ಪುರುಷರಿಗೂ ಪೀರಿಯಡ್ಸ್​ ಆಗುವಂತಿದ್ದರೆ ಅಣುಯುದ್ಧವೇ ಆಗಿಬಿಡುತ್ತಿತ್ತು ಎಂದ ಖ್ಯಾತ ನಟಿ!

zsc
Published on

ಬಾಲಿವುಡ್​ ನಟಿ ಜಾಹ್ನವಿ ಕಪೂರ್​ ಆಗಾಗ ಬೋಲ್ಡ್​ ನಟನೆ, ಫ್ಯಾಷನ್​ ಜತೆಗೆ ಬೋಲ್ಡ್​ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಅದಕ್ಕೆ ಸಾ ಎಂಬಂತೆ ಇತ್ತೀಚೆಗಷ್ಟೆ ಅವರು ಮಹಿಳೆಯರ ಪೀರಿಯಡ್ಸ್​ ಮತ್ತು ಆ ಸಂದರ್ಭದಲ್ಲಿ ಅನುಭವಿಸುವ ಹೊಟ್ಟೆನೋವು, ಮೂಡ್​ ಸ್ವಿಂಗ್​ಗಳ ಬಗ್ಗೆ ಮಾತನಾಡಿದ್ದಾರೆ.

"ಮುಟ್ಟಿನ ಸಮಯದಲ್ಲಿ ಕೆಲವೊಮ್ಮೆ ಮೂಡ್​ ಸ್ವಿಂಗ್​ಗಳಾದಾಗ ಮಹಿಳೆಯರು ಕಿರಿಕಿರಿಯಾಗಿ ಮಾತನಾಡುವುದು ಅಥವಾ ಜಗಳಕ್ಕಿಳಿಯುವುದು ಸಾಮಾನ್ಯ. ಆಗ ಪುರುಷರು ಕಾಳಜಿಯಿಂದ ಪ್ರತಿಕ್ರಿಯಿಸುವುದು ಉತ್ತಮ. ಬದಲಾಗಿ ಕಿರಿಕಿರಿಯಾಗುವಂತೆಯೇ ಯಾಕೆ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಆದರೆ, ಒಂದು ಮಾತಂತೂ ಸತ್ಯ. ಮುಟ್ಟಿನ ಸಮಯದಲ್ಲಿ ನಾವು ಎದುರಿಸುವ ನೋವು ಮತ್ತು ಮೂಡ್​ ಸ್ವಿಂಗ್​ಗಳನ್ನು ಪುರುಷರು ಒಂದು ನಿಮಿಷವೂ ತಡೆದುಕೊಳ್ಳಲ್ಲ. ಹಾಗೇನಾದರೂ ಗಂಡಸರಿಗೂ ಮುಟ್ಟಾಗುವಂತಿದ್ದರೆ ಇಷ್ಟರಲ್ಲಿ ನ್ಯೂಕ್ಲಿಯರ್​ ಯುದ್ಧಗಳೇ ನಡೆದುಹೋಗುತ್ತಿದ್ದವು' ಎಂದಿದ್ದಾರೆ ಜಾಹ್ನವಿ.

ಅವರ ಈ ಮಾತು ಸದ್ಯ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜಾಹ್ನವಿ ಕಪೂರ್​ ಬೋಲ್ಡ್​ ಹೇಳಿಕೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ "ಉಲಝ್​', "ಮಿ. ಆ್ಯಂಡ್​ ಮಿಸಸ್​ ಮಹಿ' ಹಾಗೂ "ದೇವರ 1' ಚಿತ್ರಗಳಲ್ಲಿ ನಟಿಸಿದ್ದ ಜಾಹ್ನವಿ, ಸದ್ಯ "ಸನ್ನಿ ಸಂಸ್ಕಾರಿ ಕೀ ತುಳಸಿ ಕುಮಾರಿ', "ಪರಮ ಸುಂದರಿ' ಹಾಗೂ "ಪೆದ್ದಿ' ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net