

ಬಾಲಿವುಡ್ ಅಂಗಳದಲ್ಲಿ ಡೇಟಿಂಗ್ ಅಥವಾ ಬ್ರೇಕಪ್ ಸಮಾಚಾರಗಳು ಹೊಸತಲ್ಲ. ಅದರಲ್ಲೂ ಸಿನಿಮಾ ಬಳಿಕ ಆ ಚಿತ್ರದ ನಟ, ನಟಿಯರು ಡೇಟ್ ಮಾಡುವ ಸುದ್ದಿಯಂತೂ ಸಾಮಾನ್ಯ ಆಗಿಬಿಟ್ಟಿದೆ. ಆದರೆ, ನಟಿ ಜಾಹ್ನವಿ ಕಪೂರ್ ನಟರನ್ನು ಡೇಟ್ ಮಾಡುವುದಿಲ್ಲವಂತೆ. ವಿಶೇಷ ಎಂದರೆ ಈ ಹಿಂದೆ ಜಾಹ್ನವಿ ಹಾಗೂ ಕಾರ್ತಿಕ್ ಆರ್ಯನ್ ಡೇಟ್ ಮಾಡುತ್ತಿದ್ದು, ಬಳಿಕ ಬ್ರೇಕಪ್ ಆಗಿದೆ ಎನ್ನಲಾಗಿತ್ತು. ಸದ್ಯ ಜಾಹ್ನವಿ, ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ ಶಿಖರ್ ಪಹಾರಿಯ ಜತೆ ರಿಲೇಶನ್ಶಿಪ್‌ನಲ್ಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ನಟ ಗಣೇಶ್ ಅಭಿನಯಿಸುತ್ತಿರುವ 41ನೇ ಚಿತ್ರಕ್ಕೆ ಇವರೇ ನಾಯಕಿ!
ಇತ್ತೀಚೆಗೆ ಈ ಬಗ್ಗೆ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಗುಟ್ಟು ರಟ್ಟು ಮಾಡಿರುವ ಜಾಹ್ನವಿ, ‘ಶಿಖರ್ ನನಗೆ ಮಾತ್ರವಲ್ಲ, ನನ್ನ ಕುಟುಂಬಕ್ಕು ಚಿರಪರಿಚಿತ. ಮೊದಲಿನಿಂದಲೂ ಒಳ್ಳೆಯ ಗೆಳೆಯ. ಅಂದಹಾಗೆ, ನಾನು ಇನ್ಯಾವತ್ತೂ ನಟರನ್ನು ಡೇಟ್ ಮಾಡಬಾರದು ಎಂದುಕೊಂಡಿದ್ದೇನೆ. ಈ ವೃತ್ತಿಯಲ್ಲಿರುವಾಗ ಹೆಚ್ಚಿನ ಸಮಯ ಇದಕ್ಕೇ ನೀಡಬೇಕಾಗುತ್ತದೆ. ಆದರೆ, ನನಗೆ ಹೆಚ್ಚಿನ ಸಮಯ ನೀಡುವವರ ಜತೆ ಇರಲು ನನಗಿಷ್ಟ. ಜತೆಗೆ ಇಬ್ಬರೂ ಒಂದೇ ಕ್ಷೇತ್ರದಲ್ಲಿದ್ದಾಗ ನಮ್ಮ ನಡುವೆಯೇ ಸ್ಪರ್ಧೆಯ ವಾತಾವರಣ ಸೃಷ್ಟಿಯಾಗುತ್ತದೆ. ಅದು ನಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಜಾಹ್ನವಿ ಜೂ. ಎನ್‌ಟಿಆರ್ ಅಭಿನಯದ ‘ದೇವರ’ ಚಿತ್ರದಲ್ಲಿ ಬಿಜಿಯಿದ್ದು, ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಜತೆಗೆ ‘ಮಿಸ್ಟರ್ ಆೃಂಡ್ ಮಿಸಸ್ ಮಾಹಿ’, ‘ಉಲಜ್’ ಸಿನಿಮಾಗಳು ಲೈನಪ್ ಆಗಿವೆ.