ಬಂಗಾಳ ಮತ್ತೊಂದು ಕಾಶ್ಮೀರ ಆಗದಿರಲಿ; "ದ ಡೆಲ್ಲಿ ಫೈಲ್ಸ್​: ದ ಬೆಂಗಾಲ್​ ಚಾಪ್ಟರ್​' ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅಭಿಮತ

ZC
Published on

"ದ ತಾಷ್ಕೆಂಟ್​ ಫೈಲ್ಸ್​', "ದ ಕಾಶ್ಮೀರ್​ ಫೈಲ್ಸ್​', "ದ ವ್ಯಾಕ್ಸಿನ್​ ವಾರ್​'ನಂತಹ ನೈಜ ಘಟನೆಯಾಧಾರಿತ ಚಿತ್ರಗಳ ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಆಗಾಗ ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. 2023ರಲ್ಲಿ "ದ ವ್ಯಾಕ್ಸಿನ್​ ವಾರ್​' ಬಳಿಕ ಮತ್ತೊಂದು ನೈಜ ಘಟನೆಯಾಧಾರಿತ ಚಿತ್ರದ ಸಿದ್ಧತೆಯಲ್ಲಿದ್ದ ವಿವೇಕ್​ ಇದೀಗ, "ದ ಡೆಲ್ಲಿ ಫೈಲ್ಸ್​: ದ ಬೆಂಗಾಲ್​ ಚಾಪ್ಟರ್​'ನೊಂದಿಗೆ ವಾಪಸ್ಸಾಗಿದ್ದಾರೆ.

1940ರ ದಶಕದ ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತಿ&ಗತಿಗಳ ಸುತ್ತ ಸಾಗುವ ಈ ಕಥೆಯಲ್ಲಿ, ಮುಸ್ಲಿಂ ಲೀಗ್​ 1946ರಲ್ಲಿ ಡೈರೆಕ್ಟ್​ ಆ್ಯಕ್ಷನ್​ ಡೇ ಘೋಷಣೆಯ ನಂತರ ನಡೆದ ದಂಗೆಗಳು ಹಾಗೂ ನವೋಖಲಿ ಹಿಂಸಾಚಾರದ ಮೇಲೂ ಬೆಳಕು ಚೆಲ್ಲಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೆ ಶೂಟಿಂಗ್​ ಸಮಯದ ಕೆಲ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ವಿವೇಕ್​, "ಬಂಗಾಳದಲ್ಲಿ ಶಾಂತಿ, ಸಾಮರಸ್ಯ ಮತ್ತೆ ನೆಲೆಯೂರಲಿ ಎಂದು ಆಶಿಸುತ್ತೇನೆ. ಯುವಕರು ಧೈರ್ಯ ಮತ್ತು ವಿವೇಕದಿಂದ ಭಾರತದ ಮೂಲ ಸಂಸತಿಯನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ. ಬಂಗಾಳ ಮತ್ತೊಂದು ಕಾಶ್ಮೀರ ಆಗದಿರಲಿ' ಎಂದು ಬರೆದುಕೊಂಡಿದ್ದಾರೆ.

ವಕ್ಫ್​ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಹಲವೆಡೆ ಹಿಂದುಗಳು ತಮ್ಮ ಊರು ತೊರೆದು ಗುಳೆ ಹೊರಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net