24ರ ಹರೆಯದ ಯುವಕನೊಂದಿಗೆ ಬಾಲಿವುಡ್​ ನಟಿ ಟಬು ರೊಮ್ಯಾನ್ಸ್; ಫೋಟೋಗಳು ಲೀಕ್​!

ssssss
Published on

ಬಾಲಿವುಡ್​ನಲ್ಲಿ ನಟಿ ಟಬು ಒಳ್ಳೆಯ ಹೆಸರು ಮಾಡಿದ್ದಾರೆ. ಪಾತ್ರಗಳ ಮೂಲಕವೇ ಗುರುತಿಸಿಕೊಂಡು, ಒಂದಕ್ಕಿಂತ ಒಂದು ವಿಭಿನ್ನ ಅವತಾರದಲ್ಲಿ ತೆರೆಮೇಲೆ ಎದುರಾಗುತ್ತಾರೆ. ವಯಸ್ಸು 48 ಆದರೂ ಬೋಲ್ಡ್ ಪಾತ್ರಗಳಲ್ಲಿಯೂ ಕಾಣಿಸಿಕೊಂಡು, ಮೈ ಚಳಿ ಬಿಟ್ಟು ನಟಿಸುತ್ತಾರೆ. ಇದೀಗ ಇದೇ ನಟಿ ಅವರ ವಯಸ್ಸಿನ ಅರ್ಧ ವಯಸ್ಸಿನ ಯುವಕನೊಂದಿಗೆ ಲಿಪ್​ಲಾಕ್​ ಮಾಡಿದ್ದಾರೆ. ಅಚ್ಚರಿ ಏನೆಂದರೆ ಆ ದೃಶ್ಯಗಳು, ಫೋಟೋಗಳು ಸದ್ಯ ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಿವೆ.

ಹೌದು, ನಟಿ ಟಬು ರೊಮ್ಯಾನ್ಸ್ ಮಾಡಿದ್ದು ಶಾಹಿದ್​ ಕಪೂರ್​ ಸಹೋದರ ಇಶಾನ್​ ಕಟ್ಟರ್​ ಜತೆಗೆ. ಇಶಾನ್​ ಕಟ್ಟರ್​ ವಯಸ್ಸು ಈಗಿನ್ನು 24. ಟಬುಗೆ 48. ಈ ಜೋಡಿಯೇ ಇದೀಗ ಆನ್​ಸ್ಕ್ರೀನ್​ ರೊಮ್ಯಾನ್ಸ್ ಮಾಡಿ ಸೆನ್ಸೆಷನ್​ ಸೃಷ್ಟಿಸಿದೆ. ಅಷ್ಟಕ್ಕೂ ಈ ರೊಮ್ಯಾನ್ಸ್ ನಡೆದಿದ್ದು, ‘ಎ ಸೂಟಬಲ್​ ಬಾಯ್​’ ಮಿನಿ ವೆಬ್​ಸಿರೀಸ್​ನಲ್ಲಿ.

ಮೀರಾ ನಾಯರ್ ನಿರ್ದೇಶನದ `ದಿ ಸೂಟಬಲ್ ಬಾಯ್’ ಎಂಬ ಚಿತ್ರದಲ್ಲಿ ಟಬು ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊಸದೇನಲ್ಲ. ಈಗಾಗಲೇ ಕೆಲವು ತಿಂಗಳುಗಳ ಹಿಂದೆಯೇ ಈ ಚಿತ್ರದ ಚಿತ್ರೀಕರಣವಾಗಿತ್ತು. ಈಗ ಆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಿಬಿಸಿ ಒನ್‍ಗಾಗಿ ಸಿದ್ಧವಾಗಿರುವ ಆರು ಏಪಿಸೋಡ್​ಗಳ ಈ ಮಿನಿಸೀರೀಸ್, ಇದೇ ತಿಂಗಳ 26ರಂದು ಸೀರೀಸ್‍ನ ಮೊದಲ ಕಂತು ಪ್ರಸಾರವಾಗಲಿದೆ.

ಸದ್ಯ ಬಿಡುಗಡೆಯಾಗಿರುವ ಟ್ರೇಲರ್​ನಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಿದ್ದು, ಒಟ್ಟಾರೆ ಈ ಸರಣಿಯಲ್ಲಿ ಟಬು ಮತ್ತು ನಾಯಕ ಇಶಾನ್ ಕಟ್ಟರ್ ನಡುವೆ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳಿವೆ ಎಂದು ಹೇಳಲಾಗುತ್ತಿದೆ. ಲಿಪ್​ಲಾಕ್​ ದೃಶ್ಯಗಳೂ ಹೇರಳವಾಗಿವೆ ಎಂಬುದು ಟ್ರೇಲರ್​ನಲ್ಲಿ ಗೊತ್ತಾಗಿದೆ.

ಖ್ಯಾತ ಕಾದಂಬರಿಕಾರ ವಿಕ್ರಮ್ ಸೇಠ್ ಅವರ ಅದೇ ಹೆಸರಿನ ಕಾದಂಬರಿಯನ್ನು ಈ ಸೀರೀಸ್ ಆಧರಿಸಿದ್ದು, ಆ್ಯಂಡ್ರೂ ಡೇವಿಸ್ ಅವರು ಚಿತ್ರಕಥೆ ರಚಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಖ್ಯಾತಿಯ ಭಾರತೀಯ ನಿರ್ದೇಶಕಿ ಮೀರಾ ನಾಯರ್​, ಈ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಇಶಾನ್ ಕಟ್ಟರ್, ಟಬು, ರಸಿಕಾ ದುಗ್ಗಲ್, ತಾನ್ಯಾ, ರಾಮ್ ಕಪೂರ್ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net