‘ಟಾಕ್ಸಿಕ್’ ಕಮಾಲ್, ಕಿಯಾರಾ ಮಾಲಾಮಾಲ್ ! : ಪ್ಯಾನ್ ವರ್ಲ್ಡ್ ಚಿತ್ರಕ್ಕೆ 15 ಕೋಟಿ ಸಂಭಾವನೆ ಪಡೆದ ಬಾಲಿವುಡ್ ನಟಿ

kirara adavani
Published on

ಎಲ್ಲ ಚಿತ್ರರಂಗಗಳಲ್ಲೂ ಹೀರೋಗಿಂತ ಹೀರೋಯಿನ್ ಸಂಭಾವನೆ ಕಡಿಮೆ ಎಂಬ ವಾದ ಇದೆ. ನಟರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ನೀಡಿದ್ದರೆ, ನಟಿಯರಿಗೆ ಮಾತ್ರ ಲಕ್ಷದಲ್ಲಿ ನೀಡುತ್ತಾರೆ ಎಂಬ ಆರೋಪವಿದೆ. ಆದರೆ, ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಪರಿಕಲ್ಪನೆ ಪ್ರಚಲಿತಗೊಂಡ ಬಳಿಕ ನಟಿಯರಿಗೂ ಕೋಟಿಗಟ್ಟಲೆ ಸಂಭಾವನೆ ನೀಡುವ ಟ್ರೆಂಡ್ ಆರಂಭವಾಗಿದೆ. ಸದ್ಯದ ಮಾಹಿತಿ ಪ್ರಕಾರ, ಪ್ಯಾನ್ ವರ್ಲ್ಡ್ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್‌ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಜೋಡಿಯಾಗಿದ್ದು, ಈಗಾಗಲೇ ತಮ್ಮ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಈ ಚಿತ್ರಕ್ಕೆ ಬರೋಬ್ಬರಿ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ವಿಷಯ ಸದ್ಯ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಹಿಂದಿ ಜತೆಗೆ ತೆಲುಗಿನಲ್ಲೂ ಗುರುತಿಸಿಕೊಂಡಿರುವ ಕಿಯಾರಾಗೆ ‘ಗೇಮ್‌ಚೇಂಜರ್’ನಂತಹ ಪ್ಯಾನ್ ಇಂಡಿಯಾ ಚಿತ್ರದಲ್ಲೂ ಮಿಂಚಿದ್ದಾರೆ. ಹೀಗಾಗಿ ಅವರಿಗೆ 15 ಕೋಟಿ ರೂಪಾಯಿ ಸಂಭಾವನೆ ಕೊಟ್ಟಿದ್ದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ. ಹಾಗಂತ ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆಯೇ ಕೆಲ ನಟಿಯರು ಇನ್ನೂ ಅಧಿಕ ಸಂಭಾವನೆ ಪಡೆದು ಸುದ್ದಿಯಾಗಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರಕ್ಕೆ ದೀಪಿಕಾ ಪಡುಕೋಣೆ 20 ಕೋಟಿ ರೂ. ಪಡೆದಿದ್ದರು. ಈ ನಡುವೆ ಹಾಲಿವುಡ್‌ನಲ್ಲಿ ಬಿಜಿಯಿರುವ ಪ್ರಿಯಾಂಕಾ ಚೋಪ್ರಾ ಎಸ್.ಎಸ್.ರಾಜಮೌಳಿ ಹಾಗೂ ಮಹೇಶ್‌ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದು, ಆ ಸಿನಿಮಾಕ್ಕೆ ಅವರು 30 ಕೋಟಿ ರೂ. ಸಂಭಾವನೆ ನಿರೀಕ್ಷಿಸಿದ್ದಾರಂತೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಕೀರ್ತಿಗೆ ಪ್ರಿಯಾಂಕಾ ಭಾಜನರಾಗಿದ್ದಾರೆ. ದೀಪಿಕಾ, ಕಿಯಾರಾ ಕ್ರಮವಾಗಿ ಎರಡು, ಮೂರನೇ ಸ್ಥಾನದಲ್ಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net