Daler Mehndi - ಸಿಂಗರ್​ ದಲೇರ್ ವರ್ಸಸ್​ ಸಚಿವ ಸುಭೋದ್ ಉನ್ಯಾಲ್​

2024ರಿಂದ ಅನಾರೋಗ್ಯಕ್ಕೀಡಾಗಿದ್ದ ಗಾಯಕ ದಲೇರ್ ಮೆಹೆಂದಿ, ಸಂಗೀತ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿದ್ದು ಅದರ ನಡುವೆಯೇ ಕಳೆದ ಶುಕ್ರವಾರ (ಅ.18) ಉತ್ತರಾಖಂಡ್​ನ ತೆಹ್ರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕುಂಜಾಪುರಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಉತ್ತರಾಖಂಡ ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಸುಬೋಧ್​ ಉನ್ಯಾಲ್​ ದಲೇರ್​ ಹಾಡುತ್ತಿಲ್ಲ, ಲಿಪ್​ ಸಿಂಕ್​ ಮಾಡುತ್ತಿದ್ದಾರಷ್ಟೆ. ಮಾತನಾಡುವುದಿರಲಿ, ಅವರಿಂದ ನಿಲ್ಲಲೂ ಆಗುತ್ತಿಲ್ಲ ಎಂದು ಕಾರ್ಯಕ್ರಮ ನಿಲ್ಲಿಸಿ, ಅಲ್ಲಿಂದ ತೆರಳಲು ಸೂಚಿಸಿದರು.
ಗಾಯಕ ದಲೇರ್ ಮೆಹಂದಿ ಮತ್ತು ಉತ್ತರಾಖಂಡ ಸಚಿವ ಸುಭೋದ್ ಉನ್ಯಾಲ್
ಗಾಯಕ ದಲೇರ್ ಮೆಹಂದಿ ಮತ್ತು ಉತ್ತರಾಖಂಡ ಸಚಿವ ಸುಭೋದ್ ಉನ್ಯಾಲ್
Published on: 

ಭಾಂಗ್ರಾ ಮತ್ತು ಭಾರತೀಯ ಪಾಪ್​ ಸಂಗೀತವನ್ನು ವಿಶ್ವಾದ್ಯಂತ ಕೊಂಡೊಯ್ದ ಹೆಗ್ಗಳಿಕೆ ಗಾಯಕ ದೇಲರ್​ ಮೆಹಂದಿಗೆ ಸಲ್ಲುತ್ತದೆ. "ಬೋಲೋ ತಾರಾರಾ', "ದರ್ದಿ ರಬ್​ ರಬ್​', "ಬಲ್ಲೆ ಬಲ್ಲೆ', "ನಾ ನಾ ನಾ ರೆ', "ತುನಕ್​ ತುನಕ್​ ತುನ್​'... ಹೀಗೆ 90ರ ದಶಕದಲ್ಲಿಯೇ ಅವರ ಸಿನಿಮಾ ಮತ್ತು ಆಲ್ಬಂ ಹಾಡುಗಳು ವಿಶ್ವಾದ್ಯಂತ ಕೋಟ್ಯಂತರ ಜನರನ್ನು ತಲುಪಿದ್ದವು. ಭಾರತದಲ್ಲಿ ಮಾತ್ರವಲ್ಲದೇ 30ಕ್ಕೂ ಅಧಿಕ ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಹೆಗ್ಗಳಿಕೆ ದಲೇರ್​ಗೆ ಸಲ್ಲುತ್ತದೆ. ಆದರೆ, 2024ರಿಂದ ಅನಾರೋಗ್ಯಕ್ಕೀಡಾಗಿದ್ದ ಅವರು, ಸಂಗೀತ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿದ್ದು ಅದರ ನಡುವೆಯೇ ಕಳೆದ ಶುಕ್ರವಾರ (ಅ.18) ಉತ್ತರಾಖಂಡ್​ನ ತೆಹ್ರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕುಂಜಾಪುರಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಉತ್ತರಾಖಂಡ ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಸುಬೋಧ್​ ಉನ್ಯಾಲ್​ ದಲೇರ್​ ಹಾಡುತ್ತಿಲ್ಲ, ಲಿಪ್​ ಸಿಂಕ್​ ಮಾಡುತ್ತಿದ್ದಾರಷ್ಟೆ. ಮಾತನಾಡುವುದಿರಲಿ, ಅವರಿಂದ ನಿಲ್ಲಲೂ ಆಗುತ್ತಿಲ್ಲ ಎಂದು ಕಾರ್ಯಕ್ರಮ ನಿಲ್ಲಿಸಿ, ಅಲ್ಲಿಂದ ತೆರಳಲು ಸೂಚಿಸಿದರು. ಸಚಿವ ಮತ್ತು ಸಿಂಗರ್​ ನಡುವಿನ ಗಲಾಟೆ ಜಾಲತಾಣದಲ್ಲಿ ವೈರಲ್​ ಆಗಿತ್ತು. ಅದರ ಬೆನ್ನಲ್ಲೇ ಕಪಿಲ್​ ಶರ್ಮಾ, ಅನುಪಮ್​ ಖೇರ್​, ಬಾದ್​ಶಾ, ಶಾನ್​, ಹರ್ಷದೀಪ್​ ಕೌರ್​ ಸೇರಿ ಹಲವು ಬಾಲಿವುಡ್​ ಸಿಂಗರ್​ಗಳು ಮತ್ತು ನಟರು ಗಾಯಕನ ಪರ ಧ್ವನಿಯೆತ್ತಿದ್ದಾರೆ. ಉತ್ತರಾಖಂಡ ಸಚಿವ ವೇದಿಕೆಯಲ್ಲಿ ದಲೇರ್​ ವಿರುದ್ಧ ಮಾತನಾಡಿದ್ದನ್ನು ವಿರೋಧಿಸಿದ್ದಾರೆ. ಹಾಗೇ ದಲೇರ್​ ಸಹೋದರ ಗಾಯಕ ಮಿಕಾ ಸಿಂಗ್​, "ನನ್ನ ಅಣ್ಣ ಮದ್ಯಪಾನ ಮಾಡುವುದಿಲ್ಲ. ಅವರು ಮದ್ಯ ಸೇವಿಸುವುದನ್ನು ಯಾರಾದರೂ ಪ್ರೂವ್​ ಮಾಡಿದರೆ, ನಾನು ಗಾಯನದಿಂದ ನಿವೃತ್ತಿ ಪಡೆಯುತ್ತೇನೆ' ಎಂದು ಸವಾಲು ಹಾಕಿದ್ದಾರೆ. ಮತ್ತೊಂದೆಡೆ ತಮ್ಮನ್ನು ಸಮರ್ಥಿಸಿಕೊಂಡಿರುವ ಸಚಿವ ಸುಬೋಧ್​, "ದಲೇರ್​ ದೊಡ್ಡ ಗಾಯಕರು ಎಂಬುದನ್ನು ಒಪು$್ಪತ್ತೇನೆ. ಆದರೆ, ಅವರು ತಮ್ಮ ಕಲೆಗೆ ನ್ಯಾಯ ನೀಡಬೇಕಲ್ಲವೇ? ₹35 ಲಕ್ಷ ಸಂಭಾವನೆ ಕೊಟ್ಟಿದ್ದೇವೆ. ಅವರಿಗೆ ಆರೋಗ್ಯ ಸರಿಯಿಲ್ಲದಿದ್ದರೆ, ಕಾರ್ಯಕ್ರಮಕ್ಕೆ ಬರಬಾರದಿತ್ತು' ಎಂದಿದ್ದಾರೆ.

ಗಾಯಕ ದಲೇರ್ ಮೆಹಂದಿ
ಗಾಯಕ ದಲೇರ್ ಮೆಹಂದಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net