ಅಂದು ಸಲ್ಮಾನ್ ಖಾನ್ ಆಡಿದ್ದ ಆ ಮಾತು ಇಂದು ನಿಜವಾಯ್ತು!: ಇಮ್ರಾನ್ ಹಶ್ಮಿ ವಿಚಾರದಲ್ಲಿ ಬಾಲಿವುಡ್ ಮಾಡಿದ್ದ ತಪ್ಪೇನು?! Salman Khan

ಅಂದು ಸಲ್ಮಾನ್ ಖಾನ್ ಆಡಿದ್ದ ಆ ಮಾತು ಇಂದು ನಿಜವಾಯ್ತು!: ಇಮ್ರಾನ್ ಹಶ್ಮಿ ವಿಚಾರದಲ್ಲಿ ಬಾಲಿವುಡ್ ಮಾಡಿದ್ದ ತಪ್ಪೇನು?! Salman Khan ಚಿತ್ರ Instagram
ಅಂದು ಸಲ್ಮಾನ್ ಖಾನ್ ಆಡಿದ್ದ ಆ ಮಾತು ಇಂದು ನಿಜವಾಯ್ತು!: ಇಮ್ರಾನ್ ಹಶ್ಮಿ ವಿಚಾರದಲ್ಲಿ ಬಾಲಿವುಡ್ ಮಾಡಿದ್ದ ತಪ್ಪೇನು?! Salman Khan ಚಿತ್ರ Instagram
Published on

Salman Khan: ಬಾಲಿವುಡ್ ನಟ ಇಮ್ರಾನ್ ಹಶ್ಮಿ ನಟನೆಯ ಬಹುನಿರೀಕ್ಷಿತ 'ಆವಾರಾಪನ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, 100 ಕೋಟಿ ರೂಪಾಯಿಗಳಷ್ಟು ಬಾಚುತ್ತಿದೆ. ಇಮ್ರಾನ್​ ಸೋಲೋ ಹೀರೋ ಆಗಿ ಈ ಮೈಲಿಗಲ್ಲು ತಲುಪಿರುವುದಕ್ಕೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಇನ್ನೊಂದೆಡೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಹಿಂದೆ ಹೇಳಿದ್ದ ಹಳೆಯ ಹೇಳಿಕೆಯೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗಿದೆ.

ಇಮ್ರಾನ್ ಹಶ್ಮಿ ಸೂಕ್ತ ಅರ್ಹತೆ ಪಡೆಯಬೇಕಿದೆ - ಸಲ್ಮಾನ್ ಖಾನ್

2012ರಲ್ಲಿ ಇಷ್ಕ್ ಇನ್ ಪ್ಯಾರಿಸ್ ಚಿತ್ರದ ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಲ್ಮಾನ್ ಖಾನ್, ಇಮ್ರಾನ್​ ಅವರನ್ನು ಮುಕ್ತಕಂಠದಿಂದ ಹೊಗಳಿದ್ದರು. ಬಾಲಿವುಡ್​ನಲ್ಲಿ ಸರಿಯಾದ ಗುರುತಿಸುವಿಕೆ ಸಿಗದ ಅತ್ಯಂತ ಪ್ರತಿಭಾವಂತ ನಟ ಎಂದರೆ ಅದು ಇಮ್ರಾನ್​ ಹಶ್ಮಿ. ಅವರು ಬ್ಯಾಕ್-ಟು-ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅದ್ಭುತವಾಗಿ ನಟಿಸುವ ಅವರು ಈಗ ತಮಗೆ ಸಿಕಬೇಕಾದ ಸೂಕ್ತ ಗೌರವ ಹಾಗೂ ಅರ್ಹತೆಯನ್ನು ಪಡೆಯಬೇಕಾಗಿದೆ ಎಂದಿದ್ದರು.

ಸಲ್ಮಾನ್‌ರನ್ನು 'ಭಾಯ್' ಎಂದು ಕರೆಯದಿರಲು ಕಾರಣ ನೀಡಿದ್ದ ಇಮ್ರಾನ್

ಚಿತ್ರರಂಗದ ಬಹುತೇಕರು ಸಲ್ಮಾನ್ ಖಾನ್ ಅವರನ್ನು ಪ್ರೀತಿಯಿಂದ 'ಭಾಯ್' ಎಂದು ಕರೆಯುತ್ತಾರೆ. ಆದರೆ, ಇಮ್ರಾನ್ ಮಾತ್ರ ಆ ರೀತಿ ಕರಿಯುತ್ತಿರಲಿಲ್ಲ. ಆದಾಗ್ಯೂ, ಈ ಕುರಿತು ಮಾತನಾಡಿದ ಹಶ್ಮಿ, ನಾನು ಸಲ್ಮಾನ್ ಅವರನ್ನು 'ಭಾಯ್' ಎಂದು ಕರೆಯದೇ ಇರಬಹುದು, ಆದರೆ, ಅವರನ್ನು ನನ್ನ ಸ್ವಂತ ಸಹೋದರ ಮತ್ತು ಒಳ್ಳೆಯ ಸ್ನೇಹಿತನಂತೆ ಕಾಣುತ್ತೇನೆ. ಗೌರವ ಎನ್ನುವುದು ಬಾಯಲ್ಲಿ ಮಾತುಗಳಿಂದ ಬರುವುದಿಲ್ಲ. ನಮ್ಮ ನಡವಳಿಕೆ ಮತ್ತು ಕೆಲಸದಿಂದ ಬರುತ್ತದೆ ಎಂದು ಹೇಳಿದ್ದರು.

ಪ್ರಚಾರದ ವೇಳೆ ವೈರಲ್ ಆಗಿದ್ದ ಕಿಸ್ಸಿಂಗ್ ಸೀನ್ ಡ್ರಾಮಾ!

'ಟೈಗರ್ 3' ಸಿನಿಮಾದಲ್ಲಿ ಕತ್ರಿನಾ ಕೈಫ್ ಜೊತೆಗಿನ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಮಾತನಾಡುತ್ತಿದ್ದ ಸಲ್ಮಾನ್, ಚಿತ್ರದಲ್ಲಿ ಕತ್ರಿನಾ ಇದ್ದಾಗ ರೊಮ್ಯಾನ್ಸ್ ಇದ್ದೇ ಇರುತ್ತದೆ. ಒಂದು ವೇಳೆ ಇಮ್ರಾನ್ ಈ ಚಿತ್ರದಲ್ಲಿ ಆತಿಶ್ ಪಾತ್ರ ಮಾಡದೇ ಇದ್ದಿದ್ದರೆ, ನಾವಿಬ್ಬರೂ ಕಿಸ್ಸಿಂಗ್ ಸೀನ್ ಮಾಡುತ್ತಿದ್ದೆವು ಎಂದರು.

100 ಕೋಟಿಯತ್ತ ಆವಾರಾಪನ್ 2

2007ರ ಸೂಪರ್ ಹಿಟ್ ಆವಾರಾಪನ್ ಸಿನಿಮಾದ ಮುಂದುವರಿದ ಭಾಗವಾಗಿ ತೆರೆಕಂಡಿರುವ ಆವಾರಾಪನ್ 2 ಈಗ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ನಿತಿನ್ ಕಕ್ಕರ್ ನಿರ್ದೇಶನ ಹಾಗೂ ವಿಶೇಷ್ ಭಟ್ ನಿರ್ಮಾಣದ ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಜೊತೆಗೆ ದಿಶಾ ಪಟಾನಿ ಮತ್ತು ಶಬಾನಾ ಆಜ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಇಮ್ರಾನ್ ತಮ್ಮ ವೃತ್ತಿಜೀವನದ ಮೊದಲ ಸೋಲೋ 100 ಕೋಟಿ ಕ್ಲಬ್ ಸಾಧನೆ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net