Shakeel Noorani - 73 ವರ್ಷದ ನಿರ್ಮಾಪಕನ ಮೇಲೆ 33 ವರ್ಷದ ನಟಿ ಅತ್ಯಾಚಾರ ಆರೋಪ

Shakeel Noorani
Shakeel Noorani
Published on
Shakeel Noorani -
ಸನ್ನಿ ಡಿಯೋಲ್​, ನೀಲಮ್​ ನಟಿಸಿದ್ದ "ವಿಷ್ಣು ದೇವ' (1991), "ಶ್ರೀಮಾನ್​ ಆಶಿಕಿ' (1993), ಸುನೀಲ್​ ಶೆಟ್ಟಿ ಅಭಿನಯಿಸಿದ್ದ "ಬಡೇ ದಿಲ್ವಾಲಾ' (1999), ಗೋವಿಂದ, ಟ್ವಿಂಕಲ್​ ಖನ್ನಾ ನಟಿಸಿದ್ದ "ಜೋರು ಕಾ ಗುಲಾಮ್​' (2000) ಸೇರಿ ಕೆಲ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದ ಬಾಲಿವುಡ್​ ನಿರ್ದೇಶಕ ಶಕೀಲ್​ ನೂರಾನಿ ಬಂಧನಕ್ಕೆ ಒಳಗಾಗಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ, ದೌರ್ಜನ್ಯ ಎಸಗಿದ್ದಾರೆ ಎಂದು 73 ವರ್ಷದ ಹಿರಿಯ ನಿರ್ದೇಶಕನ ಮೇಲೆ 33 ವರ್ಷದ ನಟಿಯೊಬ್ಬರು ಒಂದೂವರೆ ತಿಂಗಳ ಹಿಂದೆ ದೂರು ದಾಖಲಿಸಿದ್ದರು. ಆಗಿನಿಂದ ತಲೆಮರೆಸಿಕೊಂಡಿದ್ದ ಶಕೀಲ್​ನನ್ನು 40 ದಿನಗಳ ನಂತರ ಮಹಾರಾಷ್ಟ್ರದ ಸತಾರಾದ ಅವರದೇ ಒಡೆತನದ ಫಾರ್ಮ್​ಹೌಸಿನಲ್ಲಿ ಪೊಲೀಸರು ಬಂಧಿಸಿದ್ದಾರೆ. 2016ರಲ್ಲಿ ಶಕೀಲ್​ ಮತ್ತು ನಟಿಯ ಪರಿಚಯವಾಗಿದ್ದು, ನಾಲ್ಕು ವರ್ಷಗಳ ಹಿಂದೆ ಸಿನಿಮಾ ಬಗ್ಗೆ ಮಾತನಾಡಲು ಮನೆಗೆ ಕರೆದಿದ್ದರು. ಮನೆಗೆ ಹೋದಾಗ ಮತ್ತು ಬರಿಸುವಂತೆ ಮಾಡಿ ದೌರ್ಜನ್ಯ ಎಸಗಿ, ವಿಡಿಯೋ ಮಾಡಿಕೊಂಡು, ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದರು. ಅವರಿಂದಾಗಿ ಗರ್ಭಪಾತವೂ ಆಗಿತ್ತು ಎಂದು ನಟಿಯು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಬಂಧನದ ಬಳಿಕ ಬೋರಿವಲಿ ಹಾಲಿಡೇ ಕೋರ್ಟ್​ ಮುಂದೆ ಶಕೀಲ್​ನನ್ನು ಹಾಜರುಪಡಿಸಲಾಗಿದ್ದು, ಬುಧವಾರದವರೆಗೆ (ಆ. 12) ಪೊಲೀಸರ ವಶಕ್ಕೆ ನೀಡಲಾಗಿದೆ. ಮತ್ತೊಂದೆಡೆ ಶಕೀಲ್​ ಪರ ವಕೀಲ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net