್ಬಾಲ್​), ಬಾಬು ಡಕಾಯತ್​ (ಆಸಿಫ್​ ಅಲಿ ಹೈದರ್​ ಖಾನ್​), ಓಮರ್​ ಶಾಹಿದ್​ ಅಮೀದ್​ (ಎಎಸ್​ಪಿ ಓಮರ್​ ಹೈದರ್​ ದತ್ತಾ ಪಾತ್ರದಲ್ಲಿ ಆದಿತ್ಯ ಉಪ್ಪಾಲ್​), ಜಾವೆದ್​ ಖನಾನಿ, ಅಲ್ತಾಫ್​ ಖನಾನಿ, ಅಜಂ ಚೀಮಾ, ಸಾಜಿದ್​ ಮೀರ್​, ಅಬ್ದುಲ್​ ಭುಟ್ಟೋವಿ, ಡೇವಿಡ್​ ಹೆಡ್ಲಿ, ಅಜ್ಮಲ್​ ಕಸಾಬ್​, ಜಹೂರ್​ ಮಿಸ್ತ್ರಿ, ಇಬ್ರಾಹಿಂ ಅಥರ್​, ಪಾಕಿಸ್ತಾನ ಅಧ್ಯಕ್ಷ ಆಸ್​ಿ ಅಲಿ ರ್ಜದಾರಿ, ಭಾರತದ ಮಾಜಿ ಸಚಿವ ಜಸ್ವಂತ್​ ಸಿಂಗ್​, ಭಾರತದ ಗುಪ್ತಚರ ದಳದ ವಿಶೇಷ ಕಾರ್ಯದರ್ಶಿ ಎ.ಎಸ್​.ದುಲಾತ್​... ಹೀಗೆ ಕೆಲವರು ಹೆಸರನ್ನು ನೇರವಾಗಿ ಬಳಸಲಾಗಿದ್ದು, ಕೆಲವರ ಹೆಸರನ್ನು ಬದಲಿಸಲಾಗಿದೆ. ಆದರೆ, ನೈಜ ವ್ಯಕ್ತಿಗಳನ್ನು ಹೋಲುವ ಪಾತ್ರಗಳಾದ ಕಾರಣ ಪ್ರೇಕ್ಷಕರಿಗೂ ಕನೆಕ್ಟ್​ ಆಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net